ಬೆಂಗಳೂರು:ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಂಡ್ಯ ರೋಡ್ ಶೋ ಹಾಗೂ ದಶಪಥ ಹೆದ್ದಾರಿ ಉದ್ಘಾಟನಾ ಸಮಾರಂಭದ ಯಶಸ್ಸು ರಾಜ್ಯ ವಿಧಾನಸಭೆ ಚುನಾವಣೆಗೆ ಹೊಸ ತಿರುವು ನೀಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿಶ್ಲೇಷಿಸಿ ಮಂಡ್ಯ ಜಿಲ್ಲೆಯ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಪಕ್ಷಕ್ಕೆ ಬೆಂಬಲ ಘೋಷಣೆ, ಪ್ರಧಾನಿ ಕಾರ್ಯಕ್ರಮಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಮಾಡಿದ ಮನವಿ ಬೂಸ್ಟರ್ ಡೋಸ್ ನೀಡಿದೆ. ರೋಡ್ ಶೋ ಹಾಗೂ ಸಾರ್ವಜನಿಕ ಸಮಾವೇಶದ ಸಫಲತೆ ಮಂಡ್ಯ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಮೊಗದಲ್ಲಿ ನಗು ಅರಳಿಸಿದೆ ಎಂದು ಬಿ.ಎಲ್.ಸಂತೋಷ್ ಹೇಳಿದ್ದಾರೆ.
ಪ್ರಧಾನಿಯೊಬ್ಬರು 41 ವರ್ಷಗಳ ನಂತರ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಜನರ ಅಭೂತಪೂರ್ವ ಸ್ಪಂದನೆ, ಪರಿಶ್ರಮ ಸಾರ್ಥಕವಾಗಿದೆ ಸಂತಸ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಪತ್ರ ಬರೆದು ಶಹಬ್ಬಾಸ್ ಎಂದು ಬೆನ್ನು ತಟ್ಟಿದ್ದಾರೆ.
ಇದನ್ನೂ ಓದಿ:ನಾರಿ ಶಕ್ತಿಯಿಂದ ಮುನ್ನಡೆಯುತ್ತಿದೆ ವಂದೇ ಭಾರತ್​; ಸುರೇಖಾ ಯಾದವ್ ಭಾರತ ಮೊದಲ ಮಹಿಳಾ ರೈಲು ಚಾಲಕಿ!
ಭವ್ಯ ರೋಡ್ ಶೋಗಾಗಿ ಮಂಡ್ಯ ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತನಿಗೆ ಮನದಾಳದಿಂದ ಅಭಿನಂದಿಸುವೆ. ಮುಂದಿನ ದಿನಗಳು ಇನ್ನಷ್ಟು ತಾಕತ್ತಿನದಾಗಿರಲಿದೆ. ನಿರೀಕ್ಷೆ ಜತೆ ಜತೆಗೆ ವಿರೋಧವೂ ಇರಲಿದೆ. ಹಿಂದಿನ ಸಂದೇಹಗಳೆಲ್ಲವೂ ತಪ್ಪು ಎಂದು ಸಾಬೀತಾಗಿರುವ ಕಾರಣ ಆರಂಭಿಸಿರುವ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಬಿ.ಎಲ್.ಸಂತೋಷ್ ಹುರಿದುಂಬಿಸಿದ್ದಾರೆ.
ಇದನ್ನೂ ಓದಿ:1 ಕೆ.ಜಿ ಮರದ ಬೆಲೆ 8 ಲಕ್ಷ ರೂ.; ಅತ್ಯಂತ ದುಬಾರಿ ಮರ ಯಾವುದು ಗೊತ್ತಾ?
ತವರು ಮಂಡ್ಯ ಜಿಲ್ಲೆಗೆ ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪಕ್ಷದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಕಾರ್ಯದರ್ಶಿ ತುಳಸಿ ಮುನಿರಾಜುಗೌಡ, ವಿಭಾಗ ಪ್ರಭಾರಿಗಳ ಪರಿಶ್ರಮ, ಯೋಜನೆಗಳು ಜನರಿಗೆ ತಲುಪಿದ ಅರಿವು ಇವೆಲ್ಲವುಗಳ ಫಲಿತವಾಗಿ ಧೈರ್ಯವಹಿಸಿ ಕಾರ್ಯಕ್ರಮ ಸಂಘಟಿಸಿದ್ದು ಸಾರ್ಥಕಗೊಳಿಸಿದೆ ಎಂದಿದ್ದಾರೆ.
And here he is …. PM Sri@narendramodiholds road show in Mandya . First PM to visit district after 41 years . People’s love & affection is palpable .https://t.co/LU5ZbBool1
— B L Santhosh (@blsanthosh)March 12, 2023

ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವಾಗ ಕಾಲು ಜಾರಿ ಬಿದ್ದು ಪ್ರಾಣ ಬಿಟ್ಟ ಯುವಕ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:17 − 12 =
Remember me
