ಬೆಳಗಾವಿ:ಚೀನಾ ಸೇರಿ ಹೊರ ದೇಶಗಳಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ ಹೆಚ್ಚಳ ಹಾಗೂ ಹೊಸ ವರ್ಷಕ್ಕೆ ಜನಸಂದಣಿ ಉಂಟಾಗುವ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಗುರುವಾರ ಮಹತ್ವದ ಸಭೆ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಮಾಹಿತಿ ನೀಡಿದ್ದಾರೆ.
ವಿದೇಶದಿಂದ ಬರುವವರ ಮೇಲೆ ನಿಗಾವಹಿಸಲಾಗುವುದು. ಎಸಿ ಬಳಸುವ ಜಾಗಗಳಲ್ಲಿ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು. ಏರ್ಪೋಟ್​ನಲ್ಲಿ ಪ್ರಯಾಣಿಕರಿಗೆ ರ್ಯಾಂಡಮ್​ ಟಸ್ಟಿಂಗ್​ ಕಡ್ಡಾಯ. ಐಎಲ್​ಐ ಮತ್ತು ಸಾರಿ ಇರುವ ಪ್ರಕರಣಗಳನ್ನು ಕಡ್ಡಾಯವಾಗಿ ಟೆಸ್ಟಿಂಗ್​ಗೆ ಒಳಪಡಿಸಲಾಗುವುದು. ಕೋವಿಡ್​ ಲಸಿಕೆಯನ್ನು ಯಾರೆಲ್ಲಾ ತೆಗೆದುಕೊಂಡಿಲ್ಲ ಅವರಿಗೆ ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಲಾಗುವುದು. ಕರೊನಾ ನಿಯಂತ್ರಣಕ್ಕೆ ಜನರು ಸಹಕಾರ ಕೊಡಬೇಕು ಎಂದು ಸುಧಾಕರ್ ಮನವಿ ಮಾಡಿದರು.
ಕರೊನಾ ಕೇಸ್​ಗಳು ಗಣನೀಯವಾಗಿ ಕುಸಿತವಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಬಳಸುವುದನ್ನು ನಿಲ್ಲಿಸಲಾಗಿತ್ತು. ಆದರೆ ನೆರೆಯ ಚೀನಾದಲ್ಲಿ ದೈನಂದಿನ ಕರೊನಾ ಕೇಸ್​ಗಳು ಹೆಚ್ಚಾಗಿವೆ. ಇದರ ಬೆನ್ನಲ್ಲೇ ದೇಶದಲ್ಲೂ ಆತಂಕ ಶುರುವಾಗಿದೆ. ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ವರ್ಚುವಲ್​ ಮೀಟಿಂಗ್​ ನಡೆಸುತ್ತಿದ್ದಾರೆ.
ಗದಗದಲ್ಲಿ ಶಿಕ್ಷಕನಿಂದಲೇ ಮಗನ ಕೊಲೆ: ಚಿಕಿತ್ಸೆ ಫಲಿಸದೆ ಅತಿಥಿ ಶಿಕ್ಷಕಿ ಗೀತಾ ಬಾರಕೇರ್ ಸಾವು

ಇಮ್ರಾನ್ ಖಾನ್ ಆಡಿಯೋ ಲೀಕ್​: ನಿಮ್ಮಿಂದಾಗಿ ನನ್ನ ಖಾಸಗಿ ಅಂಗಗಳು ನೋಯುತ್ತಿವೆ.. ಇಂದು ಬರೋಕೆ ಆಗಲ್ಲ…

ಕೆರೆ ಬಳಿ ಕಾದು ಸಾವಿನ ಮನೆಯ ಕದ ತಟ್ಟಿದ 3 ತಿಂಗಳ ಗರ್ಭಿಣಿ… ನವವಿವಾಹಿತೆಯ ಬಾಳಿಗೆ ಕೊಳ್ಳಿ ಇಟ್ಟಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
