ಬೆಂಗಳೂರು:ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಆಚರಣೆ ನಡೆಯುತ್ತಿರುವ ಇಂದು ರಿಯಲ್ ಸ್ಟಾರ್ ಉಪೇಂದ್ರ ನಿವಾಸದಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಪ್ರತಿ ವರ್ಷದಂತೆ ಈ ವರ್ಷವೂ ಉಪೇಂದ್ರ ದಂಪತಿ ವರಲಕ್ಷ್ಮಿ ಪೂಜೆ ಮಾಡಿದರು. ಹಬ್ಬದ ಸಡಗರದೊಂದಿಗೆ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಹುಟ್ಟು ಹಬ್ಬದ ಸಂಭ್ರಮ ಕೂಡ ಸೇರಿಕೊಂಡಿದೆ.
ನಿರಂಜನ್ ಹುಟ್ಟಿದ ಹಬ್ಬದ ಪ್ರಯುಕ್ತ ಅವರ ಅಭಿನಯದ “ಸೂಪರ್ ಸ್ಟಾರ್” ಕನ್ನಡ ಚಲನಚಿತ್ರದ ವಿಶೇಷ ಟೀಸರ್​ಅನ್ನು ಚಿತ್ರತಂಡ ಇಂದು ಲಾಂಚ್​ ಮಾಡಿದೆ. ಆನಂದ್ ಆಡಿಯೋ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿರುವ ಟೀಸರ್​ನಲ್ಲಿ ನಿರಂಜನ್​ ಅವರ ಸ್ಟೈಲಿಶ್​ ಡೆಬ್ಯೂ ಎಂಟ್ರಿಯನ್ನು ನೋಡಬಹುದು. ಮೈಲಾರಿ ಎಂ. ನಿರ್ಮಾಣ ಮಾಡಿರುವ ಈ ಚಿತ್ರ ಆರ್​.ವಿ.ಬಿ. ಸಿನಿಮಾಸ್​ನ ಕೊಡುಗೆಯಾಗಿದೆ.
ಇದನ್ನೂ ಓದಿ:ಬಾಲಿವುಡ್​ ನಟ ರಣದೀಪ್​ ಹೂಡಗೆ ಚಿತ್ರಲೇಖಕಿಯ ನೋಟೀಸ್​!
ಅಣ್ಙನ ಮಗನ ಸಿನಿಮಾ ಟೀಸರ್ ಬಗ್ಗೆ ಉಪ್ಪಿ ಫುಲ್ ಖುಷ್ ಆಗಿದ್ದಾರೆ. “ನಿರಂಜನ್ ಕ್ಲ್ಯಾಸ್​ ಆಗಿ ಕಾಣ್ತಾ ಇದಾನೆ, ಟೀಸರ್ ನೋಡಿ ಫುಲ್ ಖುಷಿ ಆಗಿದೆ. ನಾನು ಅಂದುಕೊಂಡಿದ್ದಕ್ಕಿಂತ ಸೂಪರ್ ಆಗಿ ಬಂದಿದೆ” ಎಂದಿದ್ದಾರೆ. “ಈಗ ಹೊಸಬರಿಗೆ ತುಂಬಾ ಟ್ಯಾಲೆಂಟ್​​ ಇದೆ. ಹೊಸಹೊಸ ಐಡಿಯಾದಿಂದ ಪ್ರಿಪರೇಷನ್ ಮಾಡಿಕೊಂಡು ಸಿನಿಮಾಗೆ ಬರ್ತಾರೆ” ಎಂದಿದ್ದಾರೆ, ಉಪೇಂದ್ರ.
ಸದ್ಯದಲ್ಲೇ ಈ ಮಹಾನಗರದಲ್ಲಿ ಕರೊನಾ ಲಸಿಕಾ ಅಭಿಯಾನ ಕಂಪ್ಲೀಟ್​!
ಮೂವರು ಸಮಾಜ ಸೇವಕರಿಗೆ ದೇವರಾಜ ಅರಸು ಪ್ರಶಸ್ತಿ


Sign in to your account
Please enter an answer in digits:17 − 6 =
Remember me
