ಬೆಂಗಳೂರು: ಪ್ರತಿ ವಲಯದ ವೃತ್ತಿ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ, ಜ್ಞಾನದ ಮಟ್ಟ ಅಭಿವೃದ್ಧಿಪಡಿಸಿಕೊಂಡಲ್ಲಿ ಮಾತ್ರ ಯಶಸ್ಸು ಸದಾ ನಮ್ಮ ಜತೆ ಇರುತ್ತದೆ ಎಂದು ಹ್ಯಾಪಿಯಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಸಿ.ಎ ವೆಂಕಟರಮಣ್ ನಾರಾಯಣನ್ ತಿಳಸಿದ್ದಾರೆ.
ಕೋಣನಕುಂಟೆಯ ಪ್ರಿಸ್ಟೀಜ್ ಶ್ರೀ ಹರಿ ಖೋಡೆ ಸಭಾಂಗಣದಲ್ಲಿ ದಿ ಇನ್ಸ್ಟಿಟ್ಯೂಟ್ ಆ್ ಕಂಪನಿ ಸೆಕ್ರೇಟರೀಸ್ ಆಫ್ ಇಂಡಿಯಾದಿಂದ ಆಯೋಜಿಸಲಾದ ಕಂಪನಿಯ ಕಾರ್ಯದರ್ಶಿಗಳ ಪಾತ್ರದ ಮರು ವ್ಯಾಖ್ಯಾನ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆ ಕುರಿತಾದ ಎರಡು ದಿನಗಳ ದಕ್ಷಿಣ ವಲಯದ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು
ಎಲ್ಲ ಸನ್ನಿವೇಶಗಳಲ್ಲು ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದನ್ನು ಕಲಿಯಬೇಕು. ವಿಶಾಲ ದೃಷ್ಟಿಕೋನದ ಮೂಲಕ ವಿಭಿನ್ನವಾಗಿ ಆಲೋಚನೆ ಮಾಡಬೇಕು. ಬೆಳೆವಣಿಗೆಯಾಗುತ್ತಿರುವ ಕಾರ್ಪೋರೇಟ್ ವಲಯಕ್ಕೆ ಅನುಗುಣವಾಗಿ ಬದಲಾವಣೆಗಳು ಅಗತ್ಯ. ಕೋವಿಡ್ ಸಂದರ್ಭದಲ್ಲಿ ಡಿಜಿಟಲ್ ರಿಮೋಟ್ ಐಪಿಓ ಬಳಸಿಕೊಂಡು ಮನೆಯಲ್ಲಿ ಕುಳಿತು ಕೆಲಸ ಮಾಡುವ ವಿಧಾನವನ್ನು ಮೊದಲಿಗೆ ಹ್ಯಾಪಿಯಸ್ಟ್ ಮೈಂಡ್ ಕಂಪೆನಿಯಲ್ಲಿ ಆರಂಭಿಸಲಾಯಿತು. ಇದು ಉಳಿದ ಕಂಪೆನಿಗಳಿಗೂ ಮಾದರಿಯಾಯಿತು. ಹೀಗೆ ಯಾವುದೇ ಸಂದರ್ಭಗಳಿಗೂ ನಾವು ಒಗ್ಗಿಕೊಳ್ಳಬೇಕು. ಸವಾಲುಗಳನ್ನು ಎದುರಿಸಲು ಎದ್ದು ನಿಲ್ಲಬೇಕು ಎಂದರು.
ಮುಂಬರುವ ದಿನಗಳಲ್ಲಿ ಸಾಂಸ್ಥಿಕ ವಲಯ ಗಣನೀಯವಾಗಿ ಬೆಳವಣಿಗೆಯಾಗಲಿದ್ದು, ಕಂಪೆನಿ ಸೆಕ್ರೇಟರಿಗಳು ಮಹತ್ವದ ಪಾತ್ರ ನಿರ್ವಹಿಸಬೇಕಾಗುತ್ತದೆ. ಯಾವುದೇ ವೃತ್ತಿಯಾದರೂ ನಮ್ಮಿಂದ ಸಾಕಷ್ಟು ಬಯಸುತ್ತದೆ. ಪರಿಸರ, ಸಾಮಾಜಿಕ ಆಡಳಿತ ಮುಖ್ಯವಾಗಿದ್ದು, ಇದರಲ್ಲಿ ಆಡಳಿತ ವ್ಯವಸ್ಥೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ವಿವರಿಸಿದರು.
