ಬೆಂಗಳೂರು:ಅನಾರೋಗ್ಯದಿಂದ ಬಳಲುತ್ತಿದ್ದ ‘ಆರೋಗ್ಯ ಕವಚ 108 ಆಂಬುಲೆನ್ಸ್’ ವ್ಯವಸ್ಥೆಗೆ ಚಿಕಿತ್ಸೆ ನೀಡಿ ರೋಗಿಗಳಿಗೆ ಅನುಕೂಲ ಮಾಡಿಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಆಂಬುಲೆನ್ಸ್ ಸೇವೆಗೆ ಈಗಿರುವ ನಿಬಂಧನೆಗಳಲ್ಲಿ ಕೆಲ ಮಾರ್ಪಾಡು ಮಾಡಿ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಸೇವೆ ಒದಗಿಸಲು ಸೇವಾದಾರರ ಆಯ್ಕೆಗೆ ಟೆಂಡರ್ ಕರೆಯಲು ಸಂಪುಟ ಅನುಮೋದನೆ ನೀಡಿದೆ.
ರಾಜ್ಯದಲ್ಲಿ ಪ್ರಸ್ತುತ 711 ಆಂಬುಲೆನ್ಸ್​ಗಳಿದ್ದು, ಅವುಗಳನ್ನು 1 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ. 7 ವರ್ಷಗಳ ಅವಧಿಗೆ ಈ ಟೆಂಡರ್ ಕರೆಯಲಾಗುತ್ತಿದ್ದು, 1850 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ. 2008ರಲ್ಲಿ ಜಿವಿಕೆ ಇಎಂಆರ್​ಐ ಸಂಸ್ಥೆ ಮಾಡಿಕೊಂಡಿದ್ದ ಒಡಂಬಡಿಕೆ 2018ರಲ್ಲಿ ಅಂತ್ಯಗೊಂಡಿತ್ತು. ತರುವಾಯ ಟೆಂಡರ್ ದಾಖಲೆ ಸಿದ್ಧಪಡಿಸಲು ಹೈಪವರ್ ಕಮಿಟಿ ರಚಿಸಿ ಅಂತಿಮಗೊಳಿಸಲಾಗಿದೆ. ಸೇವಾದಾರರ ಟೆಂಡರ್ ಕರೆಯಲು ಸಂಪುಟ ಒಪ್ಪಿಗೆ ನೀಡಿರುವುದಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
108 ಆಂಬುಲೆನ್ಸ್ ಚಾಲಕರು, ಪ್ಯಾರಾಮೆಡಿಕಲ್ ಸಿಬ್ಬಂದಿ ಬಗ್ಗೆ ಇರುವ ದೂರುಗಳನ್ನು ಗಮನದಲ್ಲಿರಿಸಿಕೊಂಡು ಹೊಸ ನಿಯಮಗಳನ್ನು ಅಳವಡಿಸಿ ಟೆಂಡರ್ ಕರೆಯಲು ಸಂಪುಟ ಒಪ್ಪಿಗೆ ಸೂಚಿಸಿರುವುದಾಗಿ ಸಚಿವರು ವಿವರಿಸಿದರು. ಸದ್ಯ ಬೆಂಗಳೂರಿನಲ್ಲಿ ಮಾತ್ರ 108 ಆಂಬುಲೆನ್ಸ್ ಕಾಲ್ ಸೆಂಟರ್ ಇದ್ದು, ಹುಬ್ಬಳ್ಳಿಯಲ್ಲೂ ಮತ್ತೊಂದು ಕಾಲ್ ಸೆಂಟರ್ ಆರಂಭಿಸುವುದಾಗಿ ಸಚಿವ ಮಾಧುಸ್ವಾಮಿ ತಿಳಿಸಿದರು.
ನಷ್ಟದ 2 ಪಟ್ಟು ದಂಡ!
ಸಾಂಕ್ರಾಮಿಕ ರೋಗಗಳ ತಿದ್ದುಪಡಿ ಕಾಯ್ದೆ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಗೊಳಿಸಿದ್ದು, ಮುಂಬರುವ ಅಧಿವೇಶನದಲ್ಲಿ ಈ ವಿಧೇಯಕಕ್ಕೆ ಅನುಮೋದನೆ ಪಡೆಯಲಾಗುವುದು. ಈ ಕಾಯ್ದೆ ಉಲ್ಲಂಘಿಸಿ ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡುವವರಿಂದ ನಷ್ಟದ ಎರಡು ಪಟ್ಟು ದಂಡ ವಸೂಲು ಮಾಡಲು ಅವಕಾಶ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಹೊಸ ನಿಯಮದಲ್ಲೇನಿದೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + two =
Remember me
