ಮಂಡ್ಯ:ಸ್ವಾಭಿಮಾನಿ ಸಂಸದೆ ಸುಮಲತಾ ಬಿಜೆಪಿಗೆ ಸಂಪೂರ್ಣ ಬೆಂಬಲ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಇದೀಗ ಕಾಂಗ್ರೆಸ್ ಮುಖಂಡ ಡಾ| ರವೀಂದ್ರ ತಿರುಗಿಬಿದ್ದಿದ್ದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ| ರವೀಂದ್ರ ಸುಮಲತಾ ವಿರುದ್ಧ ತಿರುಗಿಬಿದ್ದಿದ್ದು ‘ಮೇಡಂ ಇನ್ಮುಂದೆ ಸ್ವಾಭಿಮಾನಿ ಅನ್ನೋ ಪದ ಬಳಸಬೇಡಿ ಎಂದು ತಾಕೀತು ಮಾಡಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, ‘ನೀವು ಕೊಲೆಗಡುಕರಾಗಿದ್ದೀರಿ, ಕತ್ತು‌ ಹಿಸುಕುದ್ದೀರಿ. ತಾವೂ ಬೆನ್ನಿಗೆ ಚೂರಿ ಹಾಕೋರು ಅನ್ನೋದನ್ನ ಹೇಳಿ. ಸುಮಲತಾರಿಗಾಗಿ, ಜಿಲ್ಲೆ, ಅಸ್ಮಿತೆ, ಸ್ವಾಭಿಮಾನಕ್ಕಾಗಿ 249 ಕಿ.ಮೀ ಪಾದಯಾತ್ರೆ ಮಾಡಿದ್ದೆ. ನನ್ನಂತ ಹಲವರ ಹೋರಾಟದಿಂದ ನೀವು ಗೆದ್ರಿ ಆದಾದ ಬಳಿಕ ನೀವು ಎಲ್ಲಿಗ್ ಹೋದ್ರಿ? ಗೆದ್ದಮೇಲೆ ಜಿಲ್ಲೆಗೆ ಏನಾದ್ರು ಮಾಡಬೇಕು ಎಂಬ ಪ್ರಯತ್ನ ಪಟ್ರಾ? ಅದ್ಯಾವುದನ್ನು ನೀವು ಮಾಡ್ಲಿಲ್ಲ. ನಿಮಗೆ ಅದ್ಯಾರು ಮಾರ್ಗದರ್ಶಕರೋ ಗೊತ್ತಿಲ್ಲ. ಜಿಲ್ಲೆಯ ಬೆಳವಣಿಗೆಗೆ ಏನು ಬೇಕು ಅಂತಾ ಹೇಳುವ ಯೋಗ್ಯತೆ ನಮಗೆ ಇರಲಿಲ್ವಾ?
ಇದನ್ನೂ ಓದಿ:ಸುಮಲತಾ ಅಂಬರೀಷ್ ಬೆಂಬಲ ಬೂಸ್ಟರ್ ಡೋಸ್; ಮಂಡ್ಯದ BJP ಕಾರ್ಯಕರ್ತರಿಗೆ ಬಿ.ಎಲ್.ಸಂತೋಷ ಪತ್ರ!
ಆ ಯೋಗ್ಯತೆ ನಮಗಿಲ್ಲ ಅಂತಾ ನೀವು ಯಾಕೆ ಅನ್ಕೊಂಡ್ರಿ. ಇವತ್ತು ಯಾಕೆ ಸ್ವಾಭಿಮಾನಿ ಅಂತಾ ಪದೇ ಪದೇ ಬಳಸುತ್ತೀರಿ. ಸ್ವಾಭಿಮಾನಕ್ಕು ನಿಮಗೂ ಎಲ್ಲಿಂದೆಲ್ಲಿ ಸಂಬಂಧ? ಯಾವ ಸ್ವಾಭಿಮಾನಿ ಕೆಲಸವನ್ನ ನೀವು ಮಾಡಿದ್ದೀರಾ. ನಿಮ್ಮನ್ನ ಇವತ್ತು ಬರ್ತೀರಾ, ನಾಳೆ ಬರ್ತೀರಾ ಎಂದು ಕಾದಿದ್ದು ಒಂದೆ ಜಿಲ್ಲೆಗೆ ಭಾಗ್ಯ. ಇವತ್ತು ನರೇಂದ್ರ ಮೋದಿಯವರ ಅದ್ಭುತ ಕಾರ್ಯದಿಂದ ಅವರನ್ನ ಸಂಪೂರ್ಣ ಬೆಂಬಲಿಸ್ತೀನಿ ಅಂತೀರಾ. ಅವತ್ತು ನಿಮ್ಮನ್ನ ಗೆಲ್ಲಿಸಲು ಹೋರಾಟ ಮಾಡಿದ್ರಲ್ಲ ಅವರ ಕಥೆ ಏನು?
ನಾನು, ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡೀಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಬಿ.ಚಂದ್ರಶೇಖರ್ ಜೊತೆ ನಿಂತಿದ್ದೆವು. ಇವತ್ತು ಯಾರಿಗೆ ನೀವು ನ್ಯಾಯ ಕೊಡ್ತಿದ್ದೀರಾ? ನೀವು ಈಗಲೇ ಉತ್ತರ ಕೊಡಿ. ನಿಮ್ಮ ಬಾಯಲ್ಲಿ ಇಂದಿನಿಂದ ಸ್ವಾಭಿಮಾನ ಅನ್ನೋ ಪದ ಬರಬಾರದು! ನಮ್ಮ ಜಿಲ್ಲೆಯ ಸ್ವಾಭಿಮಾನವನ್ನ ನೀವು ಅಡವಿಡಲು ಹೋಗಬೇಡಿ. ನಿಮಗೆ ಸ್ವಾಭಿಮಾನ ಅಂತೇಳಲು ಯಾವುದೇ ಹಕ್ಕಿಲ್ಲ. ಇದಕ್ಕೆಲ್ಲ ಈಗಲೇ ಉತ್ತರಕೊಡಿ. ನೀವು ಬೆನ್ನಿಗೆ ಚೂರಿ ಹಾಕೋರು ಅನ್ನೋದನ್ನ ಹೇಳಿ. ಸಚ್ಚಿದಾನಂದನನ್ನ ಬಿಟ್ಟುಕೊಡಲು ನಿಮಗೆ ಆಗಲ್ಲ. ಹಾಗಿದ್ರೆ ರಮೇಶ್ ಬಂಡೀಸಿದ್ದೇಗೌಡ, ಬೆಂಬಲವಾಗಿ ನಿಂತ ರೈತ ಸಂಘಕ್ಕೆ ಏನು ನ್ಯಾಯ ಕೊಡ್ತೀರಾ? ನಮ್ಮಣ್ಣನ ಮರ್ಯಾದೆ ಕಳೆಯಲು ಹೋಗಬೇಡಿ.

ನೀವು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ. ಇಲ್ಲದಿದ್ದರೇ ಇನ್ನು ಹತ್ತು ಹಲವು ವಿಚಾರಗಳು ಹೊರಗೆ ಬರ್ತಾವೆ. ಭವಿಷ್ಯದಲ್ಲಿ ಯಾವತ್ತು ಸ್ವಾಭಿಮಾನಿ ಅನ್ನೋ ಪದ ಉಪಯೋಗಿಸಬೇಡಿ’ ಎಂದು ಸಂಸದೆ ಸುಮಲತಾಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಹೆಚ್.ಎನ್.ರವೀಂದ್ರ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
