| ಕೀರ್ತಿನಾರಾಯಣ.ಸಿ ಬೆಂಗಳೂರುರಸಗೊಬ್ಬರವನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿ, ದುರ್ಬಳಕೆ ತಡೆಯಲು ಕೇಂದ್ರ ಸರ್ಕಾರ ಕಠಿಣ ನಿಯಮಾವಳಿ ರೂಪಿಸಿದ್ದರೂ ಕೃಷಿಯೇತರ ಚಟುವಟಿಕೆಗೆ ಬಳಸಲು ರಸಗೊಬ್ಬರ ಕಳ್ಳಸಾಗಾಣಿಕೆ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆ ಇನ್ನೂ ನಿಂತಿಲ್ಲ!
ರೈತರಿಗೆ ಕೊಡುವ ಸಬ್ಸಿಡಿಯ ಯೂರಿಯಾ ಸೇರಿ ಇನ್ನಿತರ ರಸಗೊಬ್ಬರವನ್ನು ಕೈಗಾರಿಕಾ ಉದ್ದೇಶಕ್ಕಾಗಿ ದೊಡ್ಡ ಖಾಸಗಿ ಸಂಸ್ಥೆಗಳು ಅಕ್ರಮವಾಗಿ ಖರೀದಿಸಿ ಬಳಸುತ್ತಿದ್ದು, ದಂಧೆಯಲ್ಲಿ ಗೊಬ್ಬರ ತಯಾರಿಕಾ ಘಟಕಗಳೇ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಫ್ಲೈವುಡ್ ತಯಾರಿಕಾ ಸಂಸ್ಥೆಗಳಿಗೆ ಗಮ್ (ಅಂಟು) ಆಗಿ ಬಳಸಲು, ಪಶು ಹಾಗೂ ಕೋಳಿ ಆಹಾರದಲ್ಲಿ ಬೆರೆಸಲು, ಹಾಲು ಕಲಬೆರೆಕೆಗೆ, ಸಿಗರೇಟ್​ನಲ್ಲಿ ಪರಿಮಳ ಹೆಚ್ಚಿಸಲು, ಹೇರ್ ಕಂಡೀಷನರ್, ಬಾತ್​ರೂಮ್ ಕ್ಲೀನರ್, ಬಾತ್ ಆಯಿಲ್, ಲೋಷನ್​ಗಳಲ್ಲಿ ಬಳಕೆ ಮಾಡಲು ಕಳ್ಳದಾರಿಯಲ್ಲಿ ರಸಗೊಬ್ಬರ ಸಂಗ್ರಹಿಸಲಾಗುತ್ತದೆ. ಭಾರತದಲ್ಲಿ ಉತ್ಪಾದಿತ ರಸಗೊಬ್ಬರವನ್ನು ಬೇರೆಬೇರೆ ರಾಜ್ಯಗಳಲ್ಲಿ ದುರ್ಬಳಕೆ ಮಾಡಿಕೊಳ್ಳುವುದರ ಜತೆಗೆ ದೊಡ್ಡ ಪ್ರಮಾಣದಲ್ಲಿ ಹೊರದೇಶಗಳಿಗೂ ಕಳ್ಳಸಾಗಾಣಿಕೆ ಮಾಡುತ್ತಿರುವ ಜಾಲಗಳು ಸಕ್ರಿಯವಾಗಿವೆ.
ರಸಗೊಬ್ಬರ ಅಕ್ರಮ ದಂಧೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವೇ ಫರ್ಟಿಲೈಸರ್ ಫ್ಲೈಯಿಂಗ್ ಸ್ಕಾ್ವಡ್ (ಎಫ್​ಎಫ್​ಎಸ್) ರಚಿಸಿಲಾಗಿದೆ. ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ರಸಗೊಬ್ಬರ ನಿಯಂತ್ರಣ 1985 (ಎಫ್​ಸಿಒ) ನಿಯಮಗಳನ್ನು ಉಲ್ಲಂಘಿಸುವ ಕಂಪನಿಗಳು ಹಾಗೂ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಈ ಸ್ಕಾ್ವಡ್​ಗೆ ಇದೆ. 2022ರ ಏಪ್ರಿಲ್​ನಿಂದ 2023ರ ಆ.4ರವರೆಗೆ ದೇಶಾದ್ಯಂತ 363 ರಸಗೊಬ್ಬರ ಮಿಶ್ರಣ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ.
ಕಳ್ಳಸಾಗಾಣಿಕೆ, ಸ್ಮಗ್ಲಿಂಗ್ ಹಾಗೂ ಕಳಪೆ ಗುಣಮಟ್ಟದ ಗೊಬ್ಬರ ಪೂರೈಸಿದ ಆರೋಪದಲ್ಲಿ 32 ಕಂಪನಿಗಳ ಪರವಾನಗಿಯನ್ನೇ ರದ್ದುಪಡಿಸಲಾಗಿದೆ. 32 ಕಂಪನಿಗಳಿಗೆ ಶೋಕಾಸ್ ನೋಟಿಸ್ ಕೊಟ್ಟಿದ್ದು, ಕರ್ನಾಟಕದ 1 ಕಂಪನಿ ಸೇರಿ 2 ಕಂಪನಿಗಳ ವಿರುದ್ಧ ಕ್ರಿಮಿನಲ್ ಸೆಕ್ಷನ್​ಗಳಡಿ ಎಫ್​ಐಆರ್​ಗಳು ದಾಖಲಾಗಿರುವುದು ರಸಗೊಬ್ಬರ ದಂಧೆಗೆ ಸಾಕ್ಷಿಯಾಗಿದೆ.
