ಹಾಸ‌ನ:ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಅರಕಲಗೂಡು ತಾಲೂಕಿನ ಕೊಳ್ಳಂಗಿ ಗ್ರಾಮದ ಕೆ.ಎಸ್. ಚೇತನ್ ಎಂಬ ವ್ಯಕ್ತಿ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿ ಹಣಕ್ಕಾಗಿ ಬೇಡಿಕೆ ಇರಿಸಿದ್ದಾರೆ ಎಂದು ಹೊಳೆನರಸೀಪುರ ತಾಲೂಕಿನ ಹನುಮನಹಳ್ಳಿಯ ಶಿವಕುಮಾರ್ ಅವರು ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ (ಜೂ.21) ಸಂಜೆ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಪ್ರಧಾನಿ ನರೇಂದ್ರ ಮೋದಿಗೊಂದು ನ್ಯಾಯ? ಮುಖ್ಯಮಂತ್ರಿ ಸಿದ್ದರಾಮಯ್ಯಗೊಂದು ನ್ಯಾಯಾನಾ?
ದೂರಿನ ಸಾರಾಂಶ:ನಾನು ಈ ಹಿಂದೆ ಫೈನಾನ್ಸ್ ಕೆಲಸ ಮಾಡಿಕೊಂಡಿದ್ದಾಗ ಅರಕಲಗೂಡು ತಾಲೂಕು ಕೊಳ್ಳಂಗಿ ಗ್ರಾಮದ ಚೇತನ್. ಕೆ.ಎಸ್ ಎಂಬುವವನ ಪರಿಚಯವಾಗಿದ್ದು, ಒಟ್ಟಿಗೆ ಕೆಲಸ ಮಾಡುತ್ತಿದ್ದರಿಂದ ಒಳ್ಳೆಯ ಸ್ನೇಹಿತರಾಗಿದ್ದೆವು. ನಾನು ಸೂರಜ್ ರೇವಣ್ಣ ಬ್ರಿಗೇಡ್​ನಲ್ಲಿ ಖಜಾಂಚಿಯಾಗಿದ್ದರಿಂದ ಎಂ.ಎಲ್.ಸಿ ಆದಂತಹ ಸೂರಜ್​ರವರು ನನ್ನೊಂದಿಗೆ ಒಳ್ಳೆಯ ಒಡನಾಟವಿಟ್ಟುಕೊಂಡಿದ್ದು, ಅವರೊಂದಿಗೆ ನಾನು ಚೆನ್ನಾಗಿದ್ದ ಕಾರಣ ಈಗ್ಗೆ ಸುಮಾರು 6 ತಿಂಗಳ ಹಿಂದೆ ಚೇತನ್ ನನ್ನನ್ನು ಎಂ.ಎಲ್.ಸಿ ಅವರನ್ನು ಪರಿಚಯ ಮಾಡಿಕೊಡು, ನನಗೆ ಅವರ ಬಳಿಯಿಂದ ಯಾವುದಾದರೂ ಕೆಲಸ ಕೊಡಿಸಿ, ಸಹಾಯ ಮಾಡು ಎಂದು ಹೇಳಿದ್ದರಿಂದ ನಾನು ಅವರನ್ನು ಚುನಾವಣಾ ಸಮಯದಲ್ಲಿ ಪರಿಚಯ ಮಾಡಿಸಿದ್ದೆ.
ಆ ಸಮಯದಲಿ.. ಅವರ ಫೋನ್ ನಂಬರ್ ಅನ್ನು ಸಹ ಪಡೆದುಕೊಂಡಿದ್ದನು. ನಂತರ ಜೂನ್ 2ನೇ ವಾರದಲ್ಲಿ ನನಗೆ ದಿನಾಂಕ ನೆನಪಿಲ್ಲ, ಆ ದಿನ ಚೇತನ್ ನನಗೆ ಫೋನ್ ಮಾಡಿ ನಿಮ್ಮ ಬಾಸ್​ನ ಮೀಟ್ ಮಾಡಿಸು ಎಂದು ಹೇಳಿದ್ದ. ಅದಕ್ಕೆ ನಾನು ಸಾಹೇಬರು ಕೆಲಸದ ದಿನಗಳಲ್ಲಿ ಬ್ಯುಸಿಯಾಗಿರುತ್ತಾರೆ. ಶನಿವಾರ ಅಥವಾ ಭಾನುವಾರ ಗನ್ನಿ ಕಡದಲ್ಲಿ ಸಿಗುತ್ತಾರೆ ಅಲ್ಲಿಗೆ ಹೋಗಿ ಮೀಟ್ ಮಾಡು ಎಂದು ಹೇಳಿದ್ದೆ.
