ಬೆಂಗಳೂರು:ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆಯು ರಾಜಧಾನಿ ಬೆಂಗಳೂರಿನಲ್ಲಿ ಸೃಷ್ಟಿರುವ ಭೀಕರತೆ ಎಷ್ಟಿದೆ ಎಂಬುದಕ್ಕೆ ಸಚಿವ ಸುರೇಶ್​ ಕುಮಾರ್​ ಉದಾಹರಣೆ ಒಂದನ್ನು ನೀಡಿದ್ದು, ಭಯದ ಜತೆಗೆ ಮನಕಲಕುವಂತಿದೆ.
ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಸಚಿವ ಸುರೇಶ್​ ಕುಮಾರ್​ ಬರೆದುಕೊಂಡಿರುವ ಸಾರಾಂಶ ಈ ಕೆಳಕಂಡಂತಿದೆ….
ಇದು ನಿನ್ನೆ ನಡೆದ ಘಟನೆ. ಕನಕಪುರ ರಸ್ತೆಯ ತಲಗಟ್ಟಪುರ ಹತ್ತಿರದ ಒಂದು ಹಳ್ಳಿಯಲ್ಲಿ ಗಂಡ ಹೆಂಡತಿ ವಾಸವಾಗಿದ್ದರು. ಅದರಲ್ಲಿ ಗಂಡನಿಗೆ ಕೋವಿಡ್ ಬಂದು ತೀರಿ ಹೋಗಿದ್ದಾರೆ. ಅಂತ್ಯಸಂಸ್ಕಾರ ಮಾಡಲು ಸಹ ಯಾರು ಇಲ್ಲ. ಈ ಮಾಹಿತಿಯನ್ನು ನನ್ನ ಪತ್ರಕರ್ತ ಗೆಳೆಯರೊಬ್ಬರು ನನಗೆ ತಿಳಿಸಿದರು. ತಕ್ಷಣವೇ ರಾಜಾಜಿನಗರದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ಮಾಡಿ ವಿಷಯ ತಿಳಿಸಿ ಅಗತ್ಯ ನೆರವು ನೀಡಲು ತಿಳಿಸಿದೆ.
ನಮ್ಮ ಕಾರ್ಯಕರ್ತರು ವಿಚಾರಿಸಿದಾಗ ಆ ವ್ಯಕ್ತಿಗೆ ಜ್ವರ ಬಂದ ಕಾರಣ ಸ್ಥಳೀಯ ಆಸ್ಪತ್ರೆಗೆ ಕಳೆದ ವಾರ ಹೋಗಿ ಪರೀಕ್ಷೆ ಮಾಡಿಸಿರುವ ವಿಚಾರ ತಿಳಿದುಬಂದಿದೆ. ಅಲ್ಲಿ ಅವರಿಗೆ ಕೋವಿಡ್ ಪಾಸಿವಿಟ್ ಎಂದು ತಿಳಿಯುತ್ತದೆ. ಅವರು ನೇರವಾಗಿ ಮನೆಗೆ ಬಂದು ಕೋಣೆಯಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗುತ್ತಾರೆ. ಮೊನ್ನೆ ಸಂಜೆ ಅವರ ಹೆಂಡತಿ ಕೋಣೆಗೆ ಹೋಗಿ ನೋಡಿದರೆ ಗಂಡ ಮರಣ ಹೊಂದಿರುವುದು ತಿಳಿಯುತ್ತದೆ.
ಇದನ್ನೂ ಓದಿರಿ:ಬಾಲ್ಕನಿಯಲ್ಲಿ ಬೆತ್ತಲಾದ ಮಾಡೆಲ್​ಗಳಿಗೆ​ ಶಾಕ್​ ಕೊಟ್ಟ ದುಬೈ: ಮುಂದಿನ 5 ವರ್ಷ ಈ ಷರತ್ತು ಅನ್ವಯ!
