ಮಂಡ್ಯ:ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಆಗಲ್ಲ. ಎಲ್ಲರನ್ನು ವಿಶ್ವಾಸಕ್ಕೆ‌ ತೆಗೆದುಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇನೆ. ಎಲ್ಲ ತೀರ್ಮಾನ ಆದಾಗ ನಾನೇ ಘೋಷಣೆ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಷ್​ ಅವರು ಹೇಳಿದರು.
ಮಂಡ್ಯ ಜಿಲ್ಲೆ ಹಾಗೂ ತಾಲೂಕಿನ ಬಿ.ಗೌಡಗೆರೆ ಗ್ರಾಮದ ಮಹದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ ಬಳಿಕ ಸುಮಲತಾ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಧಾನಸಭಾ ಚುನಾವಣೆಗೆ ಸ್ಪರ್ಧೆಗೆ ಬೆಂಬಲಿಗರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, ಬೆಂಬಲಿಗರು ಅವರವರ ಚರ್ಚೆಗೆ ಸಭೆ ಮಾಡುತ್ತಿದ್ದಾರಷ್ಟೇ. ನನ್ನನ್ನು ಮತ್ತು ಅಭಿಷೇಕ್​ನನ್ನು ರಾಜ್ಯ ರಾಜಕೀಯಕ್ಕೆ ಬನ್ನಿ ಅಂತಾ ಕರೆಯುತ್ತಿದ್ದಾರೆ. ಅದರ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಇದುವರೆಗೆ ಅಧಿಕೃತವಾಗಿ ಯಾವುದೇ ಸಭೆ ಕೂಡ ನಡೆದಿಲ್ಲ. ಕಾಲ ಕೂಡಿ ಬಂದಾಗ ಎಲ್ಲವು ನಿರ್ಧಾರವಾಗುತ್ತದೆ ಎಂದರು.
ನಾನು ಪಕ್ಷ ಸೇರ್ಪಡೆ ವಿಚಾರದಲ್ಲಿ ಯಾರಿಗೂ ಗೊಂದಲವಿಲ್ಲ. ನೀವು ಎಲ್ಲಿ ಇರುತ್ತೀರಾ ಅಲ್ಲಿ ನಾವು ಇರುತ್ತೇವೆ ಅಂತಾ ಬೆಂಬಲಿಗರು ಹೇಳ್ತಾರೆ. ನಾನು ಎಂಪಿ ಚುನಾವಣೆ ನಿಂತಾಗ ಎಲ್ಲರು ಬೆಂಬಲ ನೀಡಿದ್ದಾರೆ. ಗೊಂದಲ ಇದ್ದಿದ್ರೆ ಯಾರು ಕೂಡ ಬೆಂಬಲ ನೀಡುತ್ತಿರುಲಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಬಾವುಟ ಒಂದಾಗಿ ಇರಲಿಲ್ಲ. ನನ್ನ ಚುನಾವಣೆಯಲ್ಲಿ ಎರಡು ಪಕ್ಷಗಳ ಬಾವುಟ ಒಂದಾಗಿದ್ದವು. ಅಂಬರೀಷ್​ ಅವರು ಸಹ ಒಂದು ಪಕ್ಷ ಎಂದು ನೋಡಿರಲಿಲ್ಲ. ಅಂಬರೀಷ್ ಅವರು​ ಅಜಾತಶತ್ರು ಆಗಿದ್ದರು. ಪಕ್ಷಾತೀತವಾಗಿ ಇದ್ದರು. ನನ್ನನ್ನು ಸಹ ಜನರು ಹಾಗೆ ನೋಡ್ತಾ ಇದ್ದಾರೆ ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿ ನೋಡಿಕೊಂಡು ಪಕ್ಷ ಸೇರ್ಪಡೆ ವಿಚಾರದ ಯೋಚನೆ ಮಾಡುತ್ತೇನೆ. ನನಗೆ ಮತ್ತು ನನ್ನ ಮಗನಿಗೆ ಏನು ಉಪಯೋಗ ಆಗುತ್ತದೆ ಅಂತಾ ಲೆಕ್ಕಾಚಾರ ಹಾಕವುದಿಲ್ಲ ಎಂದರು. ಸುಮಲತಾ ರೀತಿ ಸ್ವಾಭಿಮಾನ ಮತ ಕೇಳುತ್ತೀರುವ ಶಿವರಾಮೇಗೌಡರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ನನಗೆ ಈ ಬಗ್ಗೆ ಏನು ಗೊತ್ತಿಲ್ಲ ಎಂದು ನಕ್ಕು ಸುಮ್ಮನಾದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಎಂಟ್ರಿ ಎಕ್ಸಿಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಇದುವರೆಗೆ ಎಂಟ್ರಿ ಎಕ್ಸಿಟ್ ನೀಡಿಲ್ಲ. ನಾನು ದೆಹಲಿಗೆ ಹೋಗುತ್ತಿದ್ದೇನೆ. ನಿತಿನ್ ಗಡ್ಕರಿ ಭೇಟಿ ಮಾಡುತ್ತೇನೆ. ಈ ವೇಳೆ ಹೆದ್ದಾರಿ ವಿಡಿಯೋ ಹಾಗೂ ಫೋಟೋವನ್ನು ತೋರಿಸುತ್ತೇನೆ. ಎಂಟ್ರಿ ಮತ್ತು ಎಕ್ಸಿಟ್ ಬೇಕು ಎಂದು ಅವರನ್ನು ಕೇಳುತ್ತೇನೆ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)
ಚಲಿಸುತ್ತಿದ್ದ ಬೈಕ್​ಗೆ ಫುಟ್​ಬಾಲ್​ ಬಡಿದು ಕೆಳಗೆ ಬಿದ್ದ ಮಹಿಳೆ: ಲಾರಿ ಹರಿದು ದುರಂತ ಸಾವು

ರಸ್ತೆ ಬಂದ್​ ಮಾಡಿ ಅಂಗನವಾಡಿ ಕಾರ್ಯಕರ್ತೆಯರ ತೀವ್ರ ಪ್ರತಿಭಟನೆ…

VIDEO | ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹ್ಯೂಮನ್ ಪವರ್ಡ್​ ವೆಹಿಕಲ್​; ಗುಂಡಿಗಳೇ ತುಂಬಿರುವ ರಸ್ತೆಯಲ್ಲಿ ಸಂಚಾರ ಹೇಗೆ ಎಂದ ನೆಟ್ಟಿಗರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 5 =
Remember me
