ಬೆಂಗಳೂರು:ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಜೂ.21ರಂದು ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಗಿಫ್ಟ್ ನೀಡುವ ಸಂಕಲ್ಪವನ್ನು ರಾಜ್ಯ ಬಿಜೆಪಿ ಕೈಗೊಂಡಿದೆ.
ಖಾಸಗಿ ಹೋಟೆಲ್​ವೊಂದರಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕರು ಈ ಸಂಕಲ್ಪ ಮಾಡಿದಾಗ ಶಾಸಕರು ದನಿಗೂಡಿಸಿ, ಒಗ್ಗಟ್ಟಿನ ಬಲ ಪ್ರದರ್ಶಿಸುವ ಉತ್ಸಾಹ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳ ಕೂಡುವ, ಕಳೆಯುವ ಲೆಕ್ಕಾಚಾರಗಳೇನೇ ಇರಲಿ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ, ಪಕ್ಷಕ್ಕಿರುವ ಬಲ, ಪ್ರಾಶಸ್ಱದ ಮತಗಳ ಅನುಸಾರ ಪೂರಕ ವಾತಾವರಣವಿದೆ. ಒಗ್ಗಟ್ಟಿನ ಬಲದೊಂದಿಗೆ ಮೂರು ಅಭ್ಯರ್ಥಿಗಳು ಜಯಶಾಲಿಯಾಗುವಂತೆ ಮಾಡಿ ಮುಂದಿನ ಚುನಾವಣೆಗಳಿಗೆ ಒಳ್ಳೆಯ ಸಂದೇಶ ಕಳುಹಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಕೋಟಾದ ಪ್ರಕಾರ ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಮೂವರ ಬಳಿಯೂ ಮತಗಳ ಕೊರತೆಯಿರುವ ಕಾರಣ ಪ್ರಾಶಸ್ಱ ಗಣನೆಗೆ ಶುರುವಾಗಿ ಎಲಿಮಿನೇಷನ್ ಪ್ರಕ್ರಿಯೆ ಶುರುವಾಗುತ್ತದೆ. ಎಲಿಮಿನೇಷನ್ ಆದವರ ಮತಗಳು ವರ್ಗಾವಣೆಯಾಗಲಿವೆ. ಮತದಾನ ಪ್ರಕ್ರಿಯೆ ಮತ್ತು ಎಣಿಕೆ ಮುಗಿಯುವ ತನಕ ನಿಚ್ಚಳ ಫಲಿತಾಂಶ ಕಾಯಬೇಕಾಗುತ್ತದೆ. ಸದ್ಯದ ಬಲದಂತೆ ಮೊದಲ, ಎರಡನೇ ಪ್ರಾಶಸ್ಱ ಮತಗಳು ಚಲಾವಣೆಯಾದರೆ ಪಕ್ಷ ಮೂರೂ ಸ್ಥಾನಗಳನ್ನು ಗೆಲ್ಲಲಿದ್ದು, ಎಲ್ಲರೂ ಕಡ್ಡಾಯವಾಗಿ ಹಾಜರಾಗಿ ಮತ ಚಲಾಯಿಸಬೇಕು ಎಂದು ಶಾಸಕರಿಗೆ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಮೂವರಿಗೆ ಜವಾಬ್ದಾರಿ ಹಂಚಿಕೆ:ಯಾವ ಅಭ್ಯರ್ಥಿಗೆ ಯಾರು ಮತ ಚಲಾಯಿಸಬೇಕು ಎಂದು ಈ ಸಭೆಯಲ್ಲಿ ತಾತ್ಕಾಲಿಕವಾಗಿ ಶಾಸಕರನ್ನು ಹಂಚಿಕೆ ಮಾಡಿ, ಪ್ರಾಯೋಗಿಕ ಮಾಹಿತಿ ನೀಡಲಾಗಿದೆ. ನಿರ್ಮಲಾ ಸೀತಾರಾಮನ್ ಸಹಿತ ಮೂವರು ಅಭ್ಯರ್ಥಿಗಳ ಸಮಕ್ಷಮ ಗುರುವಾರ ಸಂಜೆ ನಡೆಯಲಿರುವ ಮತ್ತೊಂದು ಸುತ್ತಿನ ಸಭೆಯಲ್ಲಿ ಈ ಪಟ್ಟಿ ಅಂತಿಮವಾಗಲಿದೆ. ಇದೇ ಸಂದರ್ಭದಲ್ಲಿ ಸಚಿವರಾದ ಆರ್.ಅಶೋಕ್, ವಿ.ಸುನಿಲ್​ಕುಮಾರ್ ಮತ್ತು ಬಿ.