ಕಳೆದ 16 ತಿಂಗಳಲ್ಲಿ ಕರ್ನಾಟಕದಲ್ಲಿರುವ 42 ಮಿಶ್ರಣ ತಯಾರಿಕಾ ಘಟಕಗಳ ಮೇಲೆ ಫ್ಲೈಯಿಂಗ್ ಸ್ಕಾ್ವಡ್ ದಾಳಿ ಮಾಡಿದೆ. ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ 2 ಕಂಪನಿಗಳ ಪರವಾನಗಿ ರದ್ದುಪಡಿಸಿದ್ದು, ಇಂಟಿಗ್ರೇಟೆಡ್ ಫರ್ಟಿಲೈಸರ್ ಮ್ಯಾನೇಜ್​ವೆುಂಟ್ ಸಿಸ್ಟಂ (ಐಎಫ್​ಎಂಎಸ್)ನಿಂದ 20 ಘಟಕಗಳನ್ನು ಅನಧಿಕೃತಗೊಳಿಸಿದೆ. ಅಲ್ಲದೆ 13 ಘಟಕಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ರಸಗೊಬ್ಬರ ಕಳ್ಳಸಾಗಾಣಿಕೆ ಹಾಗೂ ಕಾಳಸಂತೆಯಲ್ಲಿ ಮಾರಾಟ ತಡೆಗೆ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿಯಮ ಪಾಲಿಸದೆ ರಸಗೊಬ್ಬರ ದುರ್ಬಳಕೆ ಸಾಬೀತಾದ ಹಿನ್ನೆಲೆಯಲ್ಲಿ 13 ಮಿಕ್ಸಿಂಗ್ ಕಂಪನಿಗಳ ಪರವಾನಗಿ ರದ್ದುಪಡಿಸಲಾಗಿದೆ. ಕೆಲ ಕಂಪನಿಗಳು ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ಪಡೆದಿವೆ.
| ಪಾಟೀಲ್ ಯಲಗೌಡ ಶಿವನಗೌಡ, ಕೃಷಿ ಇಲಾಖೆ ಆಯುಕ್ತ
ಕಳ್ಳಾಟ ಏಕೆ?:ಬೇವುಲೇಪಿತ ಯೂರಿಯಾ 45 ಕೆ.ಜಿ. ಚೀಲಕ್ಕೆ ಮಾರುಕಟ್ಟೆ ಬೆಲೆ ಅಂದಾಜು 2,500 ರೂ.ವರೆಗೂ ಇದೆ. ರೈತರಿಗೆ ರಿಯಾಯಿತಿ ದರದಲ್ಲಿ 266 ರೂ.ಗೆ ಕೊಡಲಾಗು ತ್ತದೆ. ಇದೇ ಕಾರಣಕ್ಕೆ ರೈತರ ಹೆಸರಲ್ಲಿ ಯೂರಿಯಾ ಖರೀದಿಸಿ ಕಳ್ಳಮಾರ್ಗದಲ್ಲಿ ಮಾರಾಟ ಮಾಡಲಾಗುತ್ತದೆ. ಉತ್ಪಾದಿತ ಕಂಪನಿಗಳು ಶಾಮೀಲಾಗಿ ಗೊಬ್ಬರವನ್ನು ಬೇರೆಡೆಗೆ ಕಳುಹಿಸಲಾಗುತ್ತದೆ.
ಗುಜರಾತ್, ಹರಿಯಾಣದಲ್ಲಿ ಜಾಸ್ತಿ!:ಯೂರಿಯಾ ದುರ್ಬಳಕೆ ಗುಜರಾತ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಹೆಚ್ಚಿರುವುದು ಕಂಡುಬಂದಿದೆ. ಯೂರಿಯಾ ಬಳಸುವ ಗುಜರಾತ್​ನ 43 ಹಾಗೂ ಹರಿಯಾಣದ 21 ಕಂಪನಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ. ಬ್ಲಾ್ಯಕ್​ವಾರ್ಕೆಟ್​ನಲ್ಲಿ ಯೂರಿಯಾ ಖರೀದಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಗುಜರಾತ್​ನ 25 ಹಾಗೂ ಹರಿಯಾಣದ 13 ಕಂಪನಿಗಳ ವಿರುದ್ಧ ಎಫ್​ಐಆರ್​ಗಳು ದಾಖಲಾಗಿವೆ. ಉಳಿದಂತೆ ಕೇರಳದ 2, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ತಲಾ 1 ಬಿಹಾರದ 3 ಕಂಪನಿ ಸೇರಿ ಒಟ್ಟು 45 ಎಫ್​ಐಆರ್​ಗಳು ದಾಖಲಾಗಿವೆ.
ಸಿನಿಮಾದ ಹಲವರಿಗೆ ಸಾಹಿತ್ಯದ ಅರಿವಿಲ್ಲ; ನೀವಂದ್ಕೊಂಡಷ್ಟು ಮೂರ್ಖರಲ್ಲ ಸಿನಿಮಾದವರು: ಸಾಹಿತಿ-ನಿರ್ದೇಶಕರ ಮಧ್ಯೆ ಜಾತಿಸಂಘರ್ಷ

ಹೋಮ್​ವರ್ಕ್ ಮಾಡಿಲ್ಲ ಎಂದು ಟೀಚರ್ ಹೊಡೆದ ಏಟಿಗೆ ವಿದ್ಯಾರ್ಥಿಯ ಜೀವವೇ ಹೋಯ್ತು!; ಹೊಡೆದಿದ್ದಾದರೂ ಹೇಗೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × one =
Remember me
