ಬೆಂಗಳೂರು:ಚುನಾವಣೆ ಇನ್ನೇನು ಸಮೀಪದಲ್ಲೇ ಇದ್ದು ನಟ ಸುದೀಪ್​ ಬಿಜೆಪಿಯ ಸ್ಟಾರ್​ ಕ್ಯಾಂಪೇನರ್​ ಆಗುತ್ತಾರಾ ಎನ್ನುವ ಪ್ರಶ್ನೆ ಅನೇಕರಿಗೆ ಕಾಡುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ನ ಸುರ್ಜೇವಾಲಾ ಹಾಗೂ ಬಿಜೆಪಿಯ ಸಚಿವ ಸುಧಾಕರ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಕಾಲೆಳೆದುಕೊಂಡು ಜಗಳಕ್ಕಿಳಿದಿದ್ದಾರೆ.
ಸ್ಟಾರ್​ ನಟ ಸುದೀಪ್​ ಬಿಜೆಪಿಯ ಕ್ಯಾಂಪೇನರ್​ ಆಗುವ ವಿಚಾರವಾಗಿ ಸುರ್ಜೇವಾಲಾ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ಕೌಂಟರ್​ ಕೊಟ್ಟಿರುವ ಸಚಿವ ಸುಧಾಕರ್ “ಹಿಂದೆ ಕಾಂಗ್ರೆಸ್​ನವರು ಇಬ್ಬರು ನಟಿಯರನ್ನ ಮಂತ್ರಿ ಮಾಡಿರಲಿಲ್ವಾ? ಅನ್ಯ ಪಕ್ಷದವರು ಬಿಜೆಪಿ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ‌ ಮೋದಿ ಅವರ‌ಆಡಳಿತದ ಮೇಲೆ ನಂಬಿಕೆ ಇಟ್ಟು ನಾಯಕರು ಪಕ್ಷಕ್ಕೆ ಬರ್ತಿದ್ದಾರೆ. ನಟ ಸುದೀಪ್ ಅವರೇ ಬಿಜೆಪಿಯ ಸ್ಟಾರ್ ಕ್ಯಾಂಪೇನರ್​” ಎಂದು ಬಿಜೆಪಿ ಕಚೇರಿಯಲ್ಲಿ ಸಚಿವ ಸುಧಾಕರ್‌ ಹೇಳಿಕೆ ನೀಡಿದ್ದಾರೆ.
ಇದೇ ಸಂದರ್ಭ ಇತರ ನಟರಿಗೂ ಆಹ್ವಾನ ನೀಡಿದ ಸಚಿವರು “ಸುದೀಪ್​ ಪಕ್ಷದ ಸ್ಟಾರ್ ಕ್ಯಾಂಪೇನರ್ ಆಗಿಯೇ ಪ್ರಚಾರ ಮಾಡ್ತಾರೆ. ಈಗಾಗಲೇ ಅವ್ರು ಮುಖ್ಯಮಂತ್ರಿಗಳಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಅವರು ಎಲ್ಲೆಲ್ಲಿ ಪ್ರಚಾರ ಮಾಡಬೇಕು ಎಂದು ಶೀಘ್ರವೇ ತೀರ್ಮಾನ ಮಾಡ್ತೀವಿ. ಇನ್ನೂ ಹಲವು ಸ್ಟಾರ್ ನಟರು ಪ್ರಚಾರಕ್ಕೆ ಬಂದರೆ ಸ್ವಾಗತ” ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
