ಬೆಂಗಳೂರು:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಟಿಕೆಟ್ ಕಾಯ್ದಿರಿಸುವ ಕೌಂಟರ್ ಬಳಿ ಪ್ರಯಾಣಿಕ ಮರೆತು ಹೋಗಿದ್ದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಸೂಟ್‌ಕೇಸನ್ನು ನಗರ ರೈಲ್ವೆ ಠಾಣೆ ಪೊಲೀಸರು ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಹೊಂಗಸಂದ್ರ ನಿವಾಸಿ ರಮೇಶ್ ಚಂದ್ ಎಂಬವರು ಮಂಗಳವಾರ ರಾತ್ರಿ 9.30ರಲ್ಲಿ ಕುಟುಂಬ ಸಮೇತ ರೈಲಿನಲ್ಲಿ ಆಜ್ಮೀರ್‌ಗೆ ತೆರಳಲು ರೈಲು ನಿಲ್ದಾಣಕ್ಕೆ ಬಂದಿದ್ದರು. 20 ಲಗೇಜ್ ಬ್ಯಾಗ್‌ಗಳ ಪೈಕಿ ಒಂದು ಸೂಟ್‌ಕೇಸ್​ನಲ್ಲಿ ಚಿನ್ನಾಭರಣ ಇಟ್ಟಿದ್ದರು. ಟಿಕೆಟ್ ರಿಸರ್ವೇಷನ್ ಕೌಂಟರ್ ಬಳಿ ಆ ಸೂಟ್‌ಕೇಸ್ ಮರೆತು ಹೋಗಿದ್ದರು. ಇದನ್ನು ಗಮನಿಸಿದ ಗೃಹ ರಕ್ಷಕ ಗುರುರಾಜ್, ವಶಕ್ಕೆ ಪಡೆದು ರೈಲ್ವೇ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಅದನ್ನು ತೆರೆದು ನೋಡಿದಾಗ, ಚಿನ್ನಾಭರಣ ಇರುವುದು ಬೆಳಕಿಗೆ ಬಂದಿದೆ.
ಇತ್ತ 2 ಗಂಟೆಗಳ ಬಳಿಕ ಸೂಟ್‌ಕೇಸ್ ಇಲ್ಲದಿರುವುದು ಗಮನಿಸಿ ಆಘಾತಗೊಂಡ ರಮೇಶ್, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಇಂದು ಠಾಣೆಗೆ ಬಂದ ರಮೇಶ್​ ನಡೆದ ಎಲ್ಲ ವಿಚಾರ ತಿಳಿಸಿ ಸೂಟ್​​ಕೇಸನ್ನು ಪೊಲೀಸರಿಂದ ಸ್ವೀಕರಿಸಿದ್ದಾರೆ. ಗೃಹ ರಕ್ಷಕ ಗುರುರಾಜ್ ಕಾರ್ಯಕ್ಷಮತೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಹಿಂದು ರುದ್ರಭೂಮಿಯಲ್ಲಿನ ಸಮಾಧಿಗಳನ್ನು ವಿರೂಪಗೊಳಿಸಿದ ಎಸ್​ಡಿಪಿಐ?!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 5 =
Remember me
