| ಕೀರ್ತಿನಾರಾಯಣ ಸಿ.ಬೆಂಗಳೂರು
ಭ್ರಷ್ಟಾಚಾರ, ಲಂಚಕ್ಕೆ ಬೇಡಿಕೆ, ಸುಳ್ಳು ಕೇಸ್ ದಾಖಲು, ಸುಲಿಗೆ, ಅನುಚಿತ ವರ್ತನೆ ಸೇರಿ ಪೊಲೀಸರ ವಿರುದ್ಧ ಕೇಳಿಬರುವ ಆರೋಪಗಳ ನಿಯಂತ್ರಣ ಹಾಗೂ ಕರ್ತವ್ಯದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಬಾಡಿವೋರ್ನ್ ಕ್ಯಾಮರಾ ಧರಿಸುವುದನ್ನು ಪೊಲೀಸ್ ಇಲಾಖೆ ಕಡ್ಡಾಯಗೊಳಿಸಿದೆ. ಯಾವುದೇ ಪ್ರಕರಣದಲ್ಲಿ ವ್ಯಕ್ತಿಯನ್ನು ಬಂಧಿಸಲು ಹೋಗುವ ಪೊಲೀಸರು ಇನ್ಮುಂದೆ ಬಾಡಿವೋರ್ನ್ ಧರಿಸಿರಬೇಕು. ಬಂಧನದ ಎಲ್ಲ ಪ್ರಕ್ರಿಯೆಯೂ ಕ್ಯಾಮರಾದಲ್ಲಿ ರೆಕಾರ್ಡ್ ಆಗಿರಬೇಕು ಎಂದು ಆದೇಶಿಸಿದೆ.
ಬೆಂಗಳೂರಿನಲ್ಲಿ ಸಂಚಾರ ಹಾಗೂ ಹೊಯ್ಸಳ ಪೊಲೀಸರಿಗಷ್ಟೇ ಸೀಮಿತವಾಗಿದ್ದ ಬಾಡಿವೋರ್ನ್ ಕ್ಯಾಮರಾ ಧರಿಸುವ ಯೋಜನೆಯನ್ನು ರಾಜ್ಯದ ಎಲ್ಲ ಪೊಲೀಸರಿಗೆ ವಿಸ್ತರಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ. ಬಂಧನ ವೇಳೆ ಕ್ಯಾಮರಾಗಳನ್ನು ಧರಿಸುವ ವ್ಯವಸ್ಥೆ ಜಾರಿಗೊಳಿಸುವಂತೆ 2022ರ ಜೂ.10ರಂದು ನೀಡಿದ್ದ ಹೈಕೋರ್ಟ್ ಆದೇಶವನ್ನು ಪೊಲೀಸ್ ಇಲಾಖೆ ಈಗ ಅನುಷ್ಠಾನಕ್ಕೆ ತರುತ್ತಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಸಂದರ್