ಕೋಲಾರ:ಮಹಾಮಾರಿ ಕರೊನಾ ಸೋಂಕನ್ನು ಮಣಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ‘ಸಂಡೇ ಲಾಕ್​ಡೌನ್​’ ಜಾರಿ ಮಾಡಿದ್ದರೂ ಅಬಕಾರಿ ಸಚಿವ ಎಚ್. ನಾಗೇಶ್​ರ ತವರು ಜಿಲ್ಲೆಯಲ್ಲೇ ನಿನ್ನೆ(ಭಾನುವಾರ) ಲಾಕ್​ಡೌನ್ ನಿಯಮ ಉಲ್ಲಂಘನೆಯಾಗಿದ್ದು, ಇಲ್ಲಿನ ರೆಸ್ಟೋರೆಂಟ್​ವೊಂದರಲ್ಲಿ ಗುಂಡು-ತುಂಡಿನ ಭರ್ಜರಿ ಪಾರ್ಟಿ ನಡೆದಿದೆ.
ಇಡೀ ರಾಜ್ಯಾದ್ಯಂತ ಭಾನುವಾರ ಮದ್ಯ ಮಾರಾಟ ನಿಷೇಧಿಸಿದ್ದರೂ ಕೋಲಾರದಲ್ಲಿ ಜನರ ಗುಂಪೊಂದು ‘ಎಣ್ಣೆ’ಪಾರ್ಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ನಿಯಮಗಳ ಪ್ರಕಾರ ಡಾಬಾಗಳಲ್ಲಿ ಮದ್ಯ ಸೇವನೆಯೇ ಮಾಡುವಂತಿಲ್ಲ. ಹೀಗಿದ್ದರೂ ಅಬಕಾರಿ ಸಚಿವರ ಜಿಲ್ಲೆಯಲ್ಲೇ ಯುವಕರು ಅಕ್ರಮವಾಗಿ ಮದ್ಯ ಸೇವನೆ ಜತೆಗೆ ಮೋಜು-ಮಸ್ತಿಯಲ್ಲಿ ತೊಡಗಿದ್ದ ವಿಡಿಯೋ ವೈರಲ್​ ಆಗಿದೆ.ಇದನ್ನೂ ಓದಿರಿಕುಣಿಗಲ್​ ಶಾಸಕ ಡಾ.ರಂಗನಾಥ್​ಗೆ ಕರೊನಾ, ರಾಜ್ಯ-ರಾಷ್ಟ್ರಮಟ್ಟದ ಕಾಂಗ್ರೆಸ್​ ನಾಯಕರಲ್ಲೂ ಸೋಂಕಿನ ಭೀತಿ
ಕೋಲಾರ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಟಮಕ ಬಳಿ ಕಿಶೋರ್ ಫ್ಯಾಮಿಲಿ ರೆಸ್ಟೋರೆಂಟ್​ನಲ್ಲಿ ಲಾಕ್​ಡೌನ್​ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ.
ಜಿಲ್ಲೆಯಾದ್ಯಂತ ಸಂಡೇ ಲಾಕ್​ಡೌನ್ ಯಶಸ್ವಿಯಾಗಿಸಲು ಪೊಲೀಸ್ ಸಿಬ್ಬಂದಿ ದಿನವಿಡೀ ರಸ್ತೆಗಳಲ್ಲಿ ಕಾವಲು ಕಾಯುತ್ತಿದ್ದರೆ ಇತ್ತ ಜಿಲ್ಲಾಧಿಕಾರಿ ಕಚೇರಿ ಕೂಗಳತೆ ದೂರದಲ್ಲೇ ಇರುವ ಕಿಶೋರ್ ಫ್ಯಾಮಿಲಿ ಡಾಬಾದಲ್ಲಿ ಮಸ್ತ್ ಗುಂಡು-ತುಂಡು ಪಾರ್ಟಿ ಮಾಡುವ ಮೂಲಕ ಮದ್ಯಪ್ರಿಯರು ಉದ್ದಟತನ ತೋರಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ರೆಸ್ಟೋರೆಂಟ್​ನ ಬಾಗಿಲು ಮುಚ್ಚಿಸಿದ್ದಾರೆ.
ಈ ಬಗ್ಗೆ ‘ವಿಜಯವಾಣಿ‘ಗೆ ಪ್ರತಿಕ್ರಿಯಿಸಿರುವ ಅಬಕಾರಿ ಉಪ ಆಯುಕ್ತೆ ಕೆ.ಕೆ.ಸುಮಿತ್ರ, ಪ್ರಕರಣ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ತನಿಖೆ ಕೈಗೊಂಡು ಕಾನೂನು ಉಲ್ಲಂಘನೆ ಆಗಿದ್ದಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
https://www.facebook.com/VVani4U/videos/276455047119888/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − two =
Remember me
