ಬೆಂಗಳೂರು:ಡಿಜಿಟಲೀಕರಣ ಹೆಚ್ಚುತ್ತಿರುವಂತೆ ಸೈಬರ್ ಕಳ್ಳತನ, ವೈಯಕ್ತಿಕ ಮಾಹಿತಿ ಸೋರಿಕೆಯ ಪ್ರಕರಣ ವ್ಯಾಪಕವಾಗುತ್ತಿದೆ. ಹೀಗಾಗಿ ಜನಸಾಮಾನ್ಯರಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ಮತ್ತು ಸೂಕ್ತ ಗಮನ ಕೊಡಲು ‘ಕರ್ನಾಟಕ ಸೈಬರ್ ಭದ್ರತಾ ನೀತಿ’ಯನ್ನು ಅಳವಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನೀತಿಯ ಅಂಶಗಳು ಪ್ರಸ್ತಾಪವಾಗಿದ್ದು, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ನೀತಿಯ ಅಗತ್ಯತೆಯನ್ನು ಸಂಪುಟ ಸಹೋದ್ಯೋಗಿಗಳಿಗೆ ಮನವರಿಕೆ ಮಾಡಿಕೊಟ್ಟರು.
ನೀತಿಯ ಪ್ರಮುಖ ಸಂಗತಿ:ರಾಜ್ಯ ಸರ್ಕಾ ರದ ನೇತೃತ್ವದಲ್ಲಿ ನಡೆಯುವ ಹೊಸ ತಂತ್ರಾಂಶಗಳ ಪ್ರಾರಂಭ, ಆನ್​ಲೈನ್ ಬ್ಯಾಂಕಿಂಗ್ ಮತ್ತು ತಾಂತ್ರಿಕ ಸಾಕ್ಷರತೆ ಕಾರ್ಯಕ್ರಮಗಳು, ಸೈಬರ್ ಭದ್ರತೆ, ಜಾಗೃತಿ, ತರಬೇತಿ ನೀಡುವುದನ್ನು ನೀತಿ ಒಳಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಸಂಪುಟ ಸಭೆಯ ನಿರ್ಧಾರವನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಸೈಬರ್ ಭದ್ರತೆಯನ್ನು ಮತ್ತು ದತ್ತಾಂಶ ಖಾಸಗಿತನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸುವುದು, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು, ಪಂಚಾಯಿತಿಗಳು ಈ ಜಾಗೃತಿ ಕಾರ್ಯಕ್ರಮವನ್ನು ಕಾಲಕಾಲಕ್ಕೆ ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸುವುದು, ಜತೆಗೆ ಈ ಪ್ರಯತ್ನದ ಮೌಲ್ಯಮಾಪನ, ಸಾಮಾಜಿಕ ಜಾಲತಾಣಗಳು ಪರಸ್ಪರ ಸಂಪರ್ಕ ತಂತ್ರಜ್ಞಾನ ಔದ್ಯಮಿಕ ಸಹಭಾಗಿತ್ವ ದೊಂದಿಗೆ ಕಾರ್ಯಕ್ರಮ ಕೈಗೊಳ್ಳುವುದು ನೀತಿಯಲ್ಲಿ ರುವ ಪ್ರಮುಖ ಪ್ರಸ್ತಾಪಗಳಾಗಿವೆ.
ಇದರೊಟ್ಟಿಗೆ, ಪ್ರಸ್ತುತ ಸೈಬರ್ ಭದ್ರತೆ ಮತ್ತು ದತ್ತಾಂಶ ಖಾಸಗಿತನದ ಕುರಿತು ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಸ್ಥಳೀಯ, ಶೈಕ್ಷಣಿಕ ಸಂಸ್ಥೆಗಳು, ಸ್ವಯಂಸೇವಾ ಕಾರ್ಯಕರ್ತರ ಮೂಲಕ ಜಾಗೃತಿ ಮೂಡಿಸಲು ವಿಕೇಂದ್ರಿತ ಕ್ರಮ ಕೈಗೊಳ್ಳಲಾಗುತ್ತದೆ.
