| ಗಂಗಾಧರ್ ಬೈರಾಪಟ್ಟಣ ರಾಮನಗರ
ಓದಿದ್ದು ಪಿಯುಸಿ, ದುಡಿದು ಬದುಕು ಕಟ್ಟಿಕೊಳ್ಳಬೇಕು ಎನ್ನುವ ಕನಸು ಕಟ್ಟಿಕೊಂಡು ಹೋಗಿದ್ದು ಎನ್​ಜಿಒ ಒಂದರ ಹಿಂದೆ. ಆದರೆ ಅದೂ ಬಾಗಿಲು ಹಾಕಿದಾಗ ಇನ್ನೇನು ಬದುಕೇ ಮುಗಿಯಿತು ಎನ್ನುವ ಆತಂಕ. ಇದರ ಜತೆಗೆ ಬಂದಿದ್ದು ‘ನಮ್ಮೂರಲ್ಲೇ ಎಲ್ಲವೂ ಇದೆ. ನಾನೇಕೆ ಬೇರೊಬ್ಬರ ಬೆನ್ನ ಹಿಂದೆ ಬದುಕಬೇಕು’ ಎನ್ನುವ ಯೋಚನೆ. ಆಗ ನೆನಪಾದದ್ದೇ ನಾಲ್ಕೂವರೆ ಎಕರೆ ಕೃಷಿ ಭೂಮಿ. ಈಗ ಇದರಲ್ಲೇ ಬದುಕು, ಇದರಲ್ಲೇ ಹೊಸ ಅವಿಷ್ಕಾರ, ಮತ್ತೊಬ್ಬರಿಗೆ ಉತ್ತೇಜನ ಕೊಡುವಷ್ಟು ಸಾಧನೆ. ಇದು ರಾಮನಗರ ತಾಲೂಕಿನ ನಿಜಯಪ್ಪನದೊಡ್ಡಿ ಗ್ರಾಮದ ಸುರೇಂದ್ರ ಎಂಬ ಕೃಷಿಕರ ಸಾಧನೆ.
ಎಲ್ಲವೂ ವಿಭಿನ್ನ:ಚತುರ್ಭಜ ಅವರೆ, ಚರ್ರಿ ವೈನ್ ಟೊಮ್ಯಾಟೊ, ಪಲ್ಪ್ ಟೊಮ್ಯಾಟೊ, ಚಿಯಾ, ಪುಂಡಿ, ಬಿಳಿ ಉದ್ದದ ಬದನೆ, ವೈಟ್ ಬ್ಯೂಟಿ ಬದನೆ ಹೀಗೆ ವಿಭಿನ್ನ ತರಕಾರಿ ಮತ್ತು ಸೊಪ್ಪುಗಳನ್ನು ಸುರೇಂದ್ರ ತೋಟದಲ್ಲಿ ನೋಡಬಹುದಾಗಿದೆ. ಜತೆಗೆ ರಾಮಫಲ, ಸೀತಾಫಲ, ಜಂಬು ನೇರಳೆ, ನಡುವೆ ಸೀಬೆ, ಸಪೋಟ, ಶ್ರೀಗಂಧ, ಬದುಗಳ ಮೇಲೆ ಮಹಾಗನಿ, ತೇಗ ಹೀಗೆ ಹಲವಾರು ಗಿಡಗಳನ್ನು ಬೆಳೆಸಿ ಸಾಧನೆ ಮಾಡಿದ್ದಾರೆ. ತೋಟಕ್ಕೆ ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸ್ನೇಹಿತರಾದ ಹರ್ಷಿತ್ ಮತ್ತು ಹೇಮಂತ್ ಜತೆಗೂಡಿ ಸುರೇಂದ್ರ ‘ಬೇರು’ ಎಂಬ ಸಾವಯವ ಸಂಸ್ಥೆ ಕಟ್ಟಿದ್ದಾರೆ. ಸುರೇಂದ್ರ ದೇಸಿ ಬೀಜಗಳ ಬಿತ್ತನೆ ಮತ್ತು ಸಂಗ್ರಹ ಕಾರ್ಯವನ್ನೂ ಮಾಡುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − twelve =
Remember me
