ಬೆಂಗಳೂರು:ಬೇಸಿಗೆ ಆರಂಭವಾಗುತ್ತಲೇ ಜನರಿಗೆ ನಾನಾ ಕಾಯಿಲೆಗಳ ಭೀತಿ ಎದುರಾಗಿದೆ. ಬೆಂಗಳೂರು ನಗರದಲ್ಲಿ ಸೋಮವಾರ 31.2 ತಾಪಮಾನ ದಾಖಲಾಗಿದ್ದು, ಈಗಾಗಲೆ ವೃದ್ಧರು ಹಾಗೂ ಮಕ್ಕಳಲ್ಲಿ ನಾನಾ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಜನರು ಆರೋಗ್ಯದ ಬಗ್ಗೆ ಎಚ್ಚರವಹಿಸುವ ಅಗತ್ಯವಿದೆ ಎನ್ನುತ್ತಾರೆ ವೈದ್ಯರು.
ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪ್ರಮುಖವಾಗಿ ಚಿಕ್ಕ ಮಕ್ಕಳು, 60 ವರ್ಷ ಮೇಲ್ಪಟ್ಟ ವೃದ್ಧರು, ರೋಗಿಗಳು, ಗರ್ಭಿಣಿಯರು, ದೀರ್ಘಕಾಲ ಔಷಧ ಸೇವಿಸುತ್ತಿರುವವರು, ಮಧುಮೇಹ, ಅಧಿಕ ರಕ್ತದ ಒತ್ತಡ, ಮೈಗ್ರೇನ್ ಸಮಸ್ಯೆ ಇರುವವರು, ಹೆಚ್ಚು ಕಾಲ ಬಿಸಿಲಿನಲ್ಲಿ ಹಾಗೂ ಕಾರ್ಖಾನೆಗಳಲ್ಲಿ ಶಾಖದ ಸ್ಥಳಗಳಲ್ಲಿ ಕೆಲಸ ಮಾಡುವವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ ಎನ್ನುತ್ತಾರೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯ ಡಾ.ನಿಜಗುಣ.
ಬಿಸಿಲಲ್ಲಿ ಕಾಡುವ ಸಮಸ್ಯೆಗಳು:ಬಿಸಿಲ ಝುಳಕ್ಕೆ ತಲೆನೋವು, ತಲೆ ಸುತ್ತುವಿಕೆ, ಸನ್​ಸ್ಟ್ರೋಕ್ ಸಮಸ್ಯೆ ಕಾಡುವಿಕೆ ಒಂದೆಡೆಯಾದರೆ, ಈ ಕಾಲದಲ್ಲಿ ದಣಿವಾರಿಸಿಕೊಳ್ಳಲು ಹೊರಗೆ ತಂಪು ಪಾನೀಯ ಹಾಗೂ ತಂಪಾದ ಆಹಾರದ ಮೊರೆ ಹೋಗುವ ಮಂದಿ ಟೈಫಾಯಿಡ್, ಕರಳುಬೇನೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಮಕ್ಕಳಲ್ಲಿ ಚಿಕನ್ ಪಾಕ್ಸ್ (ಅಮ್ಮ) ಹಾಗೂ ವಾಂತಿ ಬೇಧಿ ಸಾಮಾನ್ಯವಾಗಿದ್ದು, ಬಿಸಿಲಿನಲ್ಲಿ ಹೆಚ್ಚು ಬೆವರುವುದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣ ಉಂಟಾಗುತ್ತದೆ. ಇದಲ್ಲದೆ ವಾತಾವರಣದಲ್ಲಿ ಒಣಹವೆ ಹಾಗೂ ಮಾಲಿನ್ಯ ದಿಂದಾಗಿ ಕಣ್ಣಿನ ತೊಂದರೆ, ಚರ್ಮದ ಸಮಸ್ಯೆ, ಶ್ವಾಸಕೋಶದ ತೊಂದರೆಯೂ ಕಾಣಿಸಿಕೊಳ್ಳಲಿದೆ.
ವಿದ್ಯಾರ್ಥಿಗಳೇ ಎಚ್ಚರದಿಂದಿರಿ:ಇದು ಪರೀಕ್ಷಾ ಸಮಯ ಆಗಿರುವುದರಿಂದ ವಿದ್ಯಾರ್ಥಿಗಳು ಹೆಚ್ಚು ಜಾಗೃತಿ ವಹಿಸಬೇಕಿದೆ. ಓದಿನತ್ತ ಹೆಚ್ಚು ಗಮನ ಹರಿಸುವುದರಿಂದ ನಿದ್ರೆ ತಡೆಯಲು ಊಟ ಮಾಡದೆ, ಟೀ, ಕಾಫಿ ಹೆಚ್ಚು ಸೇವಿಸುವುದು ಮಾಡಬೇಡಿ. ಇದರಿಂದ ಮಿದುಳಿಗೆ ಗ್ಲೂಕೋಸ್ ಸರಬರಾಜಾಗದೆ ಮೈಗ್ರೇನ್ ಬರುತ್ತದೆ. ಹಾಗಾಗಿ ನಿಯಮಿತ ಆಹಾರ ಸೇವಿಸುವುದರ ಜೊತೆಗೆ ನಿರ್ದಿಷ್ಟ ಸಮಯ ನಿದ್ರೆಯನ್ನೂ ಮಾಡಬೇಕು.
ಬೇಸಿಗೆಯಲ್ಲಿ ಹೊರಗಡೆ ನೀರು ಹಾಗೂ ತಂಪುಪಾನೀಯ ಹಾಗೂ ಹೋಟೆಲ್ ಆಹಾರ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚು ಕಾಣಿಸಿ ಕೊಳ್ಳುತ್ತವೆ. ಹಾಗಾಗಿ ಮನೆ ಊಟ ಮಾಡುವುದನ್ನು ರೂಢಿಸಿಕೊಳ್ಳುವುದು ಸೂಕ್ತ.
|ಡಾ. ಲಕ್ಷ್ಮೀಪತಿಕೆ.ಸಿ. ಜನರಲ್ ಆಸ್ಪತ್ರೆ
ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ

ಹಠಾತ್ ಹೃದಯಾಘಾತಕ್ಕೆ ಮತ್ತೆರಡು ಬಲಿ; ಕ್ರಿಕೆಟ್​ ಆಡುತ್ತಲೇ ಕುಸಿದು ಬಿದ್ದ ಆಟಗಾರರ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + thirteen =
Remember me