ಸಿಎಂ, ಡಿಸಿಎಂ ಮೇಲಿನ ಕ್ರಿಮಿನಲ್ ಕೇಸ್ ವಾಪಸ್:ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಂಬತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಸರ್ಕಾರ ಹಿಂಪಡೆದಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲಿದ್ದ ಪ್ರಕರಣವೂ ಸೇರಿದೆ. ಮೇಕೆದಾಟು ಪಾದಯಾತ್ರೆ ಹಾಗೂ ಇತರೆ ಕೆಲ ಪ್ರಕರಣಗಳನ್ನು ಸೇರಿದಂತೆ ಒಟ್ಟು ಒಂಬತ್ತು ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ನಿಟ್ಟಿನಲ್ಲಿ ಉಚ್ಚ ನ್ಯಾಯಾಲಯದ ಅನುಮತಿಗೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಸಚಿವ ಸಂಪುಟ ಉಪ ಸಮಿತಿ ಶಿಫಾರಸು ಮಾಡಿತ್ತು. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ ಕಾರಣಕ್ಕೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ ಇತರ ನಾಯಕರ ಮೇಲೆ ತಹಸೀಲ್ದಾರರು ಪ್ರಕರಣ ದಾಖಲಿಸಿದ್ದರು. ಈ ಒಂಬತ್ತು ಪ್ರಕರಣದಲ್ಲಿ ಯಾವುದೇ ಕೋಮು ಗಲಭೆಯ ಪ್ರಕರಣ ಇಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಎಸ್​ಸಿಪಿ- ಟಿಎಸ್​ಪಿ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲು ಕ್ಷೇತ್ರಗಳಲ್ಲಿ ಖಾಸಗಿ ಸಹಭಾಗಿತ್ವ ದಲ್ಲಿ 20 ಸಂಚಾರಿ ಆರೋಗ್ಯ ಘಟಕ ಗಳನ್ನು -ಠಿ;20 ಕೋಟಿ ವೆಚ್ಚದಲ್ಲಿ ಸ್ಥಾಪಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. 2019ರ ಡಿಸೆಂಬರ್ 30ರಂದು ನಡೆದ ಸಂಪುಟ ಸಭೆ ನೀಡಿದ ಅನುಮೋದನೆಯಂತೆ 2022ರ ಏಪ್ರಿಲ್ 20ರಲ್ಲಿ ಹೊರಡಿಸಿದ್ದ ಆದೇಶ ರದ್ದುಗೊಳಿಸಲು ಸರ್ಕಾರ ಬಯಸಿದೆ. ಗ್ರಾಮ ಮಟ್ಟದಲ್ಲಿ ಸಂಚಾರಿ ಆರೋಗ್ಯ ಘಟಕಗಳ ಸೇವೆಯನ್ನು ನೀಡುವುದು ಇದರ ಉದ್ದೇಶವಾಗಿದೆ.
1) ತಾಳೆ ಎಣ್ಣೆ ಬದಲು ಸೂರ್ಯಕಾಂತಿಅಂಗನವಾಡಿ ಕೇಂದ್ರಗಳ ಫಲಾನುಭವಿ ಗಳಿಗೆ ಪೂರಕ ಪೌಷ್ಠಿಕ ಆಹಾರ ತಯಾರಿಕೆಗೆ ತಾಳೆ ಎಣ್ಣೆಯ (ಪಾಮೋಲಿನ್) ಬದಲು ಸೂರ್ಯಕಾಂತಿ ಎಣ್ಣೆ ಬಳಸಲು ನಿರ್ಧಾರ.
2) ರಾಜ್ಯದ 15 ಆಸ್ಪತ್ರೆಗಳಲ್ಲಿ ಎಂಆರ್​ಐಹದಿನೈದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಗಳಲ್ಲಿ ಎಂಆರ್​ಐ ಮತ್ತು 5 ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ ಸ್ಕಾ್ಯನ್ ಸೇವೆ ಹೆಚ್ಚುವರಿಯಾಗಿ ಒದಗಿಸಲು ಒಪ್ಪಿಗೆ.
3) ಬಸ್ ಟ್ರ್ಯಾಕಿಂಗ್​ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನ ಗಳಲ್ಲಿ ವೆಹಿಕಲ್ ಟ್ರಾ್ಯಕಿಂಗ್ ಹಾಗೂ ಪ್ಯಾನಿಕ್ ಬಟನ್ ವ್ಯವಸ್ಥೆಯೊಂದಿಗೆ ಕಂಟ್ರೋಲ್ ರೂಂ ಸ್ಥಾಪನೆಗೆ ಕ್ರಮ.
4) 23 ತಾಲೂಕು ಕರಾವಳಿ ವ್ಯಾಪ್ತಿಗೆಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿ ಎಂದು ಬದಲಿಸಲು ನಿರ್ಧರಿಸಿದ್ದು, ಎಂಎಡಿಬಿ ಯಲ್ಲಿದ್ದ 23 ತಾಲೂಕುಗಳನ್ನು ಈ ಮಂಡಳಿ ವ್ಯಾಪ್ತಿಗೆ ತರಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
