ನೆಲಮಂಗಲ:ಬೇರೊಬ್ಬರ ಹೆಂಡ್ತಿ ಜತೆ ಮನೆಬಿಟ್ಟು ಓಡಿಹೋಗಿದ್ದ ಯುವಕನನ್ನು ಪೊಲೀಸ್​ ಠಾಣೆಗೆ ಕರೆಸಿ ಬುದ್ಧಿಮಾತು ಹೇಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದಲ್ಲಿ ವಿವಾಹಿತ ಮಹಿಳೆಯೊಂದಿಗೆ ಯುವಕನೊಬ್ಬ ಮೂರು ದಿನಗಳ ಹಿಂದೆ ಪರಾರಿಯಾಗಿದ್ದ. ಈ ಜೋಡಿಯನ್ನು ಇಂದು (ಮಂಗಳವಾರ) ನೆಲಮಂಗಲ ಟೌನ್ ಪೊಲೀಸ್​ ಠಾಣೆಗೆ ಪಿ‌ಎಸ್‌ಐ ಮಂಜುನಾಥ್ ರಾಜಿ ಪಂಚಾಯ್ತಿ ಮಾಡುತ್ತಿದ್ದರು. ಬುದ್ಧಿಮಾತು ಹೇಳಿದ್ದ ವೇಳೆ ಹತಾಶೆಗೊಂಡ ಯುವಕ, ಠಾಣೆಯಲ್ಲೇ ಇದ್ದ ಸ್ಯಾನಿಟೈಸರ್ ಅನ್ನು ಎತ್ತಿಕೊಂಡು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇದನ್ನೂ ಓದಿರಿ‘ಅಪ್ಪ.. ಯಾವ ಕಾಲೇಜಿಗೆ ಸೇರಿಸುತ್ತಿದ್ದೆ?’ ಎಂದ ಮಗ ಬಾರದ ಲೋಕಕ್ಕೆ ಸೇರಿಯೇಬಿಟ್ಟ!
ಮೂರು ದಿನಗಳ ಹಿಂದೆ ಪರಾರಿಯಾಗಿದ್ದ ಜೋಡಿ ಈ ಹಿಂದೆಯೇ ಪ್ರೀತಿಸುತ್ತಿದ್ದರು. ಮಹಿಳೆಯ ಮದುವೆಗೂ ಮುನ್ನವೇ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಆದರೆ, ಯುವತಿ ಮದುವೆ ಬೇರೊಬ್ಬನ ಜತೆ ಆಗಿದೆ. ಮದುವೆ ಆದ ಬಳಿಕವೂ ಹಳೇ ಪ್ರೀತಿ ಹಸಿಯಾಗೇ ಇತ್ತು. ಒಬ್ಬರನ್ನೊಬ್ಬರು ಬಿಟ್ಟಿರಲಾಗದ ಆ ಜೋಡಿ ಮನೆ ಬಿಟ್ಟು ಓಡಿಹೋಗಿತ್ತು.
ಪ್ರಕರಣ ಠಾಣೆ ಮೆಟ್ಟಿಲೇರಿದ್ದರಿಂದ ಆ ಜೋಡಿಯನ್ನು ಕರೆಸಿ ಪೊಲೀಸರು ಬುದ್ಧಿಮಾತು ಹೇಳುತ್ತಿದ್ದರು. ಅಷ್ಟರಲ್ಲಿ ಆ ಯುವಕನು ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡ ಆತನನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಅರಬ್​ ದೇಶಗಳಿಗೆ ಯುವತಿಯರ ಕಳ್ಳ ಸಾಗಣೆ; ಫೋಟೋ ಸ್ಟುಡಿಯೋ ನೆಪದಲ್ಲಿ ಬೆಂಗಳೂರಿನಲ್ಲೇ ದಂಧೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − one =
Remember me
