ಬೆಂಗಳೂರು:ಇತ್ತೀಚಿಗಷ್ಟೇ ಸರ್ಕಾರಿ ಆಸ್ಪತ್ರೆಗಳಿಗೆ ಕೋಟ್ಯಂತರ ರೂ.ಮೌಲ್ಯದ ಕಳಪೆ ಗ್ಲೂಕೋಸ್​ ಪೂರೈಸಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದ ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕಿಯ ಸರಬರಾಜು ನಿಗಮ (ಕೆಎಸ್​ಎಂಎಸ್​ಸಿಎಲ್​), ಇದೀಗ ದನಗಳಿಗೆ ನೀಡುವ ಔಷಧವನ್ನು ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಮೂಲಕ ನಿಗಮದ ಅಧಿಕಾರಿಗಳು ಒಂದಿಲ್ಲೊಂದು ನಿರ್ಲಕ್ಷ್ಯದಿಂದಾಗಿ ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಾಗುವ ನೂರಾರು ರೋಗಿಗಳ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ.
ಕಣ್ಣು, ಕಿವಿ, ಮೂಗಿನ ಸಂಬಂಧಪಟ್ಟಂತೆ ವಿವಿಧ ಔಷಧ ಖರೀದಿಗಾಗಿ ನಿಗಮ, 2023ರ ಆಗಸ್ಟ್​ನಲ್ಲಿ ಟೆಂಡರ್​ ನಡೆಸಿತ್ತು. ಟೆಂಡರ್​ನಲ್ಲಿ ಎಲ್​-1 ಪಡೆದ ಎಂ/ಎಸ್​ ಪುಷ್ಕರ್​ ಫಾರ್ಮಾ ಎಂಬ ಖಾಸಗಿ ಕಂಪನಿ, ಕೋಟ್ಯಂತರ ರೂ. ಮೌಲ್ಯದ ಪ್ರಾಣಿಗಳ ಬಳಸುವ ಔಷಧವನ್ನು ನಿಗಮಕ್ಕೆ ಪೂರೈಸಿದೆ. ನಂತರ, ನಿಗಮ ಈ ಎಲ್ಲ ಔಷಧಗಳನ್ನು ಔಷಧ ಉಗ್ರಾಣ ಮೂಲಕ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಿದೆ. ಈ ಔಷಧದ ಲೇಬಲ್​ನಲ್ಲಿ ಪಶುಸಂಗೋಪನೆ ಮತ್ತು ಪಶುವೈದ್ಯಕಿಯ ಹೆಸರು ಇದೆ. ಅದನ್ನು ಮರೆಮಾಚಿ ಪೂರೈಸಲಾಗಿದೆ. ಪುಷ್ಕರ್​ ಫಾರ್ಮಾ ತಯಾರಿಸಿ ಸರಬರಾಜು ಮಾಡಿರುವ ಕೆಲವೊಂದು ಔಷಧಗಳ ಲೋಗೋಗ್ರಾಂ ವಿನ್ಯಾಸಕ್ಕೆ ಮಾಸ್ಕಿಂಗ್​ (ಮರೆಮಾಚುವಿಕೆ) ಮಾಡಿರುವ ಔಷಧಗಳನ್ನು ಹಿಂಪಡೆಯುವಂತೆ ಕೊಡಗಿನ ಔಷಧ ಉಗ್ರಾಣದವರು ಮೈಸೂರು ಮತ್ತು ಕೊಡಗು ಜಿಲ್ಲೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳು ವಿಜಯವಾಣಿಗೆ ಲಭ್ಯವಿದೆ.