ಇದನ್ನೂ ಓದಿ:ಜಿಲ್ಲಾದ್ಯಂತ ಸಂಚಾರ ಪೊಲೀಸರ ಹದ್ದಿನಕಣ್ಣು  ಮೊದಲ ದಿನವೇ 91500 ರೂ. ದಂಡ
ಜೂ.17ರಂದು ಚೇತನ್ ನನಗೆ ವಾಟ್ಸ್ಆಪ್ ಮೆಸೇಜ್ ಮಾಡಿದ್ದು, ಈ ಮೆಸೇಜ್ ವಿಚಾರವಾಗಿ ನಾನು ಜೂ.18ರ ಬೆಳಗ್ಗೆ 7 ಗಂಟೆಯ ಸಮಯದಲ್ಲಿ ನಾನು ಚೇತನ್​ಗೆ ಕರೆ ಮಾಡಿ ನನಗೆ ಮೇಸೇಜ್ ಮಾಡಿದ್ದ ವಿಚಾರದ ಬಗ್ಗೆ ಕೇಳಲಾಗಿ ನಾನು ಜೂ. 16ರ ಸಂಜೆ 6.45 ಗಂಟೆಯ ಸಮಯದಲ್ಲಿ ನಿಮ್ಮ ಬಾಸ್ ಸೂರಜ್ ರೇವಣ್ಣ ಅವರನ್ನು ಭೇಟಿ ಮಾಡಲು ಅವರ ಘನ್ನಿ ಕಡ ತೋಟದ ಮನೆಗೆ ಹೋಗಿದ್ದು, ನಾನು ಅವರನ್ನು ಭೇಟಿ ಮಾಡಿ, ಕೆಲಸ ಕೊಡಿಸಿ ಸಹಾಯ ಮಾಡಿ, ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂದು ಹೇಳಿದ್ದಕ್ಕೆ ಈಗ ಸಹಾಯ ಮಾಡಲು ಸಾಧ್ಯವಿಲ್ಲ, ಮುಂದೆ ನೋಡೋಣ ಎಂದು ಹೇಳಿದ್ದಾರೆ.
ನೀನೇ ಹೇಗಾದರೂ ಸಹಾಯ ಮಾಡು, ಜೀವನ ಕಷ್ಟವಾಗಿದೆ, ಯಾವುದಾದರೂ ಕೆಲಸ ಕೊಡಿಸಿದರೆ ಜೀವನ ಮಾಡಬಹುದೆಂದು ತಿಳಿಸಿದ್ದ. ಬಾಸ್ ಜೊತೆ ಮಾತನಾಡಿ ನಂತರ ಹೇಳುತ್ತೇನೆಂದು ಹೇಳಿದ್ದಕ್ಕೆ, ಅವರೂ ಹಾಗೇ ಹೇಳುತ್ತಾರೆ ನೀನೂ ಕೂಡ ಹಾಗೆಯೇ ಹೇಳುತ್ತೀಯಾ, ಕಷ್ಟ ಅಂತ ನಿಮ್ಮ ಬಳಿ ಬಂದರೆ ಯಾವುದೇ ಸಹಾಯ ಮಾಡುವುದಿಲ್ಲವಲ್ಲ, ನೀನು ನನಗೆ ಹೆಲ್ಪ್ ಮಾಡದಿದ್ದರೆ ಘನ್ನಿ ಕಡ ಗ್ರಾಮಕ್ಕೆ ಹೋಗಿದ್ದಾಗ ಸೂರಜ್ ರೇವಣ್ಣರವರು ನನಗೆ ಲೈಂಗಿಕ ದೌರ್ಜನ್ಯ ಮಾಡಿರುತ್ತಾರೆಂದು ಹೇಳಿ ಅವರ ಮರ್ಯಾದೆ ಹಾಳು ಮಾಡುತ್ತೇನೆ. ಈ ಕಾಲದಲ್ಲಿ ನಿಯತ್ತಿಗೆ ಕಾಲವಿಲ್ಲ, ಸುಳ್ಳು ಹೇಳಿಯೇ ದೊಡ್ಡವರಾಗಬೇಕು, ಎಂ.ಎಲ್.ಸಿರವರು ನನಗೆ ಲೈಂಗಿಕ ದೌರ್ಜನ್ಯ ಮಾಡಿರುತ್ತಾರೆಂದು ಹೊರಗಡೆ ಹೇಳಿದರೆ ಮಾನ ಮರ್ಯಾದೆ ಹಾಳಾಗುತ್ತದೆ. ಆಗ ಮುಜುಗರಗೊಂಡು ಅವರೇ ಹಣ ಕೊಡುತ್ತಾರೆ, ನಾನು ಹೊರಗಡೆ ಹೇಳಬಾರದೆಂದರೆ, ನನಗೆ 5 ಕೋಟಿ ಹಣ ಕೊಡಿಸು, ಇಲ್ಲದಿದ್ದರೆ ನಾನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಕೇಸು ಮಾಡಿಸುತ್ತೇನೆ ಹಾಗೂ ದೊಡ್ಡಮನೆಯವರ ಹೆಸರು ಹಾಳು ಮಾಡುತ್ತೇನೆಂದು ಹೇಳಿದ್ದರಿಂದ ನಾನು ಪೋನನ್ನು ಕಟ್ ಮಾಡಿದ್ದೆ.
