
ಬೆಂಗಳೂರು:ಕಳೆದ ಸಾಲಿನಲ್ಲಿ ಬಾಕಿ 520 ಕೋಟಿ ರೂ. ಹಾಗೂ ಪ್ರಸಕ್ತ ಸಾಲಿನ 275 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಆರ್‌ಟಿಇ ಮರುಪಾವತಿ ಅನುದಾನವನ್ನು ಪೂರಕ ಅನುದಾನದಲ್ಲಿ ಮಂಜೂರು ಮಾಡಿ, ತನ್ಮೂಲಕ ಖಾಸಗಿ ಶಾಲಾ ಶಿಕ್ಷಕರಿಗೆ ವೇತನ ನೀಡಲು ಅನುವು ಮಾಡಿಕೊಡಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ರಾಜ್ಯದ ಸುಮಾರು 11,500 ಶಾಲೆಗಳಲ್ಲಿರುವ 5.35 ಲಕ್ಷ ಆರ್‌ಟಿಇ ವಿದ್ಯಾರ್ಥಿಗಳಿಗೆ 2019-20ನೇ ಸಾಲಿಗೆ ಸರ್ಕಾರವು 520 ಕೋಟಿ ರೂ.ಗಳನ್ನು ಮರುಪಾವತಿ ಶುಲ್ಕವಾಗಿ ಸಂಬಂಧಪಟ್ಟ ಶಾಲೆಗಳಿಗೆ ನೀಡಬೇಕಿದೆ.ಅದೇ ರೀತಿ 2020-21ನೇ ಸಾಲಿಗೆ ಸಂಬಂಧಿಸಿದ 570 ಕೋಟಿ ರೂ.ಗಳನ್ನು ಶಿಕ್ಷಣ ಇಲಾಖೆಯು ಶಾಲೆಗಳಿಗೆ ನೀಡಬೇಕಾಗಿದೆ. ಒಟ್ಟಾರೆಯಾಗಿ 1,090 ಕೋಟಿ ರೂ.ಗಳ ಅನುದಾನ ಅವಶ್ಯಕತೆ ಇದೆ.ಇದನ್ನೂ ಓದಿ:ಭಾರತದಲ್ಲಿನ ತನ್ನ ಕಾರ್ಖಾನೆ ಮುಚ್ಚಲು ಹಾರ್ಲೆ ಡೇವಿಡ್​ಸನ್ ನಿರ್ಧಾರ..!​
ಇದರಲ್ಲಿ 2020-21ನೇ ಸಾಲಿನ ಬಜೆಟ್‌ನಲ್ಲಿ 550 ಕೋಟಿ ರೂ.ಗಳಲ್ಲಿ 275 ಕೋಟಿ ರೂ.ಗಳನ್ನು ಮೊದಲನೇ ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ. ಆದರೂ ಕಳೆದ ಸಾಲಿನ ಮರುಪಾವತಿ ಪೂರ್ಣಗೊಳ್ಳದಿರುವುದರಿಂದ ಖಾಸಗಿ ಶಾಲೆ ಶಿಕ್ಷಕರು ಶಿಕ್ಷಕ ವೃತ್ತಿ ತೊರೆದು ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಗಳಂತಹ ಕನಿಷ್ಠ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಿದೆ. ಈ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತಿದೆ. ಸಾಮಾಜಿಕವಾಗಿಯೂ ಋಣಾತ್ಮಕ ಸಂದೇಶ ಬೀರಿದೆ. ಆದ್ದರಿಂದ ಬಾಕಿ ಇರುವ 795 ಕೋಟಿ ರೂ. ಆರ್‌ಟಿಇ ಮರುಪಾವತಿ ಶುಲ್ಕವನ್ನು ಬಿಡುಗಡೆ ಮಾಡುವಂತೆ ಸಚಿವರು ಮನವಿ ಮಾಡಿದ್ದಾರೆ.
ಸೆ.25ರಿಂದ ಲಾಕ್​ಡೌನ್​ ಪಕ್ಕಾನಾ? ಏನಿದು ಒಕ್ಕಣೆ !
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 20 =
Remember me
