ಮಂಡ್ಯ:ಮೈಸೂರು ಸಂಸದ ಪ್ರತಾಪ ಸಿಂಹ ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ನಡುವೆ ಪರೋಕ್ಷ ಸಮರ ಶುರುವಾಗಿದೆ. ಪ್ರತಾಪ ಸಿಂಹ ಅವರು ಅಧಿಕಾರಿಯೊಬ್ಬರೊಂದಿಗೆ ಮಾತನಾಡುವ ವೇಳೆ ಸುಮಲತಾ ಅವರ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಿಗೆ, ಸುಮಲತಾ ಅಂಬರೀಷ್ ಸೋಮವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ..
ಮೈಸೂರಲ್ಲೇ ಸಾಕಷ್ಟು ಇದೆ…
ಪ್ರತಾಪ್ ಸಿಂಹಗೆ ನನ್ನ ಬಗ್ಗೆ ಮಾತಾಡಲು ಅರ್ಹತೆಯೂ ಇಲ್ಲ, ಹಕ್ಕೂ ಇಲ್ಲ. ಮೈಸೂರಲ್ಲೇ ಮಾಡಬೇಕಾಗಿರುವ ಕೆಲಸ ಸಾಕಷ್ಟು ಇವೆ. ಎರಡು ಸಲ ಸಂಸದರಾಗಿರೋರು ಪ್ರತಾಪ್ ಸಿಂಹ ಬಳಸಿದ ಭಾಷೆ ಸಂಸದ ಸ್ಥಾನಕ್ಕೆ ಗೌರವ ತರುವಂಥದ್ದಲ್ಲ. ಪ್ರತಾಪ್ ಸಿಂಹ ಜವಾಬ್ದಾರಿ ಅರಿತು ಮಾತಾಡಲಿ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
ಸಂಸದರ ಸ್ಥಾನಮಾನಕ್ಕೆ ತಕ್ಕಂತೆ ಗೌರವಯುತವಾಗಿ ಮಾತನಾಡಿದ್ದರೆ ಉತ್ತರ ನೀಡಬಹುದಿತ್ತು. ಆದರೆ, ಪೇಟೆ ರೌಡಿ ರೀತಿ ಹೇಳಿಕೆ ನೀಡಿದ್ದಾರೆ. ಅದಕ್ಕೆಲ್ಲ ನಾನ್ಯಾಕೆ ಉತ್ತರಿಸಲಿ? ನಾನು ಇಂತಹ ಹೇಳಿಕೆಗಳನ್ನ ಚುನಾವಣಾ ಸಮಯದಲ್ಲಿ ಎದುರಿಸಿದ್ದೇನೆ. ಅಂಬರೀಶ್ ಇರುವವರೆಗೂ ಯಾರಿಗೂ ಮಾತನಾಡುವ ಧೈರ್ಯ ಇರಲಿಲ್ಲ. ಅವರು ಹೋದ ಬಳಿಕ ಇಂತಹ ಹೇಳಿಕೆಗಳನ್ನ ಕೊಡ್ತಿದ್ದಾರೆ.
ಇದನ್ನೂ ಓದಿ:ಚುನಾವಣೆ ಸೋತವರಿಗೆ ಸಚಿವ ಸ್ಥಾನ ನೀಡೋದಾದ್ರೆ ಜನ ನಮ್ಮನ್ನು ಯಾಕೆ ಆರಿಸಬೇಕು? – ರೇಣುಕಾಚಾರ್ಯ ಪ್ರಶ್ನೆ
ಒಬ್ಬ ಸಂಸದರು ಬಂದಾಗ ಸ್ವತಃ ಜನ ಹೇಳ್ತಾರೆ. ಕೆ.ಆರ್ ನಗರ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಬರುತ್ತೆ. ಮಂಡ್ಯಗೆ ಹೋದಾಗ ನನ್ನ ಬಳಿಯೂ ಜನ ಬಂದು ಹೇಳ್ತಾರೆ. ಇದು ಸರ್ವೇ ಸಾಮಾನ್ಯ ಇದನ್ನ ರೀತಿ ಪ್ರಚಾರ ಮಾಡುವುದು ಸರಿಯಲ್ಲ. ಅಲ್ಲಿಯ ಜನ ರಸ್ತೆ ಸರಿಯಿಲ್ಲ..ಚರಂಡಿ ಇಲ್ಲ ಅಂತ ಜನ ನನ್ನಲ್ಲೂ ಅಳಲು ತೋಡಿದ್ದಾರೆ. ಆದ್ರೆ ನಾನು ಸಂಸದರ ಬಗ್ಗೆ ಎಂದೂ ಮಾತನಾಡಿಲ್ಲ. ಅವರ ಹೇಳಿಕೆಗೆ ಜನ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಉತ್ತರ ಕೊಡ್ತಿದ್ದಾರೆ. ಇದನ್ನ ಅರ್ಥ ಮಾಡಿಕೊಂಡು ಪ್ರತಾಪಸಿಂಹ ಹೇಳಿಕೆ ಕೊಡ್ಲಿ ಎಂದು ಸುಮಲತಾ ಎಚ್ಚರಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಸಂಸದೆ ಸುಮಲತಾ ನಡೆ ಟೀಕಿಸಿ ಗಂಭೀರ ಆರೋಪ ಮಾಡಿದ ಸಂಸದ ಪ್ರತಾಪ್​ ಸಿಂಹ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − ten =
Remember me
