ಮಂಗಳೂರು : ದಕ್ಷಿಣ ಕನ್ನಡ ಗಡಿಭಾಗವಾದ ಸುಳ್ಯ ತಾಲೂಕಿನಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವವಾಗಿ ಮನೆಮಂದಿ ಜೀವಭಯದಿಂದ ಹೊರಗೋಡಿ ಬಂದ ಘಟನೆ ಇಂದು ಮುಂಜಾನೆ 7.45ರ ಸುಮಾರಿಗೆ ನಡೆದಿದೆ.
ಸಂಪಾಜೆ, ಅರಂತೋಡು,ಪೆರಾಜೆ, ಜಾಲ್ಸೂರು, ಉಬರಡ್ಕ, ತೊಡಿಕಾನ, ಮಿತ್ತೂರು ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ್ದು, ಜನರು ಭಯಭೀತಗೊಂಡು ಮನೆಯಿಂದ ಹೊರಗೆ ಬಂದಿದ್ದಾರೆ.
ಬೆಳಗ್ಗೆ 7.45ರ ಸಮಯದಲ್ಲಿ ಕಂಪನದ ಅನುಭವ ಆಗಿದ್ದು, ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿರುವ ಬಗ್ಗೆ ಸಾರ್ವಜನಿಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕಿಟಕಿ, ಪಾತ್ರೆ,ಮನೆಯೊಳಗಿದ್ದ ವಸ್ತುಗಳು ಕಂಪನದಿಂದ ಅಲುಗಾಡಿದ್ದು ಪಾತ್ರೆಗಳೆಲ್ಲವೂ ಕೆಳಗೆ ಬಿದ್ದಿದ್ದು, ಸುಮಾರು 3 – 4 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ.
ಜೂ, 25 ರಂದು ಕೂಡಾ ಭೂಕಂಪನದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯ ಭೂಕಂಪ ದಾಖಲಾಗಿತ್ತು ಎಂದು ರಾಜ್ಯ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ತಿಳಿಸಿತ್ತು. ಬೆಳಗ್ಗೆ ಸುಮಾರು 9 ಗಂಟೆ 9 ಸೆಕೆಂಡಿಗೆ ಈ ಭೂಕಂಪನ ದಾಖಲಾಗಿದ್ದು, 4.7 ಕಿಲೋಮೀಟರ್ ಮುಖ್ಯ ಸ್ಥಾನದಿಂದ ಸುತ್ತಳತೆ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + four =
Remember me
