ಕೊಲಂಬೊ:ಕರ್ನಾಟಕದ ಸುಧಾ ಎಂ. ಅವರಿಗೆ ಶ್ರೀಲಂಕಾ ಯುನೈಟೆಡ್ ನೇಷನ್ಸ್ ಫ್ರೆಂಡ್‌ಶಿಪ್ ಆರ್ಗನೈಸೇಶನ್ (SUNFO) ಮತ್ತು ಶ್ರೀಲಂಕಾ ಸರ್ಕಾರವು ‘ಗ್ಲೋಬಲ್​ ಐಕಾನ್​ ಅವಾರ್ಡ್-2022’ ನೀಡಿ ಗೌರವಿಸಿದೆ.
ಕೊಲಂಬೊದ ಬಂಡಾರನಾಯಕೆ ಮೆಮೋರಿಯಲ್ ಇಂಟರ್​ನ್ಯಾಷನಲ್ ಕಾನ್ಫರೆನ್ಸ್ ಹಾಲ್​ನಲ್ಲಿ ಇತ್ತೀಚಿಗೆ ನಡೆದ ವಿಶ್ವಸಂಸ್ಥೆಯ ವಾರ್ಷಿಕ ದಿನಾಚರಣೆ ಮತ್ತು ಯುವ ಸಂಸತ್ತಿನ ಆಚರಣೆಯ ಭಾಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 9 ಮಂದಿಗೆ ಗ್ಲೋಬಲ್​ ಐಕಾನ್​ ಅವಾರ್ಡ್​ ಪ್ರದಾನ ಮಾಡಲಾಯಿತು. ಈ ಪೈಕಿ ಸುಧಾ ಅವರಿಗೆ ಶ್ರೀಲಂಕಾದ ತಂತ್ರಜ್ಞಾನ ಇಲಾಖೆ ಸಚಿವ ಕನಕ ಹೆರಾತ್ ಮತ್ತು UNFOನ ಗ್ಲೋಬಲ್ ಚೇರ್ಮನ್ ಡಾ.ಎಂ.ರೆಜಿನೋಲ್ಡ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸುಧಾ, ನನ್ನನ್ನು ಗ್ಲೋಬಲ್​ ಐಕಾನ್​ ಅವಾರ್ಡ್​ಗೆ ಪರಿಗಣಿಸಿ ಗೌರವಿಸಿದ ಶ್ರೀಲಂಕಾ ಸರ್ಕಾರಕ್ಕೆ ನನ್ನ ಧನ್ಯವಾದಗಳು. ಈ ಪ್ರಶಸ್ತಿ ಸ್ವೀಕರಿಸಿದ್ದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ. ರಾಷ್ಟ್ರ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಮಾಡುವ ಸಾಧನೆ, ತಮ್ಮ ದೇಶಕ್ಕಾಗಿ ಅಲ್ಲಿಸುವ ಸೇವೆ, ಉದ್ಯಮ ಕ್ಷೇತ್ರದಲ್ಲಿ ಇತರರಿಗೂ ಮಾದರಿಯಾಗುವ ಪರಿಯನ್ನ ಪರಿಗಣಿಸಿ ಈ ಅವಾರ್ಡ್​ ಅನ್ನು ನೀಡುತ್ತಾರೆ. ಇಂತಹ ದೊಡ್ಡ ಅವಾರ್ಡ್​ ಅನ್ನು ವಿಶ್ವಸಂಸ್ಥೆಯ ವಾರ್ಷಿಕ ದಿನಾಚರಣೆ ಮತ್ತು ಯುವ ಸಂಸತ್ತಿನ ಆಚರಣೆಯ ದಿನದಂದು ಸ್ವೀಕರಿಸಿದ್ದ ಕ್ಷಣ ನನ್ನ ಪಾಲಿಗೆ ಅವಿಸ್ಮರಣೀಯ. ಶ್ರೀಲಂಕಾ ಸರ್ಕಾರ ಮತ್ತು SUNFOಗೆ ಧನ್ಯವಾದಗಳು ಎನ್ನುವಾಗ ಅವರ ಮುಖದಲ್ಲಿ ಸಾರ್ಥಕ ಭಾವ ಮೂಡಿತ್ತು.

ತಂತ್ರಜ್ಞಾನ ಸಚಿವ ಕನಕ ಹೆರಾತ್, SUNFOನ ಗ್ಲೋಬಲ್ ಚೇರ್ಮನ್ ಡಾ. ಎಂ.ರೆಜಿನೋಲ್ಡ್, SUNFO ಮಹಾ ನಿರ್ದೇಶಕ ಡಾ.ದೇಶಪ್ರಿಯ ಎಸ್. ವಿಜೇತುಂಗೆ ಹಾಗೂ ಗ್ಲೋಬಲ್ ಎಕನಾಮಿಕ್ ಫೋರಮ್, ವಿಷನ್ ಡಿಜಿಟಲ್ ಇಂಡಿಯಾ, ಗ್ಲೋಬಲ್ ಡಿಜಿಟಲ್ ಯೂನಿರ್ವಸಿಟಿ, ಇಂಡೋ-ಶ್ರೀಲಂಕಾ ಎಕನಾಮಿಕ್ ಶೃಂಗಸಭೆಯ ಪ್ರತಿನಿಧಿಗಳು ಸೇರಿ ಹಲವರು ಗಣ್ಯರು ಉಪಸ್ಥಿತರಿದ್ದರು.
ದೀಪಾವಳಿ ಹಬ್ಬದಲ್ಲಿ ಗೋಪೂಜೆ ವೇಳೆ ಚಿನ್ನದ ಸರ ನುಂಗಿದ ಆಕಳು!

ಮಹಡಿ ಮೇಲೆ ಒಣ ಹಾಕಿದ್ದ ಬಟ್ಟೆಗೆ ತಾಗಿದ ಪಟಾಕಿ ಕಿಡಿ: ಧಗಧಗಿಸಿದ ಮನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + thirteen =
Remember me
