ಬೆಂಗಳೂರು:ಬೇಸಿಗೆ ಶುರುವಾಗಿದೆ. ಉಷ್ಣಾಂಶ ಹೆಚ್ಚಳ ಹಾಗೂ ಗಾಳಿಯಲ್ಲಿ ತೇವಾಂಶ ಕಡಿಮೆ ಆಗಿರುವ ಹಿನ್ನೆಲೆ ಈಗಾಗಲೇ ಜನರಿಗೆ ಹಗಲು ಹಾಗೂ ರಾತ್ರಿ ವೇಳೆ ಸೆಖೆಯ ಅನುಭವವಾಗುತ್ತಿದೆ. ಈ ಬಾರಿ ವಾಡಿಕೆಯಷ್ಟೇ ಸೆಖೆ ಇರಲಿದೆ. ಏಪ್ರಿಲ್ ಮತ್ತು ಮೇನಲ್ಲಿ ಇದು ತುಸು ಹೆಚ್ಚಾಗುವ ಸಾಧ್ಯತೆಯಿದೆ.
ಕಲಬುರಗಿಯಲ್ಲಿ ಶನಿವಾರ ಅತಿ ಹೆಚ್ಚು 37.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶಿವಮೊಗ್ಗ, ಮಂಡ್ಯ, ಬೀದರ್, ಕೊಪ್ಪಳ, ವಿಜಯಪುರ, ಗದಗ, ರಾಯಚೂರು ಹಾಗೂ ದಾವಣಗೆರೆ ಯಲ್ಲಿ ಸರಾಸರಿ 35-36 ಡಿಗ್ರಿ, ಬೆಂಗಳೂರು, ಚಿತ್ರದುರ್ಗ, ಹಾಸನ, ಬೆಳಗಾವಿ, ಧಾರವಾಡ, ಹಾವೇರಿ, ಮೈಸೂರು ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಸರಾಸರಿ 31-33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಉಷ್ಣಾಂಶ ಹಾಗೂ ಸೆಖೆ ದಾಖಲಾಗಲಿದೆ ಎಂದು ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿವಿಜಯವಾಣಿಗೆ ಮಾಹಿತಿ ನೀಡಿದರು.ಇದನ್ನೂ ಓದಿರಿಜಾರಕಿಹೊಳಿಯ ಸಿಡಿ ಮಾಡಿದ ಕಿಂಗ್​ಪಿನ್​ 44 ಲಕ್ಷ ರೂ. ಹಿಡಿದು ಕಾರು ಖರೀದಿಗೆ ಹೋದ!
ಮಾ.1ರಿಂದ ಮೇ.31ರವರೆಗೆ ಬೇಸಿಗೆ ಕಾಲವಿದೆ. ಕಳೆದ ಫೆ.27 ಮತ್ತು ಫೆ.28 ರಾಜ್ಯದಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗಿತ್ತು. ಬಳಿಕ ವಾಡಿಕೆಯಂತೆ ಪ್ರತಿನಿತ್ಯ ಉಷ್ಣಾಂಶ ದಾಖಲಾಗುತ್ತಿದೆ. ಈಗಾಗಲೇ ನಮಗೆ ಉಷ್ಣಾಂಶ ಮುನ್ಸೂಚನೆ ವರದಿ ಸಿಕ್ಕಿದೆ. ರಾಜ್ಯದಲ್ಲಿ ಈ ಬಾರಿ ವಾಡಿಕೆಯಷ್ಟೇ ಉಷ್ಣಾಂಶ ಹಾಗೂ ಸೆಖೆ ಇರಲಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 3.30 ಗಂಟೆವರೆಗೆ ಬಿಸಿಲಿನ ಝಳ ಹೆಚ್ಚು ಇರಲಿದೆ. ತಾಪಮಾನ ಹೆಚ್ಚಳವಾಗುವ ಜತೆಗೆ ಅಕಾಲಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು

ಜಾರಕಿಹೊಳಿಯ ಸಿಡಿ ಮಾಡಿದ ಕಿಂಗ್​ಪಿನ್​ 44 ಲಕ್ಷ ರೂ. ಹಿಡಿದು ಕಾರು ಖರೀದಿಗೆ ಹೋದ!

ತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve − four =
Remember me
