ಬೆಂಗಳೂರು: ಮಂಡ್ಯ ಲೋಕಸಭಾ ಸದಸ್ಯೆ ಮತ್ತು ನಟಿ ಸುಮಲತಾ ಅಂಬರೀಶ್ ಅವರು ಎರಡು ತಿಂಗಳ ಸಂಬಳವಾದ ಎರಡು ಲಕ್ಷ ರೂ.ಗಳನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ಮತ್ತು ಅಷ್ಟೇ ಮೊತ್ತವನ್ನು ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ದೇಣಿಗೆ ನೀಡಿದ್ದಾರೆ. ಇನ್ನು ಮಂಡ್ಯ ನಗರದ ವಿಮ್ಸ್ ಆಸ್ಪತ್ರೆಗೆ ಅವಶ್ಯಕವಿರುವ ವೆಂಟಿಲೇಟರ್‌ಗಳನ್ನು ಒದಗಿಸಲು 2019-20ನೇ ಸಾಲಿನ ಮಂಡ್ಯ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿಯಲ್ಲಿ 50 ಲಕ್ಷ ರೂ ಬಿಡುಗಡೆ ಮಾಡಿದ್ದಾರೆ.
ಕರೊನಾದಿಂದ ಇಡೀ ದೇಶವೇ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಧಾನ ಮಂತ್ರಿ ಪರಿಹಾರ ನಿಧಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಸ್ಥಾಪಿಸಿ, ಅದಕ್ಕೆ ಜನಸಾಮಾನ್ಯರಿಂದ ಧನಸಹಾಯ ಮಾಡುವುದಕ್ಕೆ ಕರೆ ನೀಡಿವೆ. ಆ ಹಣವನ್ನು ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳುವುದಕ್ಕೆ ತೀರ್ಮಾನಿಸಲಾಗಿದೆ. ಈ ಸಂಬಂಧ ಸುಮಲತಾ ಅಂಬರೀಶ್ ಅವರು ಎರಡೆರೆಡುದ ತಿಂಗಳ ಮಾಸಿಕ ವೇತನವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತೀರ್ಮಾನಿಸಿದ್ದು, ಈಗಾಗಲೇ ತಮ್ಮ ಖಾತೆಯಿಂದ ವರ್ಗಾಯಿಸಲು ಸಂಬಂಧಪಟ್ಟ ಬ್ಯಾಂಕಿಗೆ ಸೂಚಿಸಿದ್ದಾರೆ.
ಇನ್ನು ಸಂಸದೆಯಾಗಿ ವಿಮ್ಸ್ ಆಸ್ಪತ್ರೆಗೆ ವೆಂಟಿಲೇಟರ್‌ಗಳನ್ನು ಒದಿಸುವುದಕ್ಕೆ ಹಣ ಸಹಾಯ ಮಾಡಿರುವ ಕುರಿತು ಪ್ರತಿಕ್ರಯಿಸಿರುವ ಅವರು, ‘ಕೋವಿಡ್-19 ಮಹಾಮಾರಿ ದೇಶದಲ್ಲಿ ಹರಡುತ್ತಿದ್ದು, ಅದರ ವಿರುದ್ಧದ ಹೋರಾಟದ ಸಂದರ್ಭದಲ್ಲಿ ನನ್ನ ಕಳಕಳಿಯ ಕೊಡುಗೆ. ಮೊದಲಿಗೆ ಮಂಡ್ಯದ ವಿಮ್ಸ್ ಆಸ್ಪತ್ರೆಗೆ ಕರೊನಾ ವಿರುದ್ಧ ಹೋರಾಡುವ ಸಲುವಾಗಿ ವೆಂಟಿಲೇಟರ್ ಮತ್ತು ಅಗತ್ಯ ಸಲಕರಣೆಗಳನ್ನು ಖರೀದಿಸಲು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂಪಾಯಿಗಳನ್ನು ನೀಡಿದ್ದೇನೆ’ ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.
https://www.vijayavani.net/coronavirus-effect-doordarshan-to-retelecast-ramayan-after-public-demand-from-saturday/
Covid-19 virus.Would like to express my solidarity in this regard and share my humble contribution to help my country during this crisis.I m contributing Rs 50,00,000 from MPLADS funds to Mandya Hospital MIMS for their requirements of procuring ventilators and other equipmentshttps://t.co/WgJfQQ0FFA
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA)March 26, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 12 =
Remember me