ಅನುಮತಿ ಕೊಟ್ಟ ನಿಗಮಡ್ರಗ್ಸ್​ ಮತ್ತು ಕಾಸ್ಮೆಟಿಕ್ಸ್​ ನಿಯಮ ಪ್ರಕಾರ ಔಷಧಗಳ ಲೇಬಲ್​ ತಿರುಚುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮಾಸ್ಕಿಂಗ್​ ಮತ್ತು ಟ್ಯಾಂಪರಿಂಗ್​ ಆದೇಶ ಹೊರಡಿಸುವ ಅಧಿಕಾರವೂ ಇಲ್ಲ. ಔಷಧ ವಿಷಯದಲ್ಲಿ ರಾಜ್ಯದ ಡ್ರಗ್ಸ್​ ಕಂಟ್ರೋಲರ್​ ನಿಯಂತ್ರಕ ಸಂಸ್ಥೆಯಾಗಿದೆ. ಲೇಬಲ್​ ಮರೆಮಾಚುವುದು, ತಿರುಚುವ ಸೂಚನೆ ನೀಡುವುದು ಅಥವಾ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ನಿಗಮಕ್ಕಿಲ್ಲ. ಹೀಗಿರುವಾಗ, ನಿಗಮದ ಎಂಡಿ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ ಉಲ್ಲಂಘಿಸಿ ಮಾಸ್ಕಿಂಗ್​, ಟ್ಯಾಂಪರಿಂಗ್​ ಆದೇಶ ಹೊರಡಿಸಿದ್ದಾರೆ. ಪುಷ್ಕರ್​ ಫಾರ್ಮಾಗೆ ನೀಡಿದ್ದ ಪತ್ರದಲ್ಲಿ ಲೇಬಲ್​ ಮರೆಮಾಚಲು ಅನುಮತಿ ಕೊಟ್ಟಿದ್ದಾರೆ. ಇದಕ್ಕೆ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ. ಕಂಪನಿ ವಿರುದ್ಧ ಕ್ರಮಕೈಗೊಂಡು ಕಪ್ಪು ಸೇರಿಸಬೇಕಿತ್ತು. ಇದ್ಯಾವ ಕಾರ್ಯಗತವಾಗಿಲ್ಲ. ಪ್ರಾಣಿ ಬಳಕೆ ಔಷಧ ಸರಬರಾಜು ಮಾಡುವುದಕ್ಕೆ ನಿಗಮದ ಅಧಿಕಾರಿಗಳಿಗೆ ಕಂಪನಿ ಲಂಚ ಕೊಟ್ಟಿರುವ ಬಗ್ಗೆ ಆರೋಪಗಳಿವೆ. ಈ ಕುರಿತು ಔಷಧ ನಿಯಂತ್ರಣ ಇಲಾಖೆಯಲ್ಲಿ ದೂರು ದಾಖಲಾಗಿದೆ.
ಆಹಾರಗಳಿಗೆ ನಿಷೇಧಿತ ರಾಸಾಯನಿಕ ಬಳಕೆ ತಡೆಯಿರಿ
ಕಳಪೆ ಔಷಧ ಪಟ್ಟಿ ಹೆಚ್ಚಳ2015-16ರಿಂದ 2023-24ರವೆರೆಗೆ ನಿಗಮಕ್ಕೆ ಗ್ಲೂಕೋಸ್​, ಚುಚ್ಚುಮದ್ದು, ಮಾತ್ರೆ, ವಿಟಮಿನ್​ “ಸಿ’ ಟ್ಯಾಬ್ಲೆಟ್​, ಸ್ಯಾನಿಟೈಸರ್​, ಕಣ್ಣು,ಕಿವಿ ಹಾಕುವ ಡ್ರಾಪ್ಸ್​ ಸೇರಿ ವಿವಿಧ ಬಗೆಯ 11 ಕಳಪೆ ಔಷಧ ಸರಬರಾಜು ಮಾಡಿರುವುದು ಬಹಿರಂಗವಾಗಿದೆ.2018ರಿಂದ 2022-23ರವರೆಗೆ ಕಳಪೆ ಮತ್ತು ನಕಲಿ ಔಷಧ ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ 25 ಔಷಧ ತಯಾರಿಕ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಕಳಪೆ ಔಷಧ ಸರಬರಾಜು ಮಾಡಿರುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದ್ದ ನಿಗಮದ ಕೆಲ ಅಧಿಕಾರಿಗಳು, ಕಮಿಷನ್​ ಪಡೆದು ಸುಮ್ಮನಾಗುತ್ತಿದ್ದಾರೆ. ರೋಗಿಗಳ ಜೀವ ಉಳಿಸಲು ಗುಣಮಟ್ಟ ಔಷಧ ಸರಬರಾಜು ಮಾಡಬೇಕಿದ್ದ ಔಷಧ ತಯಾರಿಕ ಕಂಪನಿಗಳು, ಕಳಪೆ ಔಷಧ ಪೂರೈಸುತ್ತಿವೆ. ಪ್ರತಿ ವರ್ಷ ನಿಗಮಕ್ಕೆ ಪೂರೈಕೆಯಾಗುತ್ತಿರುವ ಕಳಪೆ ಔಷಧಗಳ ಪಟ್ಟಿಯೂ ಜಾಸ್ತಿಯಾಗುತ್ತಿರುವುದು ಆತಂಕ ಮೂಡಿಸಿದೆ.
