ಆನೇಕಲ್: ಬೆಂಗಳೂರಿನಲ್ಲಿ ಬುಧವಾರ ಮಧ್ಯಾಹ್ನ ಕೇಳಿಬಂದ ನಿಗೂಢ ಶಬ್ದಕ್ಕೆ ಸೂಪರ್‌ಸಾನಿಕ್ ವಿಮಾನವೇ ಕಾರಣ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಕರ್ನಾಟಕದ ಗಡಿ ಬಿದರಗುಪ್ಪೆ ಬಳಿ ತೀರ ಹತ್ತಿರ ಭೂಮಿಗೆ ಬಂದಿದ್ದ ವಿಮಾನವೇ ಈ ಭಾರಿ ಸಪ್ಪಳಕ್ಕೆ ಕಾರಣ ಎಂದು ಆ ಸಂದರ್ಭದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯರಾದ ನರೇಂದ್ರಬಾಬು ತಿಳಿಸಿದ್ದಾರೆ.
ಇದನ್ನೂ ಓದಿಪ್ರಧಾನಮಂತ್ರಿ ವಯವಂದನಾ ಯೋಜನೆ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ
ಬಿದರಗುಪ್ಪೆ ಮತ್ತು ಬೇಗೇನಹಳ್ಳಿ ಮಧ್ಯೆ ವೇಗವಾಗಿ ಭೂಮಿಯತ್ತ ವಿಮಾನ ಬಂದಿತ್ತು. ಭೂಮಿಯ ಹತ್ತಿರ ಬರುತ್ತಿದ್ದಂತೆ ಏಕಾಏಕಿ ಟೇಕ್‌ಆಫ್ ಆಯಿತು. ಈ ಸಂದರ್ಭದಲ್ಲಿ ದಟ್ಟ ಹೊಗೆ ಮತ್ತು ಭಾರಿ ಶಬ್ದ ಹೊರಹೊಮ್ಮಿ ಭೂಮಿಗೆ ಜೋರಾಗಿ ಬಡಿದಿದೆ ಎಂದು ವಿವರಿಸಿದ್ದಾರೆ.
ಆ ಸಂದರ್ಭದಲ್ಲಿ ಅಕ್ಕಪಕ್ಕದ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದವರು ಕೂಡ ಭಯಭೀತರಾದರು. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ವಿಮಾನ ಆಕಾಶದೆತ್ತರಕ್ಕೆ ಹಾರಿ ಕಣ್ಮರೆಯಾಯಿತು ಎಂದು ಪ್ರತ್ಯಕ್ಷದರ್ಶಿ ನರೇಂದ್ರಬಾಬು ‘ವಿಜಯವಾಣಿ’ಯ ಸೋದರ ಸಂಸ್ಥೆ ‘ದಿಗ್ವಿಜಯ ನ್ಯೂಸ್’ಗೆ ತಿಳಿಸಿದ್ದಾರೆ.
ಇದನ್ನೂ ಓದಿಅಸಾಧ್ಯ ಎಂದು ಸರ್ಕಾರವೇ ಕೈಚೆಲ್ಲಿದಾಗ, ಈ ಅಪ್ಪ-ಮಗ ಮಾಡಿ ತೋರಿಸಿದರೊಂದು ಅದ್ಭುತ!
ಮನೆಮನೆಗಳ ಆಹಾರೋದ್ಯಮಕ್ಕೆ 10,000 ಕೋಟಿ ರೂಪಾಯಿ ಯೋಜನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + fourteen =
Remember me
