ಬೆಂಗಳೂರು:ಸಂಸದೆ ಸುಮಲತಾ ಅಂಬರೀಷ್ ಹಾಗೂ​ ಅವರ ಟೀಂ ಬಹುತೇಕ ಬಿಜೆಪಿ ಕಡೆ ವಾಲಿದಂತಿದೆ. ಕಡೆಗೂ ಸುಮಲತಾ ಆಪ್ತನ ಬಿಜೆಪಿ ಸೇರ್ಪಡೆಗೆ ಡೇಟ್​ ಫಿಕ್ಸ್​ ಆಗಿದ್ದು, ನವೆಂಬರ್​ 28ರಂದು ಇಂಡುವಾಳ ಸಚ್ಚಿದಾನಂದ ಬಿಜೆಪಿ ಸದಸ್ಯತ್ವ ಪಡೆಯಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ತಮ್ಮ ಆಪ್ತ ಸಚ್ಚಿದಾನಂದ, ಬಿಜೆಪಿ ಸೇರುವುದಕ್ಕೆ ಸುಮಲತಾ ಅವರು ಹಸಿರು ನಿಶಾನೆ ತೋರಿದ್ದು, ರಾಜ್ಯ ನಾಯಕರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.
ಅಂದಹಾಗೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿರುವ ಇಂಡುವಾಳು ಸಚ್ಚಿದಾನಂದ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ನಿಂತು ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿದ್ದರು. ಇದೀಗ ಸುಮಲತಾ ಒಪ್ಪಿಗೆ ಪಡೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಯಾವುದೇ ಪಕ್ಷದಲ್ಲಿದ್ದರು ಸಚ್ಚಿದಾನಂದ ಬೆಂಬಲಿಸುವುದಾಗಿ ಸುಮಲತಾ ಹೇಳಿಕೊಂಡಿದ್ದರು. ಅಧಿಕೃತವಾಗಿ ಪಕ್ಷ ಸೇರ್ಪಡೆಗೊಳ್ಳದಿದ್ರೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸುಮಲತಾ ಬೆಂಬಲ ನೀಡುವ ಸಾಧ್ಯತೆ ದಟ್ಟವಾಗಿದೆ.
ಇನ್ನೊಂದೆಡೆ ಆಪ್ತನಿಗೆ ಬಿಜೆಪಿಗೆ ಸೇರಲು ಗ್ರೀನ್ ಸಿಗ್ನಲ್​ ಕೊಟ್ಟು ತಮ್ಮ ನಿರ್ಧಾರವನ್ನು ಸುಮಲತಾ ನಿಗೂಢವಾಗಿಯೇ ಇಟ್ಟಿದ್ದಾರೆ. ಪಕ್ಷ ಸೇರ್ಪಡೆ ಬಗ್ಗೆ ಗುಟ್ಟು ಬಿಟ್ಟುಕೊಡದ ಸ್ವಾಭಿಮಾನಿ ಸಂಸದೆಯ ನಿಗೂಢ ನಿಲುವಿಗೆ ಬಿಜೆಪಿ ನಾಯಕರಲ್ಲೂ ಬೇಸರವಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಬಿಜೆಪಿ ನಾಯಕರು ಸಮಲತಾ ಅವರನ್ನು ಪಕ್ಷಕ್ಕೆ ಆಹ್ವಾನ ನೀಡಿದ್ದರು. ಆದರೆ, ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದರೂ ಪಕ್ಷ ಸೇರ್ಪಡೆ ಬಗ್ಗೆ ಸುಮಲತಾ ಮೌನ ವಹಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಸಪ್ತಪದಿ ತುಳಿಯೋ ಮುನ್ನವೇ ಸನ್ನಿಧಿಗೆ ಮೋಸ? ಈ ಸಂಗತಿ ಗೊತ್ತಾದ್ರೆ ವೈಷ್ಣವಿಗೆ ಉಗಿದು ಉಪ್ಪಿನಕಾಯಿ ಹಾಕ್ತಾರಂತೆ!

ಪ್ರೀತಿಗೋಸ್ಕರ 5 ಸಾವಿರ ಕಿ.ಮೀ. ದೂರದಿಂದ ಬಂದ ಪ್ರೇಯಸಿಯನ್ನು ಕೊಂದು ಅಂಗಾಂಗಗಳನ್ನು ಮಾರಿದ ಪ್ರಿಯಕರ

ಸೀಟಿನಲ್ಲಿ ಕೂರದೇ ಟ್ರಕ್ ಪಾರ್ಕ್​ ಮಾಡಿದ ಚಾಲಕ: ವಿಡಿಯೋ ನೋಡಿದ್ರೆ ಹುಬ್ಬೇರೋದು ಗ್ಯಾರೆಂಟಿ!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
