ಬೆಂಗಳೂರು:ಇನ್ಫೋಸಿಸ್​ ಫೌಂಡೇಶನ್​ ಅಧ್ಯಕ್ಷೆ ಸುಧಾಮೂರ್ತಿಯವರು ಸುತ್ತಲೂ ವಿವಿಧ ರೀತಿಯ ತರಕಾರಿ ಬುಟ್ಟಿಗಳನ್ನು ಇಟ್ಟುಕೊಂಡು ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಸುಧಾಮೂರ್ತಿಯವರು ಈಗಲೂ ಪ್ರತಿವರ್ಷದಲ್ಲಿ ಒಂದು ದಿನ ದೇವಸ್ಥಾನದ ಎದುರು ಕುಳಿತು ತರಕಾರಿ ಮಾರುತ್ತಾರೆ. ನಮ್ಮೊಳಗಿನ ಅಹಂ ನಿರ್ಮೂಲನ ಆಗಬೇಕು ಎಂಬ ಕಾರಣಕ್ಕೆ ಸುಧಾ ಅಮ್ಮ ಹೀಗೆ ಮಾಡುತ್ತಾರೆ ಎಂಬ ಕ್ಯಾಪ್ಷನ್​​ನೊಂದಿಗೆ ಈ ಫೋಟೋ ಭರ್ಜರಿ ಹರಿದಾಡುತ್ತಿದೆ.
ಸುಧಾಮೂರ್ತಿಯವರು ನಿಜಕ್ಕೂ ವರ್ಷದಲ್ಲಿ ಒಂದು ಬಾರಿ ತರಕಾರಿ ಮಾರುತ್ತಾರಾ? ಈ ಫೋಟೋ ಅವರು ತರಕಾರಿ ಮಾರಾಟ ಮಾಡುತ್ತಿರುವುದಾ? ಎಂಬುದಕ್ಕೆ ಸರಿಯಾದ ಉತ್ತರ ಸಿಕ್ಕಿದೆ.ಇದು ಸುಧಾಮೂರ್ತಿಯವರು ತರಕಾರಿ ವ್ಯಾಪಾರ ಮಾಡುತ್ತಿರುವುದಲ್ಲ. ಬದಲಿಗೆ ಒಳ್ಳೆಯ ತರಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲು ಹೀಗೆ ಕುಳಿತಿದ್ದಾರೆ.ಇದನ್ನೂ ಓದಿ:ಕೊಲ್ಕತ್ತದ ಕೆಲವು ಪುರುಷರ ವಿಚಿತ್ರ ಖಯಾಲಿ; ಮಾಜಿ ಪ್ರೇಯಸಿಯರಿಂದ ಪೊಲೀಸರಿಗೆ ದೂರು
ಅವರೇ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ಜಯನಗರ 5ನೇ ಬ್ಲಾಕ್​​ನಲ್ಲಿ ನನ್ನ ಮನೆಯ ಸಮೀಪವೇ ಇರುವ ರಾಘವೇಂದ್ರ ಮಠದಲ್ಲಿ ಮೂರು ದಿನದ ವಾರ್ಷಿಕ ಅನ್ನ ಸಂತರ್ಪಣೆಗೆ ಅಡುಗೆ ಮಾಡಲು ಒಳ್ಳೆಯ ತರಕಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಇದು ನನ್ನ ಹೃದಯಕ್ಕೆ ಹತ್ತಿರವಾದ ಧರ್ಮಾಚರಣೆಯಾಗಿದೆ ಎಂದು ಸುಧಾಮೂರ್ತಿಯವರೇ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.  ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿವರ್ಷವೂ ಮೂರು ದಿನ ಸುಧಾಮೂರ್ತಿಯವರು ಅನ್ನಸಂತರ್ಪಣೆ ನಡೆಸುತ್ತಾರೆ. ಇದು ಅವರ ಅಜ್ಜಿಯ ಕಾಲದಿಂದಲೂ ನಡೆದುಕೊಂಡುಬಂದಿದೆ ಎನ್ನಲಾಗಿದೆ.ಇದನ್ನೂ ಓದಿ:ಬಂಧನದ ಭೀತಿ: 5 ವರ್ಷಗಳಲ್ಲಿ ಪಲಾಯನ ಮಾಡಿದ ‘ಶ್ರೀಮಂತ ಕಳ್ಳ’ರೆಷ್ಟು ಗೊತ್ತಾ?
ಇದನ್ನು ದೇವರ ಸೇವೆಯಾಗಿ ಮಾಡುತ್ತೇನೆ ಹೊರತು ಪ್ರಚಾರಕ್ಕಾಗಿ ಅಲ್ಲ. ನನಗೆ ಇದರಲ್ಲಿ ಸಂತೃಪ್ತಿ ಸಿಗುತ್ತದೆ. ವೈಯಕ್ತಿಕವಾಗಿ ನನಗೆ ತುಂಬ ಇಷ್ಟವಾದ ಸೇವೆ ಎಂದೂ ಸುಧಾ ಮೂರ್ತಿ ವಿವರಿಸಿದ್ದಾರೆ.ಈ ಅನ್ನಸಂತರ್ಪಣೆಗಾಗಿ ತರಿಸುವ ತರಕಾರಿಗಳನ್ನು ವಿಂಗಡಿಸುವುದ, ಸ್ವಚ್ಛಗೊಳಿಸುವುದರಲ್ಲಿ ನಾನೂ ಖುಷಿಯಿಂದ ಪಾಲ್ಗೊಳ್ಳುತ್ತೇನೆ. ಮುಂಜಾನೆ 6.30ರಿಂದ ಬೆಳಗ್ಗೆ 10ರವರೆಗೂ ಅಲ್ಲಿಯೇ ಇರುತ್ತೇನೆ. ನಂತರ ನನ್ನ ಕಚೇರಿಗೆ ತೆರಳುತ್ತೇನೆ ಎಂದು ತಿಳಿಸಿದ್ದಾರೆ. ಈ ಕೆಲಸದಲ್ಲಿ ಸುಧಾಮೂರ್ತಿಯವರಿಗೆ ಅವರ ಹಿರಿಯ ಸಹೋದರಿಯೂ ಸಹಾಯ ಮಾಡುತ್ತಾರೆ. (ಏಜೆನ್ಸೀಸ್)
ತಪ್ಪು ಮಾಹಿತಿಯ ಟ್ವೀಟ್​:

#DidYouKnow
Sudha Murti (Wife of#Infosysfounder Narayan Murthy whose wealth is over 2500cr) sells vegetables in front of Venkateshwar Temple for 1 day every year to get rid of any kind of EGO अहंकार
🙏pic.twitter.com/PWknpJxXmD
— Raghav Chaudhary (@MrRChaudhary)September 12, 2020

ಸೆ.25ರಿಂದ ಲಾಕ್​ಡೌನ್​ ಪಕ್ಕಾನಾ? ಏನಿದು ಒಕ್ಕಣೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + seven =
Remember me
