ರಾಯಚೂರು:ಯಾವುದೇ ಒಂದು ದೇವಸ್ಥಾನದ ರಥ ಒಂದಿಂಚು ಜರುಗಬೇಕೆಂದರೂ ನೂರಾರು ಮಂದಿ, ಕಡೇಪಕ್ಷ ಹತ್ತಾರು ಜನರಾದರೂ ಕೈಜೋಡಿಸಬೇಕು. ಆದರೆ ಇಲ್ಲೊಂದು ಕಡೆ ಅಚ್ಚರಿ ಎಂಬಂತೆ ಸ್ವಾಮೀಜಿಯೊಬ್ಬರ ಬರಿಯ ಇಶಾರೆಗೇ ತೇರು ತಂತಾನೇ ಚಲಿಸುವ ಮೂಲಕ ಕುತೂಹಲ ಕೆರಳಿಸಿದೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಬೂದಿಬಸವೇಶ್ವರ ಮಠದಲ್ಲಿ ಇಂಥದ್ದೊಂದು ಅಚ್ಚರಿ ವಿದ್ಯಮಾನ ಕಂಡುಬಂದಿದೆ. ಫೆ. 24ರಂದು ಇಲ್ಲಿ ರಥೋತ್ಸವ ನಡೆದಿದ್ದು, ನಿನ್ನೆ ಹುಣ್ಣಿಮೆಯಂದು ರಥ ತೇರುಮನೆ ಸೇರಿದೆ. ವಿಶೇಷವೆಂದರೆ ರಥ ಹೀಗೆ ತೇರುಮನೆ ಸೇರುವಾಗ ಹತ್ತಾರು ಅಥವಾ ನೂರಾರು ಮಂದಿ ಸೇರಿ ತಳ್ಳುವುದಿಲ್ಲ. ಬದಲಿಗೆ ಶ್ರೀಬೂದಿಬಸವೇಶ್ವರ ಶಿವಾಚಾರ್ಯರ ಕೈ ಇಶಾರೆಯೊಂದರ ಮೇರೆಗೇ ಈ ರಥ ತೇರುಮನೆಯನ್ನು ಸೇರುತ್ತದೆ.
ಹೀಗೆ ಮೂರ್ನಾಲ್ಕು ಅಡಿಗಳ ದೂರ ರಥ ತಂತಾನೇ ಚಲಿಸಿ ತೇರುಮನೆಯನ್ನು ಸೇರುವುದು ಹಲವಾರು ವರ್ಷಗಳಿಂದ ನಡೆಯುತ್ತಿದ್ದು, ಇಂದಿಗೂ ಕೌತುಕವಾಗಿ ಪರಿಣಮಿಸಿದೆ. ಈ ದೃಶ್ಯದ ವಿಡಿಯೋ ಇದೀಗ ವೈರಲ್​ ಆಗಿದ್ದು, ಇಂದು ನ್ಯಾಷನಲ್​ ಸೈನ್ಸ್​ ಡೇ ಗುಂಗಿನಲ್ಲಿ ಇರುವವರಿಗೂ ಉತ್ತರವಿಲ್ಲದ ಕುತೂಹಲಕಾರಿ ಘಟನೆಯಾಗಿ ಪರಿಣಮಿಸಿದೆ. ನಿನ್ನೆಯ ಹುಣ್ಣಿಮೆಯಿಂದ ಅದರ ಹಿಂದಿನ ಹುಣ್ಣಿಮೆವರೆಗೆ ಒಂದು ತಿಂಗಳ ಕಾಲ ಇಲ್ಲಿ ಉತ್ಸವ ಇರುತ್ತದೆ.
ಸ್ವಾಮೀಜಿಯ ಇಶಾರೆಗೇ ತಂತಾನೇ ಚಲಿಸಿ ತೇರುಮನೆ ಸೇರಿಕೊಂಡ ರಥ!ವಿವರಗಳಿಗೆhttps://t.co/YaFZZbZDD9ನೋಡಿ..pic.twitter.com/mFGyciidxe
— Vijayavani (@VVani4U)February 28, 2021


ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ನೀವೂ ಬಿಗ್​ಬಾಸ್​ ಮನೆಯೊಳಗೆ ಹೋಗಬಹುದು! ಇಲ್ಲಿದೆ ನೋಡಿ ಅವಕಾಶ

ಸಲಿಂಗಕಾಮಿ ಸೋದರನಿಗಾಗಿ ಬಾಡಿಗೆ ತಾಯಿಯಾದಳು; ಆರು ಮಕ್ಕಳ ತಾಯಿಯಿಂದ ವಿಶೇಷ ಪ್ರಯತ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 3 =
Remember me
