ಬಾಗಲಕೋಟೆ:ಸುಮಾರು 53 ದಿನಗಳಿಂದ ಕಬ್ಬು ಬೆಳೆಗಾರರು ಕಾರ್ಖಾನೆಗಳಿಗೆ ಕಬ್ಬು ಪೂರೈಸದೇ ವಿಶಿಷ್ಟವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಬೆಳೆದ ಕಬ್ಬಿಗೆ ಸರಿಯಾದ ಹಣ ಸಿಗುತ್ತಿರಲಿಲ್ಲ ಎಂದು ರೈತರು ಹೋರಾಟ ನಡೆಸುತ್ತಿದ್ದರು. ರೈತರ ಹೋರಾಟ ಇವತ್ತು ಮುಧೋಳ ನಗರದಲ್ಲಿ ಕಡೆಗೂ ಅಂತ್ಯ ಕಂಡಿದೆ.
ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್​ನಲ್ಲಿ‌ ರೈತರು ಹೋರಾಟ ನಿರತರಾಗಿದ್ದರು. ರೈತರ ಪ್ರತಿಭಟನೆಯನ್ನು ಕಡೆಗೂ ಗಣನೆಗೆ ತೆಗೆದುಕೊಂಡ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸದ್ಯ ಸರ್ಕಾರ, ರೈತರ ಬೇಡಿಕೆಯಂತೆ ಕಬ್ಬಿಗೆ ಬೆಲೆ ಕೊಡಿಸುವ ಭರವಸೆ ನೀಡಿದೆ. ಹೀಗಾಗಿ ರೈತರು ತಮ್ಮ ಹೋರಾಟವನ್ನು ಹಿಂಪಡೆದಿದ್ದಾರೆ.
ಪ್ರತಿ ಟನ್​ಗೆ ರೈತರ ಬೇಡಿಕೆಯಂತೆ 2850 ರೂ. ಕೊಡಿಸಲು ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರೈತರು ತಮ್ಮ ಹೋರಾಟ ಕೈಬಿಟ್ಟಿದ್ದಾರೆ.
ಫೋನ್ ಮೂಲಕ ಬಾಗಲಕೋಟೆ ಡಿಸಿಗೆ ಬೊಮ್ಮಾಯಿ ಸಂದೇಶ ರವಾನಿಸಿದ್ದಾರೆ . ಮುಖ್ಯಮಂತ್ರಿ ಡಿಸಿಗೆ ನೀಡಿದ್ದ ಭರವಸೆ ಬಗ್ಗೆ ಹೋರಾಟದ ಸ್ಥಳಕ್ಕೆ ಬಂದು ಬಾಗಲಕೋಟೆಯ ಎ.ಡಿ.ಸಿ ಮಹದೇವ ಮುರಗಿ, ಜಮಖಂಡಿಯ ಎ.ಸಿ ಸಿದ್ದು ಹುಲ್ಲಳ್ಳಿ ಮತ್ತು ಎಸ್ಪಿ ಜಯಪ್ರಕಾಶ್​ ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ಟನ್ ಗೆ 2850 ರೂ. ಬೆಲೆ ಕೊಡಿಸುವ ಹೊಣೆಯನ್ನು ಜಿಲ್ಲಾಡಳಿತ ಹೊತ್ತುಕೊಂಡಿದೆ. ಉಳಿದಂತೆ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಏಳು ದಿನಗಳ ಒಳಗಾಗಿ ರೈತ ಮುಖಂಡರ ಜೊತೆ ಸಭೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದಾರೆಂದು ಸಭೆಗೆ ಮಾಹಿತಿ. ನೀಡಲಾಯಿತು. ಟನ್ ಗೆ 2850 ರೂ. ಬೆಲೆಯನ್ನು ಚಪ್ಪಾಳೆ ತಟ್ಟಿ ರೈತರು ಸ್ವಾಗತಿಸಿದರು. ಬೇಡಿಕೆ ಪೂರೈಕೆ ಆದ ಹಿನ್ನೆಲೆಯಲ್ಲಿ ರೈತರು ನಾಳೆಯಿಂದಲೇ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಲಿದ್ದಾರೆ. ಹೀಗಾಗಿ ಬಂದ್ ಆಗಿದ್ದ ಮುಧೋಳ ತಾಲೂಕಿನ ಸಕ್ಕರೆ ಕಾರ್ಖಾನೆಗಳು ನಾಳೆ ಬೆಳಗ್ಗೆಯಿಂದಲೇ ಆರಂಭ ಆಗಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
