ಬೆಂಗಳೂರು:ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ  ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೆ ಬಿಗ್ ಬಾಸ್ ಪ್ರೊಮೋ ಕೂಡ ಬಿಡುಗಡೆಯಾಗಿದೆ. ಯಾವಾಗ ಬಿಗ್ ಬಾಸ್ ಪ್ರಸಾರ ಆರಂಭವಾಗಲಿದೆ ಅಂತ   ಕಾಯುತ್ತಿರುವಾಗಲೇ  ಒಂದು ಸುದ್ದಿ ಮಾತ್ರ ಬಿಗ್​ಬಾಸ್​ ವೀಕ್ಷಕರಿಗೆ ನಿರಾಸೆ ಉಂಟು ಮಾಡಿದೆ.
ಸುದೀಪ್ ಬರುತ್ತಾರೆ ಎಂದು ಕಾದು ಕೂತವರಿಗೆ  ಸುದೀಪ್ ಬರೋದು ಅನುಮಾನವಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುವ ಒಂದು ಪ್ರೋಮೋ ಸೋಶಿಯಲ್​​ ಮೀಡಿಯಾದಲ್ಲಿ  ಸಖತ್​  ವೈರಲ್​ ಆಗುತ್ತಿದೆ.
ಕೆಲವು ವಾರಗಳ ಹಿಂದೆ ಬಿಗ್​ ಬಾಸ್​​ ಕನ್ನಡ ಸೀಸನ್​ 11ರ ಪ್ರೋಮೋ ರಿಲೀಸ್​​ ಆಗಿತ್ತು. ಈ ಪ್ರೋಮೋದಲ್ಲಿ ಕೇವಲ ಲೋಗೋ ಇತ್ತು. ಅಲ್ಲದೆ ಹೊಸ ಸೀಸನ್​​ ಶೀಘ್ರವೇ ಆರಂಭ ಆಗಲಿದೆ ಎಂದು ಬರೆಯಲಾಗಿತ್ತು. #KicchaSudeep ಎಂದು ಬರೆಯೂವ ಮೂಲಕವಾಗಿ ಎಲ್ಲರಿಗೂ ಸರ್​ಪ್ರೈಸ್​​ ನೀಡಲಾಗಿತ್ತು. ಸುದೀಪ್​​ ಈ ಸೀಸನ್​​ನಲ್ಲಿ ಇರುತ್ತಾರೆ ಎನ್ನುವುದು ಬಹುತೇಕ ಖಚಿತವಾಗಿತ್ತು. ಆದರೆ ಈಗ ಈ ಹ್ಯಾಶ್​​ಟ್ಯಾಗ್​​ ತೆಗೆಯಲಾಗಿದೆ.
ಈಗ ಒಂದು ದಿನದ ಹಿಂದೆ ಈ ಪ್ರೋಮೋದ ಕ್ಯಾಪ್ಶನ್ ಎಡಿಟ್ ಮಾಡಲಾಗಿದ್ದು, ಸುದೀಪ್  #KicchaSudeep ಹ್ಯಾಶ್​ಟ್ಯಾಗ್ ಕಾಣೆಯಾಗಿದೆ. ಬಿಗ್ ಬಾಸ್ ಪ್ರೋಮೋನ ಕಲರ್ಸ್​ ಕನ್ನಡ ವಾಹಿನಿ ಇನ್​ಸ್ಟ್ರಾಗ್ರಾಮ್​ನಲ್ಲಿ ಪಿನ್ ಮಾಡಿ ಇಟ್ಟಿದೆ. ಈ ವಿಡಿಯೋಗೆ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ.  ಇದನ್ನು ಗಮನಿಸಿದ ಬಿಗ್​ಬಾಸ್​​  ವೀಕ್ಷಕರು  ಸುದೀಪ್​ ಅವರು ಬಿಗ್​ಬಾಸ್​ ಕಾರ್ಯಕ್ರಮ ನಡೆಸಿಕೊಡಲ್ವಾ? ಎಂದು ಪ್ರಶ್ನೆ ಹುಟ್ಟು ಹಾಕುತ್ತಿದ್ದಾರೆ.
A post shared by Colors Kannada Official (@colorskannadaofficial)

ಬಿಗ್ ಬಾಸ್ ಕನ್ನಡ ಹೊಸ ಸೀಸನ್ ಗೆ ಸುದೀಪ್ ನಿರೂಪಣೆ ಮಾಡೋದಿಲ್ಲ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ರಿಷಭ್ ಶೆಟ್ಟಿ ಅಥವಾ ರಮೇಶ್ ಅರವಿಂದ್ ಬಿಗ್ ಬಾಸ್ ನಡೆಸಿಕೊಡ್ತಾರೆ ಅಂತಾನೂ ಹೇಳಲಾಗುತ್ತಿದೆ.
ಸುದೀಪ್ ಅವರೇ ಈ ಸೀಸನ್ ನಡೆಸಿ ಕೊಡಬೇಕು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪಟ್ಟು ಹಿಡಿದು ಕುಳಿತಿದ್ದಾರೆ.,ಸುದೀಪ್  ನಡೆಸಿಕೊಡುತ್ತಾರೆಯೇ ಅನ್ನೋ  ಬಗ್ಗೆ ಕಲರ್ಸ್ ಕನ್ನಡ ವಾಹಿನಿಯಿಂದ ಅಧಿಕೃತ ಮಾಹಿತಿ ಸಿಗಲಿದೆ.
ಕೊಲೆ ಕೇಸ್​ನಿಂದ ಬಚಾವಾಗಲು ನಟ ದರ್ಶನ್​ ಖರ್ಚು ಮಾಡಿದ ಹಣವೆಷ್ಟು? ಚಾರ್ಜ್​ಶೀಟ್​ನಲ್ಲಿ ದುಡ್ಡಿನ ರಹಸ್ಯ ಬಯಲು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − 17 =
Remember me