ಇದರಿಂದ ಹೆಂಡತಿಗೆ ಗಾಬರಿಯಾಗಿ ಏನು ಮಾಡಬೇಕೆಂದು ತಿಳಿಯದೆ ದಿಗ್ಬ್ರಮೆಯಾಗುತ್ತಾರೆ. ನಂತರ ಅಕ್ಕ-ಪಕ್ಕದ ಮನೆಯವರಿಗೆ ವಿಷಯ ತಿಳಿದು ಅವರು ಮೈಸೂರಿನಲ್ಲಿರುವ ಗಂಡನ ಬಾಮೈದನಿಗೆ ಕರೆ ಮಾಡಿ ತಿಳಿಸುತ್ತಾರೆ. ಮೈಸೂರಿನಿಂದ ಕಾರಿನಲ್ಲಿ ಬಂದ ಅವರು ಕರೊನಾ ಕಾರಣದಿಂದ ಮನೆಯ ಒಳಗೆ ಹೋಗದೆ ಹೊರಗಡೆ ಕಾರಿನಲ್ಲೇ ರಾತ್ರಿ ಪೂರ್ತಿ ಮಲಗುತ್ತಾರೆ.
ಒಂದು ಕಡೆ ರೂಮ್​ನಲ್ಲಿ ಹೆಣ, ಮತ್ತೊಂದೆಡೆ ಹಾಲ್​ನಲ್ಲಿ ಹೆಂಡತಿ ಹಾಗೂ ಹೊರಗಡೆ ಕಾರಿನಲ್ಲಿ ಬಾಮೈದ. ಯಾರಿಗೂ ಮುಂದೆ ಏನು ಮಾಡಬೇಕೆಂದು ತಿಳಿದಿಲ್ಲ. ಶುಕ್ರವಾರ, ನಮ್ಮ ರಾಜಾಜಿನಗರ ಕಾರ್ಯಕರ್ತರು ಸ್ಥಳೀಯ ಆರೋಗ್ಯಾಧಿಕಾರಿ ಅವರನ್ನು ಸಂಪರ್ಕಿಸಿ ಅವರಿಂದ ಡೆತ್ ಸರ್ಟಿಫಿಕೇಟ್ ಪಡೆದು ಕೆಂಗೇರಿಯ ಚಿತಾಗಾರದಲ್ಲಿ ಶವದ ಅಂತಿಮ ಕಾರ್ಯಕ್ಕೆ ವ್ಯವಸ್ಥೆ ಮಾಡಿ ಮುಗಿಸಿದರು.
ಅಲ್ಲಿ ಶವದ ಪರವಾಗಿ ಅವರ ಒಬ್ಬ ಸಂಬಂಧಿ ಬಿಟ್ಟು ಯಾರು ಸಹ ಇರಲಿಲ್ಲ. ಅವರು ಶವದ ಹತ್ತಿರವಿರಲಿ, ಅದರ ವಾಹನ ಹತ್ತಿರ ಬರಲು ಹೆದರುತ್ತಿದ್ದರು. ಮೃತದೇಹದ ಪೂಜಾಕಾರ್ಯವನ್ನು ಮಾಡಲಿಲ್ಲ. ಅಂತಿಮವಾಗಿ ನಮ್ಮ ಕಾರ್ಯಕರ್ತರೇ ಅಂತಿಮ ಸಂಸ್ಕಾರ ಮಾಡಿ ಬಂದರು. ಧೈರ್ಯದಿಂದ, ಒಳ್ಳೆ ಮನಸ್ಸಿನಿಂದ, ಯಾವುದೇ ಫಲಾಪೇಕ್ಷೆ ಇಲ್ಲದೆ ನಮ್ಮ ಕಾರ್ಯಕರ್ತರು ಸಂಸ್ಕಾರ ಮಾಡಿ ಮಾನವೀಯತೆ ಮೆರೆದರು ಎಂದು ಸುದೀರ್ಘವಾಗಿ ಸುರೇಶ್​ ಕುಮಾರ್​ ಬರೆದುಕೊಂಡಿದ್ದಾರೆ.
ಬಾಲ್ಕನಿಯಲ್ಲಿ ಬೆತ್ತಲಾದ ಮಾಡೆಲ್​ಗಳಿಗೆ​ ಶಾಕ್​ ಕೊಟ್ಟ ದುಬೈ: ಮುಂದಿನ 5 ವರ್ಷ ಈ ಷರತ್ತು ಅನ್ವಯ!
ಮನೆಯ ಮುಖ್ಯದ್ವಾರದ ಚಿಲಕಕ್ಕೆ ಕಟ್ಟಿದ್ದ ಪತ್ರದಲ್ಲಿನ ಭಾಷೆ ನೋಡಿ ಬೆಚ್ಚಿಬಿದ್ದ ಕುಟುಂಬ!
ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕುಂಭಮೇಳ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 19 =
Remember me
