ಬೆಂಗಳೂರು:ಕಬ್ಬು ಬೆಳೆಗಾರರ ರೇಟ್ ಚಾರ್ಜ್ ಬಗ್ಗೆ ಇಂದು ವಿಕಾಸಸೌಧದಲ್ಲಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಸಭೆ ನಡೆಸಿ, ಕಬ್ಬು ಕಟಾವು ದರ, ಎಫ್ಆರ್ ಪಿ ಹೆಚ್ಚಳ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು.
ಕಬ್ಬು ಇಲಾಖೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಕ್ಕರೆ ನಿಯಂತ್ರಣ ಮಂಡಳಿ, ರೈತ ಹೋರಾಟಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರನ್ನು (ಸರ್ಕಾರಿ ಹಾಗೂ ಖಾಸಗಿ) ಒಟ್ಟುಗೂಡಿಸಿ ಇಂದು ಸಭೆ ನಡೆಸಲಾಗಿದೆ.
ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಪ್ರಕಾರ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿ ಕೈಗೊಳ್ಳುವ ನಿರ್ಣಯಗಳಿಗೆ ಬದ್ಧರಾಗಿರುವುದಾಗಿ ವಿವಿಧ ಸಂಘಗಳು, ಕಬ್ಬು ಬೆಳೆಗಾರರು ಒಪ್ಪಿಕೊಂಡಿದ್ದಾರೆ.
ಸಕ್ಕರೆ ಹಾಗೂ ಸಕ್ಕರೆ ಸಹ ಉತ್ಪನ್ನಗಳ ದರವನ್ನು ಹೆಚ್ಚಿಸಿ, ರೈತರು ಲಾಭವನ್ನು ಹಂಚಿಕೊಳ್ಳಬೇಕು ಎಂಬ ಸಂಬಂಧ ಸಮಿತಿಯು ವೈಜ್ಞಾನಿಕ ಅಧ್ಯಯನ ನಡೆಸಿ ಇನ್ನು ಒಂದು ವಾರದೊಳಗೆ ವರದಿ ಸಲ್ಲಿಸಲಿದೆ. ಆ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿ, ಕೂಡಲೇ ಒಂದು ತೀರ್ಮಾನ ಘೋಷಣೆ ಮಾಡಲು ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಚಿವ ಮುನೇನಕೊಪ್ಪ ಮಾತನಾಡಿ, “ದೇಶದಲ್ಲಿಯೇ ಕಬ್ಬು ಬೆಳೆಗಾರರಿಗೆ ಪೂರ್ತಿ ಹಣ ಪಾವತಿ ಮಾಡುತ್ತಿರುವ ರಾಜ್ಯ ಕರ್ನಾಟಕ. ರೈತರು ಪಾವತಿ ಸಂಬಂಧವಾಗಿ ರಸ್ತೆಗಿಳಿಯದಂತೆ ಸತತ ಎರಡು ವರ್ಷಗಳಿಂದಲೂ ಸರ್ಕಾರ ಕ್ರಮ ವಹಿಸಿದೆ. ಈಗ ರೈತರು ಕೇಳುತ್ತಿರುವಂತೆ ಎಫ್ ಆರ್ ಪಿ ದರಕ್ಕಿಂತಲೂ ಹೆಚ್ಚು ಮೊತ್ತವನ್ನು ಕೊಡಿಸಲು ಸರ್ಕಾರ ಶ್ರಮಿಸುತ್ತಿದೆ. ಕಾರ್ಖಾನೆ ಮಾಲೀಕರಿಗೂ ತೊಂದರೆಯಾಗದ ರೀತಿಯಲ್ಲಿ ರೈತರಿಗೂ ಹಿತ ಎನಿಸುವಂತೆ ಒಂದು ನಿರ್ಣಯ ಕೈಗೊಳ್ಳಲಾಗುವುದು. ರೈತರು ಸಹಕರಿಸಬೇಕು. ಸರ್ಕಾರ ರೈತರ ಪರವಾಗಿದೆ. ರೈತರ ಪರವಾಗಿಯೇ ನಿರ್ಣಯ ಕೈಗೊಳ್ಳಲಾಗುವುದು” ಎಂದರು.
ಇಂದು ರಚಿಸಲಾದ ಸಮಿತಿಯ ಸದಸ್ಯರ ವಿವರ ಇಂತಿದೆ. ಶಿವಾನಂದ ಕಲಕೇರಿ, ಆಯುಕ್ತರು ಕಬ್ಬುಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು – ಅಧ್ಯಕ್ಷರು; ಡಾ. ಎಂ.ಬಿ.ಲೋಂಡ – ಸಲಹೆಗಾರರು; ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಹಾಗೂ ಸಕ್ಕರೆ ತಜ್ಞರು – ಸದಸ್ಯರು; ಡಾ. ಗೋವಿಂದ ಮಿಸಾಲೆ, ಉಪಾಧ್ಯಕ್ಷರು, (ಮದ್ಯಸಾರ), ರೇಣುಕಾ ಶುಗರ್ ಲಿ., ಬೆಳಗಾವಿ – ಸದಸ್ಯರು; ಪ್ರವೀಣ್ ಘಾಳಿ, ಚಾರ್ಟ‌ರ್ ಅಕೌಂಟೆಂಟ್, ಘಾಳಿ ಅಂಡ್ ಕಂಪನಿ, ಬೆಳಗಾವಿ – ಸದಸ್ಯರು; ಡಾ. ಆರ್.ಬಿ. ಖಾಂಡಗಾವ ನಿರ್ದೇಶಕರು, ಎಸ್‌. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ – ಸದಸ್ಯ ಕಾರ್ಯದರ್ಶಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − one =
Remember me
