ಬೆಂಗಳೂರು:ಹೇಗ್​ನ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರು ‘ಕಾವೇರಿ ಕೂಗು’ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಈಶ ಯೋಗ ಕೇಂದ್ರದಲ್ಲಿ ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಅವರನ್ನು ಭೇಟಿಯಾಗಿ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗುರುಗಳ ಪಾತ್ರಕ್ಕೆ ಸದ್ಗುರು ಹೊಸ ಅರ್ಥ ನೀಡುತ್ತಿದ್ದಾರೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹಾಗೂ ಸಮಾಜದ ಸಮಕಾಲೀನ ಸವಾಲು ಎದುರಿಸಲು ಸಕ್ರಿಯ ವಾಗಿ ತೊಡಗಿಸಿಕೊಂಡಿದ್ದಾರೆ ಎಂದು ದಲ್ವೀರ್ ಭಂಡಾರಿ ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ 2017ರಲ್ಲಿ 2ನೇ ಬಾರಿ ದಲ್ವೀರ್ ಭಂಡಾರಿ ನ್ಯಾಯಾಲಯಕ್ಕೆ ಪುನರಾಯ್ಕೆಯಾಗಿದ್ದು, ಈ ಸ್ಥಾನ ಅಲಂಕರಿಸಿದ 4ನೇ ಭಾರತೀಯರಾಗಿದ್ದಾರೆ.
ಕಾವೇರಿ ಕೂಗು ಅಭಿಯಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪೊ›ೕಗ್ರಾಂ (ಯುಎನ್​ಇಪಿ), ಯುನೈಟೆಟ್ ನೇಷನ್ಸ್ ಕನ್ವೆನ್ಷನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಶನ್ (ಯುಎನ್​ಸಿಸಿಡಿ) ಮತ್ತು ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಫ್ರೇಮ್
ವರ್ಕ್ ಕನ್ವೆನ್ಷನ್ (ಯುಎನ್​ಎಫ್​ಸಿಸಿ) ಸೇರಿ ಅಮೆರಿಕದ ಹಲವು ಸಂಸ್ಥೆಗಳು ಕಳೆದ ವರ್ಷ ವಿವಿಧ ವೇದಿಕೆಗಳಲ್ಲಿ ಸದ್ಗುರು ಭೇಟಿ ಮಾಡಿ ಈ ಅಭಿಯಾನದ ಉದ್ದೇಶ ಮತ್ತು ಪರಿಣಾಮಗಳ ಕುರಿತು ಚರ್ಚೆ ನಡೆಸಿದ್ದವು.
ಅಭಿಯಾನ ಕುರಿತು…
ಜನರ ಜೀವನಾಡಿಗಳಾದ ನದಿಗಳಿಗೆ ಮರುಜೀವ ತುಂಬುವ ಸಲುವಾಗಿ ಸದ್ಗುರು ಅಭಿಯಾನ ಆರಂಭಿಸಿದ್ದಾರೆ. ಮೊದಲ ಪ್ರಯತ್ನದಲ್ಲಿ ಕಾವೇರಿ ನದಿ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ಸೆಪ್ಟೆಂಬರ್​ನಲ್ಲಿ ‘ಕಾವೇರಿ ಕೂಗು’ ಅಭಿಯಾನ ಆರಂಭಿಸಲಾಗಿದೆ. ಇದಕ್ಕೆ ಲಕ್ಷಾಂತರ ಜನರು ಬೆಂಬಲ ನೀಡುತ್ತಿದ್ದಾರೆ. ಕಾವೇರಿ ಕೊಳ್ಳ ಪ್ರದೇಶದಲ್ಲಿ 242 ಕೋಟಿ ಸಸಿಗಳನ್ನು ನೆಡುವ ಮೂಲಕ ಕಾವೇರಿ ನದಿ ಮೈದುಂಬಿ ಹರಿಯುವಂತೆ ಮಾಡುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 3 =
Remember me
