ಬೆಂಗಳೂರು:ಸ್ಯಾಂಡಲ್​ವುಡ್​​ ನಟ ಸುದೀಪ್​​ ಅವರ ಪುತ್ರಿ ಸಾನ್ವಿ ಸುದೀಪ್​​ ಕತ್ತಿನ ಭಾಗದಲ್ಲಿ ‘ಪೀಕು’ (PIKU) ಹೊಸ ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದಾರೆ. ಟ್ಯಾಟೂವಿನ ಅರ್ಥವನ್ನು ಸಹ ಅವರೇ ಹೇಳಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.
ಸಾನ್ವಿ ಸುದೀಪ್, ಕತ್ತಿನ ಭಾಗದಲ್ಲಿ ‘ಪೀಕು’ (PIKU) ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಪೀಕು ಎಂದರೆ ಹಿಂದಿ ಸಿನಿಮಾದ ಹೆಸರಲ್ಲ. ಪೀಕು, ಸಾನ್ವಿಯ ತಾಯಿ ಪ್ರಿಯಾ ಸುದೀಪ್​ರ ಅಡ್ಡ ಹೆಸರು. ಪ್ರಿಯಾ ಸುದೀಪ್​ರನ್ನು ಅವರ ತಾತ ಮುದ್ದಾಗಿ ಪೀಕು ಎಂದೇ ಕರೆಯುತ್ತಿದ್ದರಂತೆ.
ತಾಯಿಯ ಅಡ್ಡ ಹೆಸರನ್ನು ಟ್ಯಾಟೂ ಮಾದರಿಯಲ್ಲಿ ಸಾನ್ವಿ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಕ್ಕೆ ಹಲವಾರು ಲೈಕ್, ಕಮೆಂಟ್​ಗಳು ಬಂದಿವೆ.
A post shared by Skindeep ( Tattoo Studio ) (@skindeep_tattoo_studio)

ಸಾನ್ವಿ ಸುದೀಪ್ ಹಾಡು ಹಾಡುವುದು, ಬರೆಯುವುದು, ಚಿತ್ರ ಬಿಡಿಸುವುದು ಇನ್ನೂ ಕೆಲವು ಕಲಾ ಪ್ರಕಾರಗಳಲ್ಲಿ ಸಾನ್ವಿ ಆಸಕ್ತಿವಹಿಸಿದ್ದಾರೆ. ಇತ್ತೀಚೆಗೆ ಕಿರುಚಿತ್ರವೊಂದರಲ್ಲಿ ನಟನೆ ಮಾಡಿದ್ದಾರೆ. ಸುದೀಪ್​ರ ಸೋದರಳಿಯನ ‘ಜಿಮ್ಮಿ’ ಸಿನಿಮಾಕ್ಕೆ ಸಾನ್ವಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.
ಇದು ಸರಿನಾ? ಹಾರ್ದಿಕ್​ರನ್ನು ಪ್ರೀತಿಸುತ್ತಿದ್ದಾಗಲೆ ಮಾಜಿ ಪ್ರಿಯಕರನ ​​ಜತೆ ಸುತ್ತಾಡಿದ್ದಳು ನತಾಶಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 13 =
Remember me
