ಬೆಂಗಳೂರು :ನಗರದ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ಜೋರು ಶಬ್ದವೊಂದು ಕೇಳಿಬಂತು. ಸುಮಾರು 12.30 ರ ನಂತರ ಕೇಳಿಬಂದ ಈ ಶಬ್ದದ ಬಗ್ಗೆ ಅನೇಕ ನಿವಾಸಿಗಳು ಟ್ವಿಟರ್​ನಲ್ಲಿ ಶೇರ್​ ಮಾಡಿ ಚರ್ಚೆ ನಡೆಸಿದರು.
ನೆಟ್ಟಿಗರ ಪ್ರಕಾರ, ಈ ದಿಢೀರಾದ ಜೋರು ಶಬ್ದವು ಸರ್ಜಾಪುರ, ಜೆಪಿ ನಗರ, ಬೆನ್ಸನ್​ ಟೌನ್, ಅಲ್ಸೂರು, ಇಸ್ರೋ ಲೇಔಟ್​, ಎಚ್​ಎಸ್ಆರ್ ಲೇಔಟ್​ ಮತ್ತು ಬೆಂಗಳೂರಿನ ದಕ್ಷಿಣ ಮತ್ತು ಪೂರ್ವ ಭಾಗದ ಇತರ ಕೆಲವು ಪ್ರದೇಶಗಳಲ್ಲಿ ಕೇಳಿಬಂದಿದೆ.
Remember that unexplained loud boom/bang/blast noise last year. Just heard it again in our neighbourhood and my head is reeling. Anyone else in Bangalore?
— Vani Saraswathi (@vanish_forever)July 2, 2021

ಕಳೆದ ವರ್ಷ ಮೇನಲ್ಲಿ ಇದೇ ರೀತಿ ಶಬ್ದ ಕೇಳಿಬಂದಿದ್ದನ್ನು ಹಲವು ಟ್ವಿಟರ್​ ಬಳಕೆದಾರರು ನೆನಪಿಸಿಕೊಂಡಿದ್ದಾರೆ. ಆಗ ಇಂಡಿಯನ್ ಏರ್​ ಫೋರ್ಸ್​ನ ಸುಖೋಯಿ 30 ಜೆಟ್​ ಹಾದುಹೋದ ಶಬ್ದವಾಗಿತ್ತು ಎಂಬುದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಇದು ಮತ್ತೊಂದು ‘ಸಾನಿಕ್​ ಬೂಮ್​’ ಆಗಿರಬಹುದೇ ಎಂದು ಟ್ವೀಟ್​ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೆಲವೆಡೆಗಳಲ್ಲಿ ಶಬ್ದ ಕೇಳದಿದ್ದರೂ, ಬರೀ ಕಿಟಕಿಗಳು ಅಲುಗಾಡಿದ್ದರೆ, ಮತ್ತೆ ಹಲವೆಡೆ ಭಾರೀ ಶಬ್ದದೊಂದಿಗೆ ಕಿಟಕಿ ಗಾಜುಗಳು ಅಲುಗಾಡಿದವು ಎಂದು ಟ್ವೀಟ್​ ಮಾಡಲಾಗಿದೆ. ಆದರೆ, ತನ್ನ ಯಾವುದೇ ವಿಮಾನಗಳು ಈ ಶಬ್ದ ಉಂಟುಮಾಡಿಲ್ಲ ಎಂದು ಹೆಚ್​ಎಎಲ್​ ಸುದ್ದಿಗಾರರಿಗೆ ಹೇಳಿದೆ ಎನ್ನಲಾಗಿದೆ.(ಏಜೆನ್ಸೀಸ್)
ಸಂಚಾರಿ ವಿಜಯ್​ ಅಪಘಾತ: ಆ ರಾತ್ರಿಯ ಘಟನಾವಳಿ ಬಿಚ್ಚಿಟ್ಟ ಬೈಕ್​ ಸವಾರ ನವೀನ್

ದೊಣ್ಣೆ, ಕತ್ತಿ ಝಳಪಿಸಿದ ಮದುವೆ ಹೆಣ್ಣು! …ಚಕಿತರಾದ ಬಂಧುಬಳಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
