ಬೆಂಗಳೂರು:ಸೋಶಿಯಲ್​​ ಮೀಡಿಯಾ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನಸಾಮಾನ್ಯರು ತಮ್ಮದೆ ಆಗಿರುವ ಪ್ರತಿಭೆ ಹಾಗೂ ವಿಶೇಷತೆಯಿಂದ ಸ್ಟಾರ್​ ಮಟ್ಟಕ್ಕೆ ಬೆಳೆದು ನಿಲ್ಲಲು ಸೋಶಿಯಲ್​​ ಮೀಡಿಯಾ ಒಂದು ವೇದಿಕೆ ಕಲ್ಪಿಸುತ್ತಿದೆ. ಆದರೆ ಕೆಲವೊಮ್ಮೆ ಟ್ರೋಲ್​ ಆಗುವುದು ಇದೆ. ಹೀಗೆ ಸೋಶಿಯಲ್​ ಮೀಡಿಯಾ ಮೂಲಕವಾಗಿ ಗುರುತಿಸಿಕೊಂಡಿರುವವರ ಸಾಲಿನಲ್ಲಿ ‘ರವಿ ಸಿಂಗರ್​ ಕುಮಟಾ’ ಕೂಡಾ ಒಬ್ಬರಾಗಿದ್ದಾರೆ. ತಮ್ಮದೆ ಆಗಿರುವ ಶೈಲಿಯಲ್ಲಿ ಹಾಡನ್ನು ಹಾಡಿ ರೀಲ್ಸ್​​ ಮಾಡುತ್ತಿದ್ದ. ಈತನಿಗೆ ಹಾಡುವುದು ಎಂದರೆ ಇಷ್ಟ. ಈತನ ಹಾಡಲು ಕೇಳಲು ನೆಟ್ಟಿಗರಿಗೆ ಕಷ್ಟ ಎನ್ನುವ ಮಾತು ಇತ್ತು. ಈ ಎಲ್ಲಾ ಟ್ರೋಲ್​ಗಳಿಗೆ ಸೆಡ್ಡು ಹೊಡೆದು ನಿಂತು ಇಂದು ಯಾವತ್ತು ಯಾರನ್ನು ಅಪಹಾಸ್ಯ ಮಾಡಬಾರದು ಅನ್ನೋದಕ್ಕೆ ಮುಖ್ಯ ಉದಾಹರಣೆಯಾಗಿ ನಿಂತಿರುವ ಸ್ಟೋರಿಯನ್ನು ನಾವು ಇಂದು ನಿಮಗೆ ಹೇಳಲಿದ್ದೇವೆ.
ಹಾಡುವುದೆಂದರೆ ಈತನಿಗೆ ಪಂಚ ಪ್ರಾಣ. ಶ್ರದ್ಧೆಯಿಂದ ಹಾಡಿದರೂ ಕೂಡ ಈತನ ಉಚ್ಛಾರ ದೋಷ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟ್ರೋಲಿಗೆ ಗುರಿಯಾಗುತ್ತಿತ್ತು. ರವಿ ಅಣ್ಣಾ ಎಂದೇ ಈತ ಜಾಲತಾಣದಲ್ಲಿ ವ್ಯಂಗ್ಯವಾಗಿ ಟ್ರೋಲ್​ ಮಾಡಲಾಗುತ್ತಿದೆ. ಇದರಿಂದ ಮನನೊಂದಿರುವ ರವಿ  ಹಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ.  ಸತತ ಪ್ರಯತ್ನ ಮಾಡುತ್ತಲೆ ಇದ್ದರು.

