ಚಿಕ್ಕೋಡಿ:ಹೈಕಮಾಂಡ್ ಏನು ಹೇಳುತ್ತದೆ ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಬಿಜೆಪಿ ಟಿಕೆಟ್​ ವಂಚಿತ ವಿಧಾನ ಪರಿಷತ್​ ಸದಸ್ಯ ಲಕ್ಷ್ಮಣ್​ ಸವದಿ ಅವರು ಹೇಳಿದರು.
ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಮಿಸ್​ ಆದ ಬಳಿಕ ಅಸಮಾಧಾಗೊಂಡಿರುವ ಲಕ್ಷ್ಮಣ್​ ಸವದಿ ಇಂದು ಅಥಣಿ ಪಟ್ಟಣದ ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ:ಸೌಂದರ್ಯದ ಗಣಿ ಹನಿ ರೋಸ್​ಗೆ ಸಿನಿಮಾ ಅವಕಾಶಗಳು ಕಡಿಮೆ ಏಕೆ? ಇಲ್ಲಿದೆ ಅಚ್ಚರಿಯ ಕಾರಣ…
ಸಿಎಂ ಮೇಲೆ‌ ಸಿಟ್ಟಿಲ್ಲವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡು ಅಂತ ಕಾರ್ಯಕರ್ತರು ಹೇಳ್ತಿದ್ದಾರೆ. ನಾಳೆ ಸಾಯಂಕಾಲ ನನ್ನ ಹೈಕಮಾಂಡ್ ಮುಂದೆ ನಿಲ್ಲುವೆ. ಅವರು ಏನು ಹೇಳ್ತಾರೆ ಅದಕ್ಕೆ ನಾನು ಬದ್ಧವಾಗಿದ್ದೇನೆ. ಸಿಎಂ ಬೊಮ್ಮಾಯಿ ಅವರ ಮೇಲೆ‌ ನನಗೆ ಸಿಟ್ಟಿಲ್ಲ. ಅವರು ಇನ್ನು ಉನ್ನತ ಮಟ್ಟಕ್ಕೆ ಬೆಳೆಯಲಿ. ಈ ದೇಶದ ಪ್ರಧಾನಿ ಮಂತ್ರಿ ಆಗಲೆಂದು ಬಯಸುವೆ ಎಂದು ಹೇಳಿದರು.
ವಿಷ ಕೊಟ್ರು ಕುಡಿಯುವೆನಾನು ಎಲ್ಲಿಯೇ ಇರಲಿ, ಹೇಗಿಯೇ ಇರಲಿ, ನನಗೊಬ್ಬ ಗುರುವಿದ್ದಾರೆ. ಅವರ ಹೆಸರು ಹೇಳಲು ಇಚ್ಚಿಸುವುದಿಲ್ಲ. ನನಗೆ ಅವರೇ ಗುರುಗಳು. ಅವರ ಬಗ್ಗೆ ಅಪಾರವಾದ ಪೂಜ್ಯ ಭಾವನೆ ಇದೆ. ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದೇನೆ. ಆ ಗುರು ಬಟ್ಟಲದಲ್ಲಿ ವಿಷ ಕೊಟ್ರು ಕುಡಿಯುವೆ. ನನಗೆ ಆಂತರಿಕವಾಗಿರುವ ಗುರು ಅವರು ಎಂದರು.
ಪ್ರಯೋಜನ ಇಲ್ಲ ಎಂದು ಗೊತ್ತಾಗಿರಬಹುದುಲಕ್ಷ್ಮಣ ಸವದಿ ಬೆಂಬಲಕ್ಕೆ ಯಾವ ನಾಯಕರು ನಿಲ್ಲಲಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಅವರು ಎಲ್ಲೆ ಇದ್ದರೂ ನಮ್ಮ ಸ್ನೇಹಿತರು ಅಂತ ಅವರೇ ಹೇಳಿದ್ದಾರೆ. ಲಕ್ಷ್ಮಣ ಸವದಿ ಒಂದು ಗಿಡದ ತಪ್ಪಲು ಎಂದಿದ್ದಾರೆ. ಹೀಗಾಗಿ ಈ ಗಿಡದ ತಪ್ಪಲಿನಿಂದ ಏನೂ ಪ್ರಯೋಜನ ಇಲ್ಲ ಎಂದು ಗೊತ್ತಾಗಿರಬಹುದು. ಆ ತಪ್ಪಲು ಎಲ್ಲಿ ಹೋಗುತ್ತೋ ಗೊತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಗೌರವಯುತವಾಗಿ ಹೊರ ಹೋಗಬೇಕು ಈ ರೀತಿ ಹೋಗುವುದು ಸರಿಯಲ್ಲ: ಜಗದೀಶ್​ ಶೆಟ್ಟರ್ ಬೇಸರ​
ರಮೇಶ ಅಣ್ಣಾರಮೇಶ ಜಾರಕಿಹೊಳಿ ರಾಜ್ಯದಲ್ಲಿಯೇ ಬಲಾಢ್ಯರಿದ್ದಾರೆ. ರಮೇಶ ಅಣ್ಣಾ ಜಾರಕಿಹೊಳಿಯವರಿಗೆ ಇನ್ನಷ್ಟು ಶಕ್ತಿ ನೀಡಲಿ. ಬಾಂಬೆ ಸ್ನೇಹಿತರಿಗೆ ಜಾರಕಿಹೊಳಿ ಟಿಕೆಟ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ರಮೇಶ್ ಜಾರಕಿಹೊಳಿಗೂ ಮುಂದಿನ ಸಿಎಂ ಆಗುವ ಯೋಗ ಇದೆ. ರಾಜ್ಯದ ಎಲ್ಲ ಸಮಕಾಲೀನ ನಾಯಕರಿಗೆ ಅಭಿನಂದನೆ ಹೇಳುತ್ತೇನೆ. 20 ವರ್ಷಗಳ ಕಾಲದಲ್ಲಿ ನಾನು ಬಿಜೆಪಿಯಲ್ಲಿ ಏನಾದ್ರೂ ತಪ್ಪು ಮಾಡಿದ್ರೆ ಕ್ಷಮಿಸಿ ಎಂದರು.(ದಿಗ್ವಿಜಯ ನ್ಯೂಸ್​)
ರಾಜ್ಯದಲ್ಲಿ ಮತದಾರರ ಜಾಗೃತಿಗೆ ಬಗೆಬಗೆಯ ತಂತ್ರ! ದೇಶದಲ್ಲೇ ವಿನೂತನ ಪ್ರಯೋಗ

ಟಿಕೆಟ್ ಪಡೆದ ಬಿವೈ‌ ವಿಜಯೇಂದ್ರ ಆಪ್ತ; ಬ್ಯಾಟರಾಯನಪುರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ!

ಸಿದ್ದರಾಮಯ್ಯ V/s ಸೋಮಣ್ಣ, ಡಿಕೆಶಿ V/s ಆರ್​.ಅಶೋಕ್​ ಟಕ್ಕರ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × two =
Remember me
