ಮಂಡ್ಯ:ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಂಡ ಗೆಲುವು ಸಾಧಿಸಿದ ಸುಮಲತಾ ಅಂಬರೀಷ್​, ಸಂಸದೆಯಾಗಿ ಮೇ 23ಕ್ಕೆ ಎರಡು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸುಮಲತಾ ಅವರು ಗೆಲುವಿನ ಕ್ಷಣವನ್ನು ನೆನೆದು ಫೇಸ್​ಬುಕ್​ ಪೇಜ್​ನಲ್ಲಿ ಮಾಡಿರುವ ಪೋಸ್ಟ್​ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
2 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಂಡ್ಯ ಜನರಿಗೆ ಸುಮಲತಾ ಅವರು ಧನ್ಯವಾದ ಹೇಳಿದ್ದಾರೆ. ಆದರೆ, ಸಂಕಷ್ಟದ ಸಮಯದಲ್ಲಿ ಇದೆಲ್ಲ ಬೇಕಾ? ಎಂದು ಪ್ರಶ್ನಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆಕ್ಸಿಜನ್ ವಿವಾದದ ಬಳಿಕ ಮಂಡ್ಯದಿಂದ ದೂರವಿರುವ ಸುಮಲತಾ ನಡೆಯನ್ನು ಟೀಕಿಸಿದ್ದಾರೆ.
ಮಂಡ್ಯದಲ್ಲಿ ಕರೊನಾ ಅಬ್ಬರದಿಂದ ಸಾಕಷ್ಟು ಸಮಸ್ಯೆಗಳಾಗಿದ್ದರು ಸುಮಲತಾ ಅವರು ಕ್ಷೇತ್ರಕ್ಕೆ ಬಂದಿಲ್ಲ. ಕೇವಲ ಫೇಸ್‌ಬುಕ್‌‌ನಲ್ಲಷ್ಟೇ ಸಕ್ರೀಯರಾಗಿದ್ದಾರೆ. ಕಷ್ಟಕ್ಕೆ ಬೆನ್ನೆಲುಬಾಗಿ ಇರಬೇಕಾದ ಸಂಸದೆ ಇಂದು ಕಣ್ಮರೆ ಆಗಿರುವುದು ವಿಪರ್ಯಾಸ. ಈ ಸಮಯದಲ್ಲಿ ಎರಡು ವರ್ಷದ ಗೆಲುವಿನ ಸಂಭ್ರಮ ಬೇಕಾ? ನಿಮ್ಮನ್ನು ಗೆಲ್ಲಿಸಿದ್ದು ವ್ಯರ್ಥ ಮತ್ತು ಪ್ರಯೋಜನಾ ಇಲ್ಲವೆಂದು ಜಾಲತಾಣದಲ್ಲಿ ಟೀಕೆಗಳ ಸುರಿಮಳೆಗೈದಿದ್ದಾರೆ.
ಕೆ.ಆರ್.ಪೇಟೆ ತಾಲೂಕು ಅಂತಾ ಒಂದು ಇದೆ. ನಿಮಗೇನಾದರೂ ಗೊತ್ತಿದೆಯೇ? ನಾವು ನಿಮ್ಮ ಅಭಿಮಾನಿ, ಗೆದ್ದು ಎರಡು ವರ್ಷ ಆಗಿದೆ‌. ನಮ್ಮ ಊರಿಗೆ ಒಮ್ಮೆಯಾದರೂ ಭೇಟಿ ನೀಡಿದ್ದೀರಾ? ನೀವು ಬೆಂಗಳೂರಿನಲ್ಲಿ ಸುಖವಾಗಿರಿ. ಜನರು ಸ್ವಾಭಿಮಾನದ ಅವಧಿ ಎಷ್ಟು ಬೇಗ ಮುಗಿಯುತ್ತೆ ಅಂತಾ ಕಾಯುತ್ತಿದ್ದಾರೆಂದು ಸಾರ್ವಜನಿಕರು ಜರಿದಿದ್ದಾರೆ.(ದಿಗ್ವಿಜಯ ನ್ಯೂಸ್​)

ಆನ್​ಲೈನ್​ ಕ್ಲಾಸ್​ನಲ್ಲಿ ಅರೆಬೆತ್ತಲೆಯಾದ ಶಿಕ್ಷಕನ ಕರಾಳ ಮುಖ ಬಯಲು ಮಾಡಿದ ವಿದ್ಯಾರ್ಥಿನಿಯರು..!
ಬ್ಲ್ಯಾಕ್ ​ಫಂಗಸ್ ಔಷಧ; ಕನ್ನಡಿಗ ಬಾಂಡ್ಯ ಶ್ರೀಕಾಂತ ಪೈ ಶೋಧನೆ
ಬಾಲಿವುಡ್ ಅಂದ್ರೆ ಸಮಂತಾಗೆ ಭಯವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fourteen =
Remember me