ಐಸಿಎಸ್ ಐ ಅಧ್ಯಕ್ಷ ಬಿ. ನರಸಿಂಹನ್ ಮಾತನಾಡಿ, ಕೇಂದ್ರ ಸರ್ಕಾರ ಶೀಘ್ರದಲ್ಲೇ ಕಂಪೆನಿ ಕಾಯ್ದೆಗೆ ತಿದ್ದುಪಡಿ ತರಲಿದ್ದು, ಇದಕ್ಕೆ ಪೂರಕವಾಗಿ ಐಸಿಎಸ್‌ಐ ನಿಂದ ಕೇಂದ್ರ ಸಾಂಸ್ಥಿಕ ಸಚಿವಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಯಾವ ಯಾವ ವಲಯಗಳಲ್ಲಿ ತಿದ್ದುಪಡಿಯಾಗಬೇಕು ಎಂಬ ಕುರಿತು ಸಮಗ್ರ ವಿವರಗಳನ್ನು ನೀಡಲಾಗಿದೆ. ಇದಲ್ಲದೇ ಕಂಪೆನಿ ಕಾಯ್ದೆಯ ನಿಯಮಗಳ ಬದಲಾವಣೆಗೂ ಸಹ ವರದಿ ನೀಡಲಾಗಿದೆ ಎಂದು ಹೇಳಿದರು.
ನ್ಯಾಯಾಲಯಗಳಲ್ಲಿ ಹಿಂಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೇ ಉದ್ದೇಶದಿಂದ ಐಸಿಎಸ್ ಐ ದೆಹಲಿಯ ನೋಯ್ಡದಲ್ಲಿ ಅಂತರರಾಷ್ಟ್ರೀಯ ಮಟ್ಟದ ಮಧ್ಯಸ್ಥಿಕೆ ಕೇಂದ್ರ ತೆರೆದಿದೆ. ಬೆಂಗಳೂರಿನಲ್ಲೂ ಪ್ರಾದೇಶಿಕ ಕೇಂದ್ರ ಪ್ರಾರಂಭವಾಗಲಿದ್ದು, ಹೀಗಾಗಿ ಇನ್ನು ಮುಂದೆ ಕಂಪೆನಿ ಸೆಕ್ರೇಟರಿಗಳು ಯಾವುದೇ ಕಂಪೆನಿಗಳ ಒಪ್ಪಂದದ ಕರಡು ಸಿದ್ಧಪಡಿಸುವ ಸಂದರ್ಭದಲ್ಲಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆಗೆ ಇರುವ ಅವಕಾಶದ ಬಗ್ಗೆಯೂ ಒಂದು ಅಂಶವನ್ನು ಕಡ್ಡಾಯವಾಗಿ ಸೇರ್ಪಡೆ ಮಾಡಬೇಕು ಎಂದರು.
ಐಸಿಎಸ್‌ಐ ಬೆಂಗಳೂರು ಚಾಪ್ಟರ್ ಅಧ್ಯಕ್ಷ ವೆಂಕಟ ಸುಬ್ಬಾರಾವ್ ಕಲ್ವಾ ಮಾತನಾಡಿ, ಸಾಂಸ್ಥಿಕ ಆಡಳಿತ ವಲಯದಲ್ಲಿ ಕಂಪೆನಿ ಸೆಕ್ರೇಟರಿಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ಕಂಪೆನಿ ಮತ್ತು ಪಾಲುದಾರರ ಜೊತೆ ನಿರ್ಣಾಯಕ ಸಮನ್ವಯತೆ ಸಾಧಿಸುವ ಕೆಲಸವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬೇಕು ಎಂದು ತಿಳಿಸಿದರು.ಐಸಿಎಸ್‌ಐ ಉಪಾಧ್ಯಕ್ಷ ಧನಂಜಯ್ ಶುಕ್ಲಾ, ಎಸ್.ಐ.ಆರ್.ಸಿ. ಕಾರ್ಯದರ್ಶಿ ಮಹದೇವ್ ತಿರುನಗರಿ, ಎಸ್‌ಐಆರ್ ಸಿ ಅಧ್ಯಕ್ಷ ಪ್ರದೀಪ್ ಬಿ ಕುಲಕರ್ಣಿ, ಕೇಂದ್ರೀಯ ಮಂಡಳಿ ಸದಸ್ಯ ಸಿ. ದ್ವಾರಕಾನಾಥ್, ಎ. ಮೋಹನ್ ಕುಮಾರ್, ವೆಂಕಟರಾಮನ್ ಆರ್, ಐಸಿಎಸ್ಐ ಕಾರ್ಯದರ್ಶಿ ಆಶೀಶ್ ಮೋಹನ್ ಉಪಸ್ಥಿತರಿದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 19 =
Remember me