ಇದನ್ನೂ ಓದಿ:ಸಂತೆಯೊಳಗೊಂದು ಶಾಲೆಯ ಮಾಡಿ..!      ಎರಡೇ ವರ್ಷಕ್ಕೆ ಏರಿದ ಮಕ್ಕಳ ದಾಖಲಾತಿ    ಗಡಿಯಾರ ಕಂಬ ವೃತ್ತದ ಸರ್ಕಾರಿ ಸ್ಕೂಲ್ ಕಮಾಲ್
ನಮ್ಮ ಬಾಸ್ ಸೂರಜ್ ರೇವಣ್ಣರವರಿಗೆ ಫೋನ್ ಮಾಡಿ ಚೇತನ್ ನಿಮ್ಮ ಘನ್ನಿ ಕಡದ ಮನೆಗೆ ಜೂ. 16ರಂದು ಬಂದಿದ್ದನಾ ಎಂದು ಕೇಳಿದ್ದಕ್ಕೆ, ಆತ ಮನೆಗೆ ಬಂದಿದ್ದು, ಕೆಲಸ ಕೊಡಿಸಿ ಎಂದು ಹೇಳಿದನು, ಈಗ ಸಾಧ್ಯವಿಲ್ಲ. ಮುಂದೆ ನೋಡೋಣವೆಂದು ಹೇಳಿ ಕಳುಹಿಸಿದೆನು ಎಂದು ತಿಳಿಸಿದ್ದು, ಅದಕ್ಕೆ ನಾನು ಚೇತನ್ ನಿಮ್ಮ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆಂದು ಸುಳ್ಳು ದೂರು ಕೊಡುತ್ತೇನೆ, ನಿಮ್ಮ ಬಳಿ 5 ಕೋಟಿ ಹಣ ಕೊಡಿಸಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾನೆ ಎಂದು ಹೇಳಿದ್ದಕ್ಕೆ, ಆಗ ಸಾಹೇಬರವರು ಆತ ಘನ್ನಿ ಕಡದ ನಮ್ಮ ಮನೆಗೆ ಬಂದಿದ್ದಾಗ ನಮ್ಮ ಮನೆಯಲಿ.. ಕೆಲಸ ಮಾಡುವ ರಾಕೇಶ, ದರ್ಶನ್, ಪುಟ್ಟನಂಜ ಹಾಗೂ ಪೊಲೀಸ್ ಸಿಬ್ಬಂದಿಯಾದ ಶಶಿಕುಮಾರ್ ರವರು ಸಹ ಇದ್ದು, ನಾವು ಯಾವುದೇ ತಪ್ಪು ಮಾಡದಿದ್ದರೂ ಆತನಿಗೆ ಯಾಕೆ ಹಣ ಕೊಡಬೇಕಂತೆ ಎಂದು ಹೇಳಿದ್ದರು.
