ಮಂಡ್ಯ:ಸಕ್ಕರೆ ನಾಡು ಮಂಡ್ಯದಲ್ಲಿ ಈ ಬಾರಿ ಜನ ಬದಲಾವಣೆ ಬಯಸುತ್ತಿದ್ದಾರೆ. ಖಂಡಿತವಾಗಿ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಅಂತ ಹೇಳಿಕೊಂಡು ಓಡಾಡುತ್ತಿದ್ದ ಸಂಸದೆ ಸುಮಲತಾ ಅಂಬರೀಷ್​ ಅವರಿಗೆ ಚುನಾವಣಾ ಫಲಿತಾಂಶದಿಂದ ಭಾರೀ ಮುಖಭಂಗವಾಗಿದೆ.
ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ ಬಳಿಕ ಮೊದಲ ಟಾಸ್ಕ್​ನಲ್ಲೇ ಸಂಸದೆ ಸುಮಲತಾ ಫೇಲ್ ಆಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಒಂದೇ ಒಂದು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಿಸಿಕೊಳ್ಳುವಲ್ಲಿ ಸುಮಲತಾ ಅಂಬರೀಷ್​ ವಿಫಲವಾಗಿದ್ದಾರೆ. ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಅಲ್ಲದೆ, ಬಿಜೆಪಿ ಗೆಲ್ಲಿಸುವ ಪಣತೊಟ್ಟಿದ್ದರು. ಆದರೆ, ಹೊರಬಿದ್ದಿರುವ ಫಲಿತಾಂಶ ಸುಮಲತಾಗೆ ಮುಖಭಂಗವಾಗಿದೆ.
ಇದನ್ನೂ ಓದಿ:ಆಘಾತದಿಂದ ಹೊರ ಬಾರದ ಪರಾಜಿತರು: ಹಂಗಾಮಿ ಸಿಎಂ ಬೊಮ್ಮಾಯಿ ಬಳಿ ಬೇಸರ ನಿವೇದನೆ
ಇನ್ನೂ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ರೆಬೆಲ್ ಲೇಡಿಗೆ ರಾಜಕೀಯ ಭವಿಷ್ಯದ ಭಯ ಶುರುವಾಗಿದೆ. ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಹುಮ್ಮಸ್ಸಿನಲ್ಲಿದ್ದ ಸುಮಕ್ಕಗೆ ಇದೀಗ ಬಿಗ್​ ಶಾಕ್ ಎದುರಾಗಿದೆ. ಸಕ್ಕರೆ ನಾಡಿನಲ್ಲಿ ಗೆಲುವು ಸಾಧಿಸುವುದಿರಲಿ ಕನಿಷ್ಠ ಪೈಪೋಟಿ ಕೊಡುವುದಕ್ಕೂ ಬಿಜೆಪಿ ವಿಫಲವಾಗಿದ್ದು, ಸುಮಲತಾ ಅವರಿಗೆ ಮುಂದಿನ ರಾಜಕೀಯ ಹಾದಿ ಕಠಿಣ ಎಂಬಂತೆ ಭಾಸವಾಗುತ್ತಿದೆ.
ಲೋಕಸಭಾ ಚುನಾವಣೆಗೆ ಇನ್ನೊಂದೆ ವರ್ಷ ಬಾಕಿ ಇದೆ. ಈ ಚುನಾವಣೆಯಲ್ಲೂ ಹಿನ್ನೆಡೆ ಅನುಭವಿಸುವ ಭಯ ಸುಮಕ್ಕನಿಗೆ ಕಾಡುತ್ತಿದೆ. ಕಾಂಗ್ರೆಸ್, ಜೆಡಿಎಸ್​ಗೆ ಸೆಡ್ಡು ಹೊಡೆಯಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಬಿಜೆಪಿ ಹೀನಾಯ ಸೋಲಿನೊಂದಿಗೆ ರಾಜಕೀಯ ಭವಿಷ್ಯವೇ ಕಮರುವ ಭೀತಿಯಲ್ಲಿ ಸುಮಲತಾ ಇದ್ದಾರೆ.(ದಿಗ್ವಿಜಯ ನ್ಯೂಸ್​)
ಶಿವಮೊಗ್ಗದಲ್ಲಿ ಹಣಕ್ಕಾಗಿ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು: 20 ಲಕ್ಷ ರೂ.ಗೆ ಬೇಡಿಕೆ

ಪತ್ನಿಯನ್ನು ಕಾಪಾಡಲು ಬಂದ ಪೊಲೀಸ್​ ಅಧಿಕಾರಿಯ ಮೂಗು ಮುರಿದು ಎಸ್ಕೇಪ್​ ಆದ ಗಂಡ!

ಸಿದ್ದರಾಮಯ್ಯ, ಡಿಕೆಶಿ ಜತೆಗೆ ಸಿಎಂ ರೇಸ್​ನಲ್ಲಿ ಮತ್ತೊಂದು ಹೆಸರು: 25ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ಒತ್ತಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + six =
Remember me