ರವಿ ಹೇಳುವ ಪ್ರತಿಯೊಂದು ಸಾಂಗ್​ನ್ನು ಟ್ರೋಲ್​ ಮಾಡುತ್ತಿರುವುದರಿಂದ ಮನನೊಂದ ರವಿ  ಈ ಹಿಂದೆ ಒಂದು ವಿಡಿಯೋ ಮಾಡಿ ಕಣ್ಣಿರು ಹಾಕಿದ್ದರು. ಸಣ್ಣ ವಯಸ್ಸಿನಲ್ಲಿ ನನಗೆ ಕಲಿಯೋದಕ್ಕೆ ಆಗಲಿಲ್ಲ. ಮನೆಯಲ್ಲಿ ಕಷ್ಟ ಇದ್ದಿದ್ದರಿಂದ ನಾನು ಕುಮಟಾದಲ್ಲಿ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ಸಂಗೀತ ಅಂದರೆ ನನಗೆ ಪಂಚ ಪ್ರಾಣ. ಹಾಡುವುದು ಅಂದರೆ ತುಂಬಾ ಇಷ್ಟ. ನಾನು ಚಿಕ್ಕವನಿಂದಾಗಿನಿಂದ ಹಾಡುತ್ತಿದ್ದೇನೆ. ನಾನು ಶಾಲೆಗೆ ಹೋಗಿಲ್ಲ. ಹೀಗಾಗಿ ನನ್ನ ಉಚ್ಛಾರ ಸರಿಯಾಗಿ ಬರುವುದಿಲ್ಲ. ಕೆಲವೊಮ್ಮೆ ತಪ್ಪಾಗುತ್ತದೆ, ಅದನ್ನು ಮನಸ್ಸಿಗೆ ಹಾಕಿಕೊಳ್ಳದೇ ಕ್ಷಮಿಸಿ. ಮನೆಯಲ್ಲಿ ಎಲ್ಲರೂ ಕೂಲಿ ಮಾಡೇ ಬದುಕು ಸಾಗಿಸುತ್ತಿದ್ದೇವೆ. ನಾನು ಹಾಡುವುದರಲ್ಲಿ ತಪ್ಪಿತ್ತು, ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ನಾನು ಹಾಡುವುದೇ ಹಾಗೇ. ಅದನ್ನು ತುಂಬಾ ಕೆಟ್ಟದಾಗಿ ಟ್ರೋಲ್​ ಮಾಡುತ್ತಿದ್ದಾರೆ. ನಾನು ನನ್ನ ತಪ್ಪನ್ನು ತಿದ್ದುಕೊಳ್ಳುತ್ತೇನೆ. ಅಕ್ಷರ ಕಲಿತುಕೊಂಡೇ ಹಾಡುತ್ತೇನೆ. ದಯವಿಟ್ಟು ನನ್ನ ಕುಟುಂಬಕ್ಕೆ ಯಾರೂ ನೋವು ಕೊಡಬೇಡಿ ಎಂದು ರವಿ ಮನವಿ ಮಾಡಿಕೊಂಡಿದ್ದರು. ಕಾಮಿಡಿ ಮಾಡಿ ನನಗೆ ಬೇಜಾರಿಲ್ಲ. ಆದರೆ, ಟ್ರೋಲ್​ ಮಾಡಬೇಡಿ ಎಂದು ರವಿ ಈ ಹಿಂದೆ ಕೇಳಿಕೊಂಡಿದ್ದರು. ರವಿ ಅವರ ತಾಯಿ ಕೂಡ ಕಣ್ಣೀರಿಟ್ಟು ನನ್ನ ಮಗನನ್ನು ಕಿಂಡಲ್​ ಮಾತ್ರ ಮಾಡಬೇಡಿ ಎಂದಿದ್ದರು. ನಾವು ಬಡವರು ಈ ರೀತಿ ಮಾಡಬೇಡಿ. ಟ್ರೋಲ್​ನಿಂದ ನಮಗೆ ತುಂಬಾ ನೋವಾಗಿದೆ ಎಂದು ರವಿ ತಾಯಿ ಕಣ್ಣೀರಿಟ್ಟು ಟ್ರೋಲಿಗರನ್ನು ಕೇಳಿಕೊಂಡಿದ್ದರು. ಈ ವಿಡಿಯೋ ಕೂಡಾ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿತ್ತು. ಟ್ರೋಲ್​​​ ವಿಚಾರವಾಗಿ ಮನನೊಂದು ರವಿ ಎಲ್ಲರೂ ಧೈರ್ಯ ತುಂಬಿದ್ದರು.
ಟ್ರೋಲ್​​ನಿಂದ ಮನನೊಂದ ರವಿಅಂದಿನಿಂದ ಸತತವಾಗಿ ಪ್ರಯತ್ನ ಮಾಡುತ್ತಲೇ ಇದ್ದರು.  ಹಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಎಷ್ಟು ಟ್ರೋಲ್​ ಮಾಡುತ್ತಾರೋ ಅಷ್ಟು ಸಾಂಗ್​ ಹೇಳುತ್ತಿದ್ದ ರವಿ ಇಂದು ಸೋಶಿಯಲ್​ ಮೀಡಿಯಾ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ.
ಮಂಗಳೂರಿನ ಅನೀಶ್ ಕಿನ್ನಿಗೋಳಿ ಚಾನೆಲ್ ಅವರ ನೆರವಿನಿಂದ ಅವರ ಸ್ಟೋಡಿಯೋದಲ್ಲಿ ರವಿ.. ದುನಿಯಾ ವಿಜಯ್​ ಅಭಿನಯದ ಜಂಗ್ಲಿ ಸಿನಿಮಾದ ನೀನೆಂದರೆ ನನ್ನೊಳಗೆ  ಏನೋ ಒಂದು ಸಂಚಲನ.. ಎಂದು ಇಂಪಾಗಿ ಹಾಡಿ ರೆಕಾರ್ಡ್​​ ಮಾಡಿದ್ದಾರೆ.ಇಂಪಾದ ಧ್ವನಿಯಲ್ಲಿ ಹಾಡುತ್ತಿರುವ ಹಾಡೊಂದನ್ನು ಹಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.  ಈ ಸಾಂಗ್​ ಕೇಳಿದ ನೆಟ್ಟಿಗರು ರವಿ ಅವರ ಶ್ರದ್ಧೆ, ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಒಂದೇ ದಿನದಲ್ಲಿ ರವಿ ಕುಮಟಾ​ ಅವರ ಮೇಲಿನ ದೃಷ್ಟಿ ಬದಲಾಗಿದೆ.  ರವಿ ಈ ಹಿಂದೆ ಹಾಡಿದ್ದ ಹಾಡನ್ನು ಈ ಒಂದೇ ಹಾಡು  ಎಲ್ಲಾ ಟ್ರೋಲ್​ಗಳನ್ನು ಮರೆಸುವಂತೆ ಆಗಿದೆ. ಹೊಸ ಅಭಿಮಾನಿಗಳ ಬಳಗವೆ ರವಿ ಅವರಿಗೆ ಈ ಹಾಡಿನಿಂದ ಸಿಕ್ಕಿದೆ. ಟ್ರೋಲ್​​​ನಿಂದ ಇಷ್ಟು ದಿನ ಮನನೊಂದ ರವಿ ಇಂದು ಸ್ಟಾರ್​ ಆಗಿ ಮಿಂಚಲು  ಅನೀಶ್ ಕಿನ್ನಿಗೋಳಿ ಅವರ ಪಯತ್ನದ ಪಾಲು ಅಪಾರವಾಗಿದೆ.