ಪ್ರಯೋಗಾಲಯದಲ್ಲಿಯೂ ಪತ್ತೆನಿಗಮಕ್ಕೆ ಸರಬರಾಜು ಮಾಡಿರುವ ಔಷಧಗಳನ್ನು ಔಷಧ ನಿಯಂತ್ರಣ ಇಲಾಖೆ, ಔಷಧ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುತ್ತಿದೆ. ಈ ವೇಳೆ ಪ್ರಯೋಗಾಲಯದಲ್ಲಿ ನೂರಾರು ಔಷಧಗಳು ಉತ್ತಮ ಗುಣಮಟ್ಟವಲ್ಲವೆಂದು ಪತ್ತೆಯಾಗುತ್ತಿದೆ. ಎನ್​ಎಸ್​ಕ್ಯೂ ಆಗಿರುವ ಔಷಧ ಬಗ್ಗೆ ವೆಬ್​ಸೈಟ್​ನಲ್ಲಿ ಪ್ರಕಟಿಸಿ ನಾಕೋಟಿಕ್​ ಡ್ರಗ್ಸ್​ ಮತ್ತು ಸೈಕೋಟ್ರೋಪಿಕ್​ ಸಬ್​ಸ್ಟನ್ಸ್​ (ಎನ್​ಡಿಪಿಎಸ್​) ಅಡಿ ಕಂಪನಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆ ಶಿಫಾರಸು ಮಾಡುತ್ತಿದೆ. ಕೆಲ ಕಂಪನಿಗಳ ಅಧಿಕಾರಿಗಳ ಜತೆ ಶಾಮೀಲಾಗಿ ಫೇಲ್​ ಆಗಿರುವ ಔಷಧಗಳನ್ನು ಪಾಸ್​ ಮಾಡಿಸುತ್ತಿರುವ ಬಗ್ಗೆಯೂ ಗುರುತರ ಆರೋಪಗಳಿವೆ.