ನಂತರ ಜೂ.18ರಂದು ಮದ್ಯಾಹ್ನ ಸುಮಾರು 02.30 ಗಂಟೆಯ ಸಮಯದಲ್ಲಿ ನಾನು ಹಾಸನದಲ್ಲಿದ್ದಾಗ ಚೇತನ್ ರವರು ನನ್ನ ಮೊಬೈಲ್​ಗೆ ಒಂದು ವಾಟ್ಸ್ಆಪ್ ಮೆಸೇಜ್ ಕಳುಹಿಸಿದ್ದು, ಅದು ಹಾಸನ ಸರ್ಕಾರಿ ಆಸ್ಪತ್ರೆಯ ಎಂಎಲ್​ಸಿ ಸೀಲ್ ಇರುವ ಖಾಲಿ ಆಸ್ಪತ್ರೆ ಚೀಟಿಯನ್ನು ಕಳುಹಿಸಿದ್ದು, ನಾನು ಚೇತನ್​ಗೆ ಫೋನ್ ಮಾಡಿ ಖಾಲಿ ಎಂ.ಎಲ್.ಸಿ ಮಾಡಿಸಿ, ನಮ್ಮನ್ನು ಹೆದರಿಸುತ್ತಿದ್ದೀಯಾ, ಎಂದಾಗ ಚೇತನ್ ನನ್ನನ್ನು ಕುರಿತು ನಾನು ಈಗ ವೈದ್ಯರ ಭೇಟಿ ಮಾಡಲು ಹೋಗುತ್ತಿದ್ದೇನೆ, ಹೋಗುವುದಕ್ಕಿಂತ ಮುಂಚಿತ ನಿಮ್ಮ ಬಾಸ್ ಬಳಿ ಮಾತಾಡಿ ನನಗೆ 5 ಕೋಟಿ ರೂ. ಹಣ ಕೊಡಿಸು ಎಂದು ಹೇಳಿದ.
ಇದನ್ನೂ ಓದಿ:ಆಗಸ್ಟ್ 15ರಿಂದ ಬೆಂಗಳೂರಿನಲ್ಲಿ ಮಹಾರಾಜ ಟ್ರೋಫಿ: ಜುಲೈ 25ಕ್ಕೆ ಆಟಗಾರರ ಹರಾಜು ಪ್ರಕ್ರಿಯೆ
ನಾನು ಆಸ್ಪತ್ರೆಯ ಬಳಿ ಬಂದು ಮಾತನಾಡುತ್ತೇನೆಂದು ಹೇಳಿ ಮದ್ಯಾಹ್ನ 03.00 ಗಂಟೆಯ ಸಮಯದಲಿ ನಾನು ಹಾಸನ ಹಿಮ್ಸ್ ಆಸ್ಪತ್ರೆಯ ಬಳಿ ಹೋಗಿ ಚೇತನ್ ರವರನ್ನು ಭೇಟಿ ಮಾಡಲಾಗಿ, ನಿಮ್ಮ ಬಾಸ್ 5 ಕೋಟಿ ಕೊಡಲಾಗದಿದ್ದರೆ, 3 ಕೋಟಿಯಾದರೂ ಕೊಡಿಸು ಎಂದು ಬೇಡಿಕೆ ಇಟ್ಟಾಗ, ನಾನು ಯಾಕೆ ಹಣ ಕೊಡಬೇಕು ಸುಮ್ಮನೆ ಹೆದರಿಸಬೇಡ ಎಂದು ಹೇಳಿದ್ದಕ್ಕೆ, ಚೇತನ್ ನನ್ನ ಕುರಿತು ನಿಮ್ಮ ಬಾಸ್​​ಗೆ ಫೋನ್ ಮಾಡು ಮಾತನಾಡಬೇಕೆಂದು ಹೇಳಿ ನನ್ನ ಫೋನ್​ನಲ್ಲಿ ಮಾತನಾಡುತ್ತಿದ್ದಾಗ, ದೊಡ್ಡಮಟ್ಟದಲ್ಲಿ ನನಗೆ 1 ಕೋಟಿ ಅಡ್ವಾನ್ಸ್ ಕೊಡಲು ರೆಡಿ ಇದ್ದಾರೆ. ನಾನು ಈಗ ಕೇಸು ಮಾಡಿಸುತ್ತೇನೆಂದು ಹೇಳಿ, ಕೇಸು ಮಾಡಿಸ ಬೇಡವೆಂದರೆ, ಕೊನೆಯ ಪಕ್ಷ 2.5 ಕೋಟಿಯಾದರೂ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದನು.
ಅದೇ ದಿನ ರಾತ್ರಿ ಸುಮಾರು 9.30 ಗಂಟೆಯಲ್ಲಿ ಚೇತನ್ ರವರ ಮೊಬೈಲ್ ಫೋನ್​ನಿಂದ ನನ್ನ ಮೊಬೈಲ್​ಗೆ ವಾಟ್ಸ್ಆಪ್ ಕಾಲ್ ಮಾಡಿ, ನಾನು ಚೇತನ್ ಅವರ ಭಾವ, ಚೇತನ್ ಹೇಳಿದ ವಿಚಾರವನ್ನು ಏನು ಮಾಡಿದಿರಿ, ನೀನು ನಿಮ್ಮ ಬಾಸ್​ಗೆ ಹೇಳಿ 2 ಕೋಟಿ ಹಣ ಕೊಡಿಸು, ಇಲ್ಲದಿದ್ದರೆ, ನಿಮ್ಮ ಬಾಸ್ ಮರ್ಯಾದೆ ಹಾಳು ಮಾಡುತ್ತೇವೆ. ಇದರಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಇದ್ದಾರೆ, ನೀವು ದುಡ್ಡ ಕೊಡುವುದಿಲ್ಲ ಎಂದರೆ ಅವರೇ ನಮಗೆ ದುಡ್ಡ ಕೊಟ್ಟು ಕೇಸು ಮಾಡಿಸುತ್ತಾರೆಂದು ಆಮಿಷ ಒಡ್ಡುತ್ತಿದ್ದಾರೆಂದು ತಿಳಿಸಿ ಬೆದರಿಕೆ ಹಾಕಿ ಹಣ ಕೊಡುವಂತೆ ಪೀಡಿಸಿದರು. ನಂತರ, ಜೂ 19ರಂದು ಸಹ ಚೇತನ್ ನನಗೆ ಫೋನ್ ಮಾಡಿ ವಾಟ್ಸ್ ಆಪ್ ಕಾಲ್ ಮಾಡಿ, ನಾವು ಹೇಳಿದ ಕೆಲಸ ಏನು ಮಾಡಿದ್ದೀರಾ? ಹಣ ಈವರೆಗೂ ಕೊಟ್ಟಿಲ್ಲ ಎಂದರು.
ಇದನ್ನೂ ಓದಿ:ಆಗಸ್ಟ್ 15ರಿಂದ ಬೆಂಗಳೂರಿನಲ್ಲಿ ಮಹಾರಾಜ ಟ್ರೋಫಿ: ಜುಲೈ 25ಕ್ಕೆ ಆಟಗಾರರ ಹರಾಜು ಪ್ರಕ್ರಿಯೆ
ನೀವು ಹಣ ಕೊಡದಿದ್ದರೆ ಪ್ರೆಸ್ ಮೀಟ್ ಮಾಡಲು ಬೆಂಗಳೂರಿಗೆ ಹೋಗುತ್ತೇನೆಂದು, ನಿಮ್ಮ ಎಂ.ಎಲ್.ಸಿ ಜೊತೆ ನಿನ್ನ ಬಗ್ಗೆಯೂ ದೂರು ಕೊಡುತ್ತೇನೆಂದು ಬೆದರಿಕೆ ಹಾಕುತ್ತಿದ್ದರಿಂದ ಹಣಕ್ಕೆ ಡಿಮ್ಯಾಂಡ್ ಮಾಡಿ ಪೀಡಿಸಿ, ಬೆದರಿಕೆ ಹಾಕುತ್ತಿರುವ ಮೇಲ್ಕಂಡ ಕೊಳ್ಳಂಗ್ಗಿ ಗ್ರಾಮದ ಚೇತನ್ ಹಾಗೂ ಅವರ ಭಾವನ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಶಿವಕುಮಾರ್ ಅವರು ದೂರು ನೀಡಿದ್ದಾರೆ.
ಯಾರ ಪ್ರಭಾವಕ್ಕೂ ಮಣಿಯದೇ ‘ರೀಲ್​ ಹೀರೋ’​ಗೆ ಬಿಸಿ ಮುಟ್ಟಿಸಿದ್ದೇ ಈ ಇಬ್ಬರು ಖಡಕ್ ಅಧಿಕಾರಿಗಳು! ಇವರೇ ನೋಡಿ ‘ರಿಯಲ್’ ಹೀರೋಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − twelve =
Remember me
