ಚಾಮರಾಜನಗರ:ಗೆಳೆಯರೊಂದಿಗೆ ಆಟವಾಡಿ ಕಬ್ಬು ತಿನ್ನಲು ಹೋಗಿದ್ದ 8 ವರ್ಷದ ಬಾಲಕ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿಯಲ್ಲಿ ಸಂಭವಿಸಿದೆ.
ಗ್ರಾಮದ ಮಹದೇವಶೆಟ್ಟಿ ಎಂಬುವರ ಪುತ್ರ ವಿಜಯ ಶಿವಕುಮಾರ್ ಶೆಟ್ಟಿ(8) ಮೃತ ದುರ್ದೈವಿ. ನಿನ್ನೆ (ಗುರುವಾರ) ಇಬ್ಬರು ಗೆಳೆಯರೊಂದಿಗೆ ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದ ವಿಜಯ ಶಿವಕುಮಾರ್ ಶೆಟ್ಟಿ, ಸ್ನೇಹಿತರೊಟ್ಟಿಗೆ ಕಬ್ಬು ತಿಂದಿದ್ದ. ಇನ್ನು ಸ್ವಲ್ಪ ಕಬ್ಬು ಬೇಕು, ಇದು ಸಾಕಾಗಲಿಲ್ಲ ಎಂದವ ಗೆಳೆಯರನ್ನ ಬಿಟ್ಟು ಮತ್ತೆ ಕಬ್ಬು ತರಲು ಹೋಗಿದ್ದ.ಇದನ್ನೂ ಓದಿರಿಛೇ..ಛೇ.. ಇಂದೆಂಥ ಅಸಹ್ಯ? ಕಲಾಪದಲ್ಲೇ ಕೂತು ಅಶ್ಲೀಲ ವಿಡಿಯೋ ನೋಡಿದ ಕಾಂಗ್ರೆಸ್​ ಎಂಎಲ್​ಸಿ
ಸಂಜೆಯಾದರೂ ವಿಜಯ ಶಿವಕುಮಾರ್ ಶೆಟ್ಟಿ ಮನೆಗೆ ವಾಪಸ್​ ಬಂದಿರಲಿಲ್ಲ. ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದರು. ಇಂದು(ಶುಕ್ರವಾರ) ಗ್ರಾಮದ ಕೆರೆ ಸಮೀಪ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ಮೂಗು, ಕಿವಿಯಿಂದ ರಕ್ತ ಬಂದಿರುವ ಕಲೆ ಮೃತದೇಹದ ಮೇಲಿದೆ. ಬೆನ್ನು ಭಾಗಕ್ಕೆ ಪೆಟ್ಟಾಗಿದೆ. ಕಬ್ಬು ತರಲೆಂದು ಹೋಗುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಆತ ಮೃತಪಟ್ಟಿರಬಹುದು, ಶವವನ್ನ ಕೆರೆ ಸಮೀಪ ದುಷ್ಕರ್ಮಿಗಳು ಎಸೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮಗ ಶವವಾಗಿ ಪತ್ತೆಯಾಗುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ತನಿಖೆ ಮುಂದುವರಿಸಿದ್ದಾರೆ.
ಛೇ..ಛೇ.. ಇಂದೆಂಥ ಅಸಹ್ಯ? ಕಲಾಪದಲ್ಲೇ ಕೂತು ಅಶ್ಲೀಲ ವಿಡಿಯೋ ನೋಡಿದ ಕಾಂಗ್ರೆಸ್​ ಎಂಎಲ್​ಸಿ

ಅಂಚೆ ಕಚೇರಿಯಲ್ಲೂ ನಿಮ್ಮ ಹಣ ಸೇಫಲ್ಲ! ಬಡವರ ಹಣ ದೋಚುತ್ತಾರೆ ಖತರ್ನಾಕ್ ಅಧಿಕಾರಿಗಳು…

ಹಿರಿಮಗನನ್ನು ಕೊಲ್ಲಲು ಕಿರಿಮಗನಿಗೆ ಸುಪಾರಿ ಕೊಟ್ಟ ಪಾಪಿ ತಂದೆ!ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಬೆಣ್ಣೆಹೊಳೆ ಫಾಲ್ಸ್​ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
