ರಾಜ್ಯದ ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿತ ಕರಾರುಗಳ ದೃಢೀಕೃತ ನಕಲು (ಸರ್ಟಿಫೈಡ್) ದಾಖಲೆಗಳು ಸಾಮಾನ್ಯ ಜನರಿಗೆ ಕೈಗೆಟುಕುವುದಿಲ್ಲ. ಬದಲಿಗೆ ಏಜೆಂಟ್ ಅಥವಾ ಸೈಬರ್ ಸೆಂಟರ್​ಗಳ ಮೊರೆ ಹೋಗಿ ದುಪ್ಪಟ್ಟು ಹಣ ನೀಡಿ ಪಡೆದುಕೊಳ್ಳಬೇಕಾಗಿದೆ.
ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಪಡೆಯುವ ಸೇವೆಯನ್ನು ರದ್ದು ಮಾಡಲಾಗಿದ್ದು, 2004ರ ನಂತರ ನೋಂದಣಿ ಆಗಿರುವ ಎಲ್ಲ ದಾಖಲೆಗಳ ನಕಲು ಪ್ರತಿಗಳನ್ನು ಇನ್ಮುಂದೆ ಆನ್​ಲೈನ್​ನಲ್ಲಿಯೇ ಪಡೆಯಬೇಕಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಈ ನಿರ್ಧಾರದಿಂದ ಸಾಮಾನ್ಯ ಜನ ಪರದಾಡಬೇಕಿದೆ.
ಆನ್​ಲೈನ್​ನಲ್ಲಿ ಮಾತ್ರ: ರಾಜ್ಯದ 250 ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿ ಕ್ರಯ, ಮಾರಾಟ ಕರಾರು, ವರ್ಗಾವಣೆ ಪತ್ರ, ಅಡಮಾನ ಪತ್ರ, ಮದುವೆ ನೋಂದಣಿ ಸೇರಿ ಹಲವು ಕರಾರುಗಳು ನಿತ್ಯ ಸಾವಿರಾರು ನಡೆಯುತ್ತವೆ. 2004ರ ನಂತರ ನೋಂದಣಿ ದಾಖಲೆಗಳನ್ನು ಸ್ಕಾ್ಯನ್ ಮಾಡಿ ಸರ್ವರ್​ನಲ್ಲಿ ಸಂಗ್ರಹಿಸಲಾಗಿದೆ. ಅದಕ್ಕೂ ಮೊದಲು ನೋಂದಣಿ ಆಗಿರುವ ಕರಾರು ದಾಖಲೆಗಳು ಕಾಗದ ರೂಪದಲ್ಲಿವೆ. ದೃಢೀಕೃತ ನಕಲು ಪ್ರತಿ ಪಡೆಯಲು ಸಂಬಂಧಪಟ್ಟ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಅಥವಾ ಆನ್​ಲೈನ್​ನಲ್ಲಿ ಅರ್ಜಿ ಹಾಕಿ ನಿಗದಿತ ಶುಲ್ಕ ಪಾವತಿ ಮಾಡಿ ಪಡೆಯಲು ಅವಕಾಶವಿತ್ತು. ಇದೀಗ 2004ರ ನಂತರದ ನೋಂದಾಯಿತ ದಾಖಲೆಗಳ ದೃಢೀಕೃತ ಪತ್ರಗಳನ್ನು ಪಡೆಯ ಬೇಕಾದರೆ ಕಾವೇರಿ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಬೇಕು. ಸಂಬಂಧಪಟ್ಟ ಸಬ್​ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳು ಅರ್ಜಿ ಪರಿಶೀಲನೆ ನಡೆಸಿದ ಬಳಿಕ ಮೂರ್ನಾಲ್ಕು ದಿನಗಳ ನಂತರ ಸರ್ವರ್​ನಲ್ಲಿ ಅಪ್​ಲೋಡ್ ಮಾಡುತ್ತಾರೆ.
ಆಫ್​ಲೈನ್ ಸೇವೆ ಅಗತ್ಯವೇಕೆ?
ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ದೃಢೀಕೃತ ನಕಲು ಪ್ರತಿ ಪಡೆಯಲು ಆಫ್​ಲೈನ್, ಆನ್​ಲೈನ್ ಸೇವೆ ಇತ್ತು. ಕಂಪ್ಯೂಟರ್ ಜ್ಞಾನ ಇಲ್ಲದವರು ನೇರವಾಗಿ ಕಚೇರಿಗೆ ಬಂದು ದಾಖಲೆ ನೋಂದಣಿ ಸಂಖ್ಯೆ, ದಿನಾಂಕ , ಹೆಸರು ಕೊಟ್ಟು ನಿಗದಿತ ಶುಲ್ಕ ತುಂಬಿ ಕೆಲವೇ ನಿಮಿಷಗಳಲ್ಲಿ ನಕಲು ಪ್ರತಿ ಪಡೆಯುತ್ತಿದ್ದರು. ಆದರೆ, ಇದೀಗ ಅನಿವಾರ್ಯವಾಗಿ ಕಾವೇರಿ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಲು ಸೈಬರ್ ಸೆಂಟರ್ ಮೊರೆ ಹೋಗಬೇಕಾಗಿದೆ. ದುಪ್ಪಟ್ಟು ಹಣ ಕೊಟ್ಟು ದಾಖಲೆ ಪಡೆಯಬೇಕಿದೆ. ನಾಡ ಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್​ಗಳಲ್ಲಿ ಕಾವೇರಿ ವೆಬ್​ಸೈಟ್ ಸೇವೆ ದೊರಕುವ ಕುರಿತು ಯಾವುದೇ ಸ್ಪಷ್ಟನೆ ಇಲ್ಲ.
ಸಾಮರ್ಥ್ಯವಿಲ್ಲ
ಆನ್​ಲೈನ್ ಸೇವೆ ಒದಗಿಸಲು ಕಾವೇರಿ ತಂತ್ರಾಂಶ ಮತ್ತು ಸಬ್​ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬಳಸುತ್ತಿರುವ ಕಂಪ್ಯೂಟರ್​ಗಳು ಹೆಚ್ಚಿನ ಸಾಮರ್ಥ್ಯ ಹೊಂದಿಲ್ಲ. ದಿನವೊಂದಕ್ಕೆ 1 ಸಬ್​ರಿಜಿಸ್ಟ್ರಾರ್ ಕಚೇರಿಗೆ ಅಂದಾಜು 20 ರಿಂದ 25 ದೃಢೀಕೃತ ನಕಲು ಪ್ರತಿಗೆ ಅರ್ಜಿ ಬರುತ್ತಿವೆ. ಅಷ್ಟು ಅರ್ಜಿಗಳನ್ನು ವಿಲೇವಾರಿ ಮಾಡುವಷ್ಟು ಶಕ್ತವಾಗಿಲ್ಲ. ಇದರಿಂದ ಅಧಿಕಾರಿ, ಸಿಬ್ಬಂದಿ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾಗಲಿದೆ. ಮೊದಲ ರೀತಿ ಆನ್​ಲೈನ್ ಮತ್ತು ಆಫ್​ಲೈನ್ ಎರಡೂ ಸೇವೆ ಇದ್ದರೇ ಒಳಿತು ಎಂದು ಅಧಿಕಾರಿಗಳೇ ಹೇಳುತ್ತಾರೆ.
ಸಹಿ ಗೊಂದಲ
ಬ್ಯಾಂಕ್​ಗಳಲ್ಲಿ ಸಾಲ ಪಡೆಯಲು, ಕೋರ್ಟ್​ಗೆ ದಾಖಲೆ ಒದಗಿಸಲು ಅಥವಾ ಆಸ್ತಿ ಕ್ರಯದ ವೇಳೆ ದೃಢೀಕೃತ ದಾಖಲೆಗಳಿಗೆ ಹೆಚ್ಚು ಬಳಕೆ ಮಾಡಲಾಗುತ್ತದೆ. ಕೆಲ ಬ್ಯಾಂಕು ಮತ್ತು ಕೋರ್ಟ್​ಗಳಲ್ಲಿ ಡಿಜಿಟಲ್ ಸಹಿಯನ್ನು ಮಾನ್ಯ ಮಾಡುತ್ತಿಲ್ಲ. ಮತ್ತೆ ಸಬ್​ರಿಜಿ ಸ್ಟ್ರಾರ್ ಸಹಿ ಮತ್ತು ಸೀಲು ಹಾಕಿಸುವ ಅನಿವಾರ್ಯತೆ ಇದೆ.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − 5 =
Remember me