ಸಿ.ನಾಗೇಶ್ ಅವರಿಗೆ ಜವಾಬ್ದಾರಿಯನ್ನು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಕಿಶನ್​ರೆಡ್ಡಿ ಹಂಚಿದರು ಎಂದು ಮೂಲಗಳು ತಿಳಿಸಿವೆ. ಮೂರು ತಂಡಗಳಲ್ಲಿ ಶಾಸಕರನ್ನು ವಿಧಾನಸೌಧಕ್ಕೆ ಕರೆ ತಂದು ಸೂಚಿಸಿದ ಅಭ್ಯರ್ಥಿಗಳಿಗೆ ಮತ ಹಾಕಿಸುವುದು ಸಚಿವತ್ರಯರ ಹೊಣೆಗಾರಿಕೆಯಾಗಿದೆ. ವಿಧಾನ ಪರಿಷತ್ ನಾಲ್ಕು ಕ್ಷೇತ್ರಗಳ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿರುವ ಕಾರಣಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ ಶೆಟ್ಟರ್ ಸೇರಿ ಹಲವು ಸಚಿವರು ಹಾಗೂ ಶಾಸಕರು ಗೈರು ಹಾಜರಾಗಿದ್ದರು.
ರಾಜ್ಯಸಭೆ ಚುನಾವಣೆಯಲ್ಲಿ ಹಿಂದೆಲ್ಲ ಅನೇಕ ಬದಲಾವಣೆಗಳಾಗಿವೆ. ಯಾರು ಯಾರ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲಿದ್ದಾರೋ ಗೊತ್ತಿಲ್ಲ. ನಾವು ಹೊಂದಾಣಿಕೆ ಅವಲಂಬಿಸಿಲ್ಲ. ಹೀಗೆಯೇ ಆಗುತ್ತದೆ ಎಂದು ನಿಶ್ಚಿತವಾಗಿ ಹೇಳಲಾಗದು, ಮತದಾನ ದಿನದ ಸಂಜೆಯವರೆಗೂ ಕಾದು ನೋಡಿ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಬೆಂಗಳೂರು:ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಜೆ.ಪಿ. ಭವನದಲ್ಲಿ ಜೆಡಿಎಸ್ ಶಾಸಕಾಂಗ ಸಭೆ ನಡೆಯಲಿದೆ. ಪಕ್ಷದ ಶಾಸಕರಿಗೆ ಈಗಾಗಲೆ ವಿಪ್ ಜಾರಿ ಮಾಡಲಾಗಿದೆ. ಜೂ.10ರಂದು ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯುವ ಹಿನ್ನೆಲೆಯಲ್ಲಿ ಈ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಮತ ನೀಡುವಂತೆ ಜೆಡಿಎಸ್ ಸಚೇತಕ ವೆಂಕಟರಾವ್ ನಾಡಗೌಡ ವಿಪ್ ನೀಡಿದ್ದಾರೆ. ಚುನಾವಣಾ ಕಣದಲ್ಲಿ ಆರು ಅಭ್ಯರ್ಥಿಗಳು ಇರುವುದರಿಂದ 3 ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಜೆಡಿಎಸ್​ನಲ್ಲಿ ಅಸಮಾಧಾನಗೊಂಡಿರುವ ಶಾಸಕರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಬಿಜೆಪಿ ಯನ್ನು ದೂರವಿಡುವ ದೃಷ್ಟಿಯಿಂದ ಇತರ ಪಕ್ಷಗಳ ಜತೆ ಹೊಂದಾಣಿಕೆ ಅಥವಾ ಕೊಡುಕೊಳ್ಳುವಿಕೆ ಮಾಡಿಕೊಳ್ಳುವ ಕುರಿತು ಸಭೆಯಲ್ಲಿ ರ್ಚಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
