ಬೆಂಗಳೂರು:ದೇಶ ಮತ್ತು ರಾಜ್ಯದಲ್ಲಿ ಕರೊನಾ ಭೀತಿ ಹೆಚ್ಚಾಗಿರುವ ಕಾರಣ ಅನೇಕ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಂಡಿವೆ. ಶಾಲಾ ಕಾಲೇಜುಗಳಲ್ಲಿ ವೈರಸ್​ ತಡೆಗಟ್ಟುವಿಕೆಗೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಇನ್ನು ಕೆಲ ದಿನಗಳಲ್ಲೇ ಆರಂಭವಾಗಲಿರುವ ದ್ವಿತೀಯ ಪಿಯು ಪರೀಕ್ಷೆಯನ್ನು ಯಾವುದೇ ಭಯವಿಲ್ಲದೆ ಧೈರ್ಯವಾಗಿ ಬರೆಯಿರಿ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಹೇಳಿದ್ದಾರೆ.
“ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಿಮ್ಮ ವಿಶ್ವಾಸಕ್ಕೆ‌ ಧಕ್ಕೆ ಬರದ ರೀತಿಯಲ್ಲಿ ನಿರ್ವಹಿಸಿದೆ. ನಿಮಗೆ ಪಾಠ ಮಾಡಿದ ಉಪನ್ಯಾಸಕರೇ ನಿಮ್ಮ ಮೌಲ್ಯಮಾಪಕರಾದ ಕಾರಣ ಅವರು ನಿಮ್ಮ ಹಿತ ಕಾಯದೇ ಇರರು. ನಿಮ್ಮ ಹಿತ ಕಾಪಾಡುವುದು ಉಪನ್ಯಾಸಕರ ಜವಾಬ್ದಾರಿಯಾದರೆ ಅವರ ಹಿತವನ್ನು ಕಾಪಾಡುವ ಜವಾಬ್ದಾರಿ ನನ್ನದು. ನೀವು ಆತ್ಮ ವಿಶ್ವಾಸದಿಂದ ಪರೀಕ್ಷೆ‌ ಎದುರಿಸಿ” ಎಂದು ಸುರೇಶ್​ ಕುಮಾರ್​ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.
ಕರೊನಾ ವೈರಸ್​ ತಡೆಗಟ್ಟುವ ಸಲುವಾಗಿ ರಾಜ್ಯದಲ್ಲಿ ಒಂದರಿಂದ ಆರನೇ ತರಗತಿಯ ವಿದ್ಯಾರ್ಥಿಗಳಿಗೆ ಈಗಾಗಲೇ ಬೇಸಿಗೆ ರಜೆಯನ್ನು ನೀಡಲಾಗಿದ್ದು, 7,8 ಮತ್ತು ಒಂಬತ್ತನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡಲಾಗಿದೆ. ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳು ನಿಗದಿಯಾಗಿರುವ ವೇಳಾಪಟ್ಟಿಯಂತೆ ನಡೆಯಲಿವೆ.
ಸಚಿವ ಸುರೇಶ್ ಕುಮಾರ್ ಅವರ ಸಂಪೂರ್ಣ ಹೇಳಿಕೆಗಾಗಿ ಕೆಳಗಿನ ವಿಡಿಯೋ ಲಿಂಕ್​ ನೋಡಿ…
https://www.instagram.com/tv/B9yDtFWn8_s/?utm_source=ig_web_button_share_sheet
ಲಸಿಕೆ ಸಂಶೋಧಿಸುವ ತಂಡದಲ್ಲಿ ಕನ್ನಡಿಗ ಯುವ ವಿಜ್ಞಾನಿ

ಕರೊನಾದಿಂದ ವೃದ್ಧ ಮೃತಪಟ್ಟ ಪ್ರಕರಣ: ಆತನ ಟ್ರಾವೆಲ್ ಹಿಸ್ಟರಿಯಲ್ಲಿದೆ ಬೆಚ್ಚಿ ಬೀಳುವ ಅಂಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 15 =
Remember me