ನಿಜವಾಗಲೂ ಅವನಲ್ಲಿ ಒಳ್ಳೆಯ ಧ್ವನಿ ಇದೆ ಆದರೆ ಸಂಗೀತದ ಬಗ್ಗೆ ಅನುಭವ ಇರದ ಕಾರಣ ಟ್ರೋಲ್ ಗೆ ಒಳಗಾಗಿದ್ದಾನೆ.. ತರಬೇತಿ ಕೊಟ್ರೆ ಒಳ್ಳೆಯ ಹಾಡುಗಾರ ಆಗ್ತಾನೆ. ಪದೇ ಪದೇ troll ಆಗಿದ್ದ ರವಿಯ ಈ ಬದಲಾವಣೆ ನಿಜಕ್ಕೂ ಸಂತೋಷ.. ಅವನ ಈ ರೀತಿ ಬದಲಾವಣೆ ಯ ಹಿಂದಿರುವ ವ್ಯಕ್ತಿಗಳಿಗೆ ಅಭಿನಂದನೆಗಳು…ನಿಜ್ವಾಗ್ಲೂ ಇವ್ರಲ್ಲಿ ಒಳ್ಳೆ ಪ್ರತಿಭೆ ಇದೆ, ಬೇಜಾರಾದರೂ ಕೂಡ ಹಿಂದೆ ಸರಿಯಾದೆ,ಈ ಹಂತಕ್ಕೆ ಬಂದಿದ್ದಾರೆ (ತಂದಿದ್ದಾರೆ,)ಧೈರ್ಯ ದಿಂದ ಮುಂದೆ ಬರುತ್ತಿದ್ದಾರೆ, ನಿಜ್ವಾಗ್ಲೂ ಇವ್ರನ್ನ ಮೆಚ್ಚಲೆ ಬೇಕು,ಇಂತವರನ್ನು ಪ್ರೋತ್ಸಾಹಿಸಬೇಕು,ಏನೆ ಆಗಲಿ ರವಿ ನಿಮಗೆ ಒಳ್ಳೆಯದಾಗಲಿ…ಮರಳಿ ಯತ್ನವ ಮಾಡು, ,,,ಮರಳಿ ಯತ್ನವ ಮಾಡು. ಕಲೆ ಯಾರಪ್ಪನ ಸ್ವತ್ತಲ್ಲ. ಟ್ರೊಲ್ ಮಾಡಿದವರೇ ಶಹಬ್ಬಾಸ್ ಎಂದುನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ.
ಅಂದಹಾಗೆ ರವಿ ಅವರು ಉತ್ತರ ಕನ್ನಡ ಮೂಲದವರು. ಅವರಿಗೆ ಹಾಡುವುದೆಂದರೆ ತುಂಬಾ ಇಷ್ಟ. ಆದರೆ, ಹಾಡುವಾಗ ಕೆಲವು ಉಚ್ಛಾರ ದೋಷಗಳಿಂದಾಗಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದೆ. ಈ ಕಾರಣದಿಂದ ರವಿ ಅವರು ಟ್ರೋಲ್​ ಮಾಡದಂತೆ ಮನವಿ ಮಾಡಿಕೊಂಡಿದ್ದರು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಇಂದು ಯಾರು ತೆಗಳಿದ್ದಾರೋ ಅವರೆ ರವಿಯನ್ನು ಹೋಗಳಿ ಕಾಮೆಂಟ್​​ ಮಾಡುತ್ತಿದ್ದಾರೆ… ಇದು ಬದಲಾವಣೆ ಎಂದರೆ…
ಕಾಮಿಡಿ ಮಾಡಿ ಬೇಜಾರಿಲ್ಲ ಆದ್ರೆ ಟ್ರೋಲ್​ ಮಾಡಿ ಕುಟುಂಬಕ್ಕೆ ನೋವು ಕೊಡ್ಬೇಡಿ: ರವಿಯ ನೋವಿನ ಮನವಿ..!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