ಏನೇನು ಔಷಧ ಸರಬರಾಜು ಮಾಡಬೇಕಿತ್ತು?ಟೆಂಡರ್​ ಪಡೆದ ಕಂಪನಿ ನಿಯಮದಂತೆ ಸೋಡಿಯಂ ಕ್ಲೋರೈಡ್​(ನಾಸಲ್​) ಡ್ರಾಪ್ಸ್​, ಟಿಮೊಲೊಲ್​ ಮಲೇಟ್​ (ಡ್ರಾಪ್ಸ್​), ಆಕ್ಸಿಮೆಟಾಜೋಲಿನ್​ ಪೀಡಿಯಾಟ್ರಿಕ್​ (ನಾಸಲ್​), ಆಕ್ಸಿಮೆಟಾಜೋಲಿನ್​ ಹೈಡ್ರೋಕ್ಲೋರೈಡ್​(ನಾಸಲ್​) ಹಾಗೂ ಕಾರ್ಬಾಕ್ಸಿಮಿಥೈಲ್​ಲ್ಯುಲೋಸ್​ (ಐ ಡ್ರಾಪ್ಸ್​) ಔಷಧಗಳನ್ನು ಸರಬರಾಜು ಮಾಡಬೇಕಿತ್ತು. ಕಣ್ಣು, ಮೂಗು, ಕಿವಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಈ ಮೇಲಿನ ಔಷಧಗಳನ್ನು ನೀಡಲಾಗುತ್ತದೆ. ಮನುಷ್ಯನಿಗೆ ನೀಡುವ ಯಾವುದೇ ಔಷಧಗಳ ಲೋಗೋಗ್ರಾಂ ಮೇಲೆ ” ಕೆಎಸ್​ಎಂಎಸ್​ಸಿಎಲ್​-ನಾಟ್​ ಫಾರ್​ ಸೇಲ್​’ ಎಂದು ನಮೂದಿಸಲಾಗುತ್ತದೆ.ಪ್ರಾಣಿಗಳಿಗೆ ನೀಡುವ ಔಷಧ ಲೋಗೋಗ್ರಾಂ ಮೇಲೆ ಪಶುಸಂಗೋಪನೇ-ನಾಟ್​ ಫಾರ್​ ಸೇಲ್​’ ಎಂದು ಉಲ್ಲೇಖಿಸಲಾಗಿದೆ. ಆದರೆ, ಕಂಪನಿಯು ಪ್ರಾಣಿಗಳಿಗೆ ಬಳಸುವ ಔಷಧವನ್ನು ನಿಗಮಕ್ಕೆ ಪೂರೈಸಿದೆ. ನಿಗಮಕ್ಕೆ ಕಂಪನಿ ಬರೆದಿರುವ ಪತ್ರದಲ್ಲಿ “ಎಎಚ್​ವಿಎಸ್​’ ಲೇಬಲ್​ ಹೊಂದಿರುವ ಔಷಧಗಳನ್ನು ಪೂರೈಸಿದ್ದೇವೆ ಎಂದು ಹೇಳಿದೆ. ನಂತರ, ನಿಗಮವು ಕಂಪನಿಗೆ ಬರೆದಿರುವ ಪತ್ರದಲ್ಲಿ ಔಷಧ ಉಗ್ರಣಗಳಲ್ಲಿ ಸರಬರಾಜು ಮಾಡಿರುವ ಔಷಧದ ದೋಷಪೂರಿತ ಲೇಬಲ್​ ಸರಿಪಡಿಸಿದ ನಂತರವೇ ಬಿಲ್​ಗಳಿಗೆ ಹಣ ಪಾವತಿಸುವುದಾಗಿ ಉಲ್ಲೇಖಿಸಿದೆ.
ಪಶುಗಳಿಗೆ ಬಳಸುವ ಔಷಧ ಸರಬರಾಜು ಮಾಡಿರುವ ಕುರಿತು ವರದಿ ನೀಡುವಂತೆ ಕೆಎಸ್​ಎಂಎಸ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದೇನೆ. ಇದರಲ್ಲಿ ತಪ್ಪು ಕಂಡುಬಂದರೆ ಮುಲಾಜಿಲ್ಲದೆ ಕಂಪನಿ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಕಡ್ಡಾಯವಾಗಿ ಎಂಪನೆಲ್ಡ್​ ವರದಿ ಪಡೆದ ಬಳಿಕವಷ್ಟೇ ಔಷಧ ಸ್ವೀಕರಿಸಬೇಕು. ಪ್ರತಿ ಬ್ಯಾಚ್​ ಪರೀಸಿದ ಬಳಿಕ ನಿಗಮ ಉಗ್ರಾಣಗಳಿಗೆ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಬೇಕು.ಡಿ.ರಂದೀಪ್​. ಆರೋಗ್ಯ ಇಲಾಖೆ ಆಯುಕ್ತ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + eleven =
Remember me
