ಬೆಂಗಳೂರು:ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಇದೀಗ ಸ್ಫೋಟಕ ಟ್ವಿಸ್ಟ್‌ ಸಿಕ್ಕಿದೆ.  ಹೊಳೆನರಸೀಪುರ ನಗರ ಠಾಣೆಯಲ್ಲಿ  ಎಂಎಲ್‌ಸಿ ಅವರ ಆಪ್ತ ಶಿವಕುಮಾರ್ ಜೂನ್‌ 21ರಂದು ದೂರು ನೀಡಿದ್ದರು. ಶಿವಕುಮಾರ್‌ ದೂರಿನ ಆಧಾರದ ಮೇಲೆಯೇ ಪೊಲೀಸರು ಸಂತ್ರಸ್ತನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.  ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ  ಸೂರಜ್​ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸೂರಜ್​ ಬಂಧನವಾಗುತ್ತಿದ್ದಂತೆ  ಇವರ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚವಾರಗಳು ಮುನ್ನೆಲೆಗೆ ಬಂದಿವೆ.
ಸೂರಜ್​ ರೇವಣ್ಣ ಅವರ ಪತ್ನಿ ಬಿಟ್ಟು ಹೋಗಲು ಕಾರಣವೇನು ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಈ ಕುರಿತಾಗಿ ಮಾತನಾಡಿದ ಖ್ಯಾತ ವಕೀಲ ಕುಮಾರ್​ ಎ ಪಾಟೀಲ್​​ ಅವರು ಕೆಲವು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ವಿಜಯವಾಣಿ ಜತೆ ಮಾತನಾಡಿದ ಖ್ಯಾತ ವಕೀಲ ಕುಮಾರ್​ ಎ ಪಾಟೀಲ್​​ ಅವರು, ಅಸಹಜ ಲೈಂಗಿಕ ಕ್ರಿಯೆ ಹಿನ್ನೆಲೆ ವಿಚ್ಛೇದನಕ್ಕೆ ಹಾಕಿದ್ರೆ ಅದು ಒಂದು ಕಾರಣ ಇದಬಹುದು. ನನಗೆ ಇರುವ ಮಾಹಿತಿ ಪ್ರಕಾರ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಆದರೆ ಇದು ಒಂದು ಕಾರಣ ಇರಬಹುದು ಎಂದು ಹೇಳಿದ್ದಾರೆ.
2021ರಲ್ಲಿ ಬಯಲಾಯ್ತು ಸೂರಜ್​​ ರೇವಣ್ಣ ಅವರ ಮದುವೆ ರಹಸ್ಯ;2021ರಲ್ಲಿ ವಿಧಾನಸಭೆ ಚುನಾವಣೆಗೆ ಸೂರಜ್ ರೇವಣ್ಣ ನಿಲ್ಲುತ್ತಾರೆ. ಈ ವೇಳೆ ಚುನಾವಣೆ ಅಧಿಕಾರಿಗಳಿಗೆ ಅಫಿಡವಿಟ್ ಸಲ್ಲಿಸುವಾಗ ಸೂರಜ್​ ಪತ್ನಿಯ ಹೆಸರನ್ನು ಖಾಲಿ ಬಿಟ್ಟರಲಾಗುತ್ತದೆ. ಪತ್ನಿಯ ಕುರಿತಾಗಿ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. ಈ ವೇಳೆ ಸೂರಜ್​ ರೇವಣ್ಣ ಅವರ ಮದುವೆ ಕುರಿತಾಗಿ ಸಾಕಷ್ಟು ಚರ್ಚೆ ಉಂಟಾಗುತ್ತದೆ. ಸೂರಜ್​ 2018ರಲ್ಲೇ ಮದುವೆ ಆಗಿರುತ್ತಾರೆ. ಆದರೆ ಅಧಿಕಾರಿಗಳಿಗೆ ಸಲ್ಲಿಕೆ ಮಾಡಿರುವ ಅಫಿಡವಿಟ್​ನಲ್ಲಿ ಯಾಕೆ ಪತ್ನಿಯ ಹೆಸರು ಉಲ್ಲೇಖ ಮಾಡಿರುವುದಿಲ್ಲ. ಪತ್ನಿ ಆಸ್ತಿಯ ಉಲ್ಲೇಖ ಮಾಡಿಲ್ಲ ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿತ್ತು.
2018 ಮಾರ್ಚ್​ 4 ರಂದು ಸೂರಜ್​ ರೇವಣ್ಣ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಗರಿಕಾ ರಮೇಶ್​​ ಜತೆ ಮದುವೆ ಆಗಿದ್ದರು. ಈ ಮದುವೆಗೆ ಕುಟುಂಬಸ್ಥರು ಹಾಗೂ ರಾಜಕಾರಣಿಗಳು ಮತ್ತು ಸ್ನೇಹಿತರು ಭಾಗಿಯಾಗಿದ್ದರು. ಸಾಗರಿಕಾ ರಮೇಶ್​ ಅವರು ಒಳ್ಳೆಯ ಕುಟುಂಬದಿಂದಲೇ ಬಂದವರು. ಇವರ ತಂದೆ ಹುಳುವಾಡಿ ರಮೇಶ್​ ಅವರು ಚೆನ್ನೈ ಹೈಕೋರ್ಟ್​​ನಲ್ಲಿ ನ್ಯಾಯಮೂರ್ತಿ ಆಗಿದ್ದಾರೆ. ಇವರ ಪುತ್ರಿಯೇ ಸಾಗರಿಕಾ ರಮೇಶ್​ ಇವರನ್ನು ಸೂರಜ್​ ರೇವಣ್ಣ ಅವರು ಮದುವೆ ಆಗುತ್ತಾರೆ. ಹಲವು ವರ್ಷಗಳ ಕಾಲ ಇಬ್ಬರು ಜತೆಗೆ ವಾಸವಾಗಿ ಜೀವನ ನಡೆಸುತ್ತಾರೆ. ಹಲವು ಸಭೆ ಸಮಾರಂಭಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ 2021ರ ಚುನಾವಣೆಗೆ ಅಫಿಡವಿಟ್​ ಸಲ್ಲಿಕೆ ಮಾಡುವ ವೇಳೆ ಪತ್ನಿ ಕಾಣಿಸಿಕೊಂಡಿರಲಿಲ್ಲ. ವಿಚ್ಚೇದನ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತಾಗಿ ಯಾವುದೇ ಮಾಹಿತಿ ಇಲ್ಲ.
ಸೂರಜ್​ ಅವರು ಪತ್ನಿ ಕುರಿತಾಗಿ ಯಾವುದೇ ಮಾಹಿತಿ ನೀಡಲೇ ಇಲ್ಲವೋ ಆಗ ಈ ಜೋಡಿಯ ದಾಂಪತ್ಯದ ಕುರಿತಾಗಿ ಕೆಲವು ಸುದ್ದಿಗಳು ಹರಿದಾಡತೊಡಗಿದ್ದವು. ಇಬ್ಬರು ಬೇರೆ ಬೇರೆಯಾಗಿ ವಾಸವಾಗಿದ್ದಾರೆ ಎನ್ನಲಾಗಿದೆ. ಆದರೆ ಯಾವ ಕಾರಣಕ್ಕೆ ಇಬ್ಬರು ದೂರವಾಗಿದ್ದಾರೆ? ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ನಡೆದಿದ್ದೇನು:ಸೂರಜ್​ ರೇವಣ್ಣ ಅವರ ವಿರುದ್ಧವಾಗಿ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ಕೇಳಿ ಬಂದಿತ್ತು. ಸೂರಜ್ ರೇವಣ್ಣ ಅವರೇ ಸ್ವತಃ ಪೊಲೀಸ್ ಠಾಣೆಗೆ ಆಗಮಿಸಿದ್ದರು. ತಮ್ಮ ವಿರುದ್ಧ ಯುವಕ ಮಾಡಿದ್ದ ಆರೋಪಗಳನ್ನು ತಿರಸ್ಕರಿಸಿ ಆತನೇ ತಮಗೆ ಬ್ಲ್ಯಾಕ್ ಮಾಡಿದ್ದ ಎಂಬ ಬಗ್ಗೆ ದೂರು ನೀಡಲು ಸೂರಜ್ ಆಗಮಿಸಿದ್ದರಂತೆ. ಅಲ್ಲದೇ ಇದಕ್ಕೆ ಸಂಬಂಧಿಸಿದ ಸಾಕ್ಷಿಗಳು, ಮೊಬೈಲ್ ಕಾಲ್ ಸೇರಿದಂತೆ ಇನ್ನಿತರೇ ದಾಖಲೆಗಳನ್ನು ನೀಡಲು ಆಗಮಿಸಿದ್ದರಂತೆ. ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಹಿರಿಯ ಪುತ್ರ ಆಗಿರುವ ಎಂಎಲ್ ಸಿ ಸೂರಜ್ ರೇವಣ್ಣ ಅವರು ದೂರು ನೀಡಲು ಬಂದಾಗ ಪೊಲೀಸ್ ಠಾಣೆಯಲ್ಲೇ ಬಂಧನ ಮಾಡಲಾಗಿತ್ತು. ಜೆಡಿಎಸ್ ಕಾರ್ಯಕರ್ತ, ಸಂತ್ರಸ್ತನ ವಿರುದ್ಧ ಸೂರಜ್ ರೇವಣ್ಣ ಅವರು ದೂರು ನೀಡಲು ಬಂದ ವೇಳೆ ಬಂಧನ ಮಾಡಲಾಗಿತ್ತು.
ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ವಿರುದ್ಧ ಐಪಿಸಿ ಸೆಕ್ಷೆನ್ 377,342,506 ಅಡಿ ಪ್ರಕರಣ ದಾಖಲಾಗಿದೆ. ಜಾಮೀನು ರಹಿತ ಕೇಸ್ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ್ದ ಪೊಲೀಸರು ಬಳಿಕ ಅರೆಸ್ಟ್ ಮಾಡಿದ್ದಾರೆ. ಸಲಿಂಗ ಕಾಮಕಾಂಡದಲ್ಲಿ ಎಚ್‌.ಡಿ.ರೇವಣ್ಣ ಪುತ್ರ ಸೂರಜ್‌ ರೇವಣ್ಣ ವಿಚಾರಣೆ ನಡೀತಿದೆ. ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಹೀಗಾಗಿ ಸಂತ್ರಸ್ತ ಕೊಟ್ಟ ದೂರಿನ ಹಿನ್ನಲೆ ತನಿಖಾಧಿಕಾರಿ ನೇಮಕ ಮಾಡಲಾಗಿದೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − eight =
Remember me
