ಮಂಡ್ಯ:ಇಂದು ಮಂಡ್ಯದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಜೆಡಿಎಸ್​ ಮಾಜಿ ಶಾಸಕ ಸುರೇಶ್​ ಗೌಡ, “ಸಚಿವರ ನಡುವೆ ಮಾತಿಲ್ಲ, ಕಥೆಯಿಲ್ಲ. ಕಳೆದ 7-8 ತಿಂಗಳಿಂದ ಜಮೀರ್​ ಅಹ್ಮದ್​ ಖಾನ್​ ಮತ್ತು ಚೆಲುವರಾಯಸ್ವಾಮಿ ಮಾತನಾಡುತ್ತಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಗೇಮ್ ಆಫ್ ಥ್ರೋನ್ಸ್ನಲ್ಲಿ ನಟಿಸಿದ್ದ ನಟ, ಡ್ಯಾರೆನ್ ಕೆಂಟ್ 36 ನೇ ವಯಸ್ಸಿನಲ್ಲಿ ವಿಧಿವಶ
“ಸಚಿವರಾದ ಜಮೀರ್ ಅಹ್ಮದ್​ ಖಾನ್ ಮತ್ತು ಚೆಲುವರಾಯಸ್ವಾಮಿ ಕಳೆದ ಏಳೆಂಟು ತಿಂಗಳಿಂದ ಮಾತನಾಡುತ್ತಿಲ್ಲ. ಕೃಷಿ ಸಚಿವರ ಪರ ಜಮೀರ್​ ಕ್ಯಾಂಪೇನ್​ಗೂ ಬರಲಿಲ್ಲ. ಈ ಮುನಿಸಿಗೆ ಕಾರಣವೇನು ಎಂಬ ಪ್ರಶ್ನೆಗೆ ಚೆಲುವರಾಯಸ್ವಾಮಿ ಉತ್ತರ ಕೊಡುತ್ತಾರಾ? ಎಚ್​.ಡಿ. ಕುಮಾರಸ್ವಾಮಿ ಅವರು ಯಾವುದಾದರೂ ಕ್ಯಾಸಿನೋಗೆ ಇಸ್ವೀಟ್ ಆಡಲು ಹೋಗಿದ್ದಾರೆಯೇ? ಆದ್ರೆ, ಇವರು ಆ ಕೆಲಸ ಮಾಡುತ್ತಾರೆ” ಎಂದು ಆರೋಪಿಸಿದರು.
ಇದನ್ನೂ ಓದಿ:KN Rajanna Calls HD Kumaraswamy As ‘Snake Charmer’ | ಎಚ್​​.ಡಿ. ಕುಮಾರಸ್ವಾಮಿಯನ್ನು ಹಾವಾಡಿಗನಿಗೆ ಹೋಲಿಸಿದ ಸಚಿವ ಕೆ.ಎನ್.ರಾಜಣ್ಣ
“ಎಲ್ಲೆಲ್ಲಿ ಜಮೀರ್ ಹೆಸರು ದುರ್ಬಳಕೆಯಾಗಿತ್ತು, ಏನೇನಾಗಿತ್ತು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಇಬ್ಬರು ಜತೆಯಲ್ಲೇ ವ್ಯಾಪಾರ ಮಾಡಿಕೊಂಡು ಹೋದವರು. ಜಮೀರ್, ಚೆಲುವರಾಯಸ್ವಾಮಿ ಆಪ್ತಮಿತ್ರರು. ಆದ್ರೆ, ಈಗ್ಯಾಕೆ ಮಾತನಾಡುತ್ತಿಲ್ಲ. ಒಂದು ಕಾಲದಲ್ಲಿ ಜಮೀರ್ ಸಾಹೇಬ್ರು ಇವರಿಗೆ ನೆಂಟರಲ್ವಾ? ಇಂದು ಯಾಕೆ ಇಲ್ಲ. ಮಿತ್ರದೋಹಿ ಕೆಲಸವನ್ನು ಕರಗತ ಮಾಡಿಕೊಂಡಿರುವ ಇವರು, ಕುಮಾರಣ್ಣನ ಬಗ್ಗೆ ಮಾತನಾಡುತ್ತಾರೆ” ಎಂದು ಸಚಿವ ಚೆಲುವರಾಯಸ್ವಾಮಿ ವಿರುದ್ದ ಸುರೇಶ್​ ಗೌಡ ನೇರ ವಾಗ್ದಾಳಿ ನಡೆಸಿದ್ದಾರೆ.
ಸ್ಟಾರ್ ಹೀರೋಯಿನ್ ಬಳಿ ಕ್ಷಮೆ ಕೇಳಿದ ನಟ ರಾಣಾ ದಗ್ಗುಬಾಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 7 =
Remember me
