ಹಾವೇರಿ:ಕಟ್ಟಡವೊಂದರ ತೆರವು ಕಾರ್ಯಾಚರಣೆ ವೇಳೆ ಅವಶೇಷಗಳಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ನಾಗರಹಾವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ರಕ್ಷಿಸಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಉರಗ ತಜ್ಞ ಸ್ನೇಕ್ ನಾಗರಾಜ್​ ಹಾಗೂ ಹಾವೇರಿ ಪಾಲಿಕ್ಲಿನಿಕ್​ನ ಡಾ. ಸಣ್ಣಬೀರಪ್ಪ ಸಣ್ಣಪುಟ್ಟಕ್ಕನವರ ಸಕಾಲಿಕ ಕಾರ್ಯಾಚರಣೆಯಿಂದ ಪ್ರಾಣ ಸಂಕಟದಲ್ಲಿ ನರಳುತ್ತಿದ್ದ ನಾಗರಹಾವು ಬದುಕುಳಿದಿದೆ.
ಇದನ್ನೂ ಓದಿ:ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಆಘಾತ; ಕುಸ್ತಿಯಲ್ಲಿ ರಿತಿಕಾ ಹೂಡಾಗೆ ಸೋಲು, ಇನ್ನೂ ಇದೆ ಪದಕ ಗೆಲ್ಲುವ ಚಾನ್ಸ್
ಹಾವೇರಿ ನಗರದ ಹೊರವಲಯದಲ್ಲಿರುವ ಡಾಬಾವೊಂದರ ಹಳೆಯ ಕಟ್ಟಡ‌ ತೆರವು ಕಾರ್ಯಾಚರಣೆ ವೇಳೆ ಹಾವೊಂದು ಅವಶೇಷಗಳಡಿ ಸಿಲುಕಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಉರಗತಜ್ಞ ಸ್ನೇಕ್​ ನಾಗರಾಜ್​ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ನಾಗರಾಜ್ ಗಾಯಗೊಂಡಿದ್ದ​ ಹಾವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಾವಿನ ಕೆಲಭಾಗದಲ್ಲಿ ಗಾಯವಾಗಿರುವುದನ್ನು ಗಮನಿಸಿದ ವೈದ್ಯ ಡಾ. ಸಣ್ಣಬೀರಪ್ಪ ಸಣ್ಣಪುಟ್ಟಕ್ಕನವರ ಸಕಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ನೋವಿನಲ್ಲಿ ಒದಾಡುತ್ತಿದ್ದ ಮೂಕಜೀವಿಗೆ ಆಸರೆಯಾಗಿದ್ದಾರೆ. ಆಪರೇಷನ್​ ಬಳಿಕ ಸ್ನೇಕ್ ನಾಗರಾಜ್​ ಐದು ದಿನ ಮನೆಯಲ್ಲಿ ಆರೈಕೆ ಮಾಡಿ, ನಂತರ ಅದನ್ಉ ಕರ್ಜಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 8 =
Remember me
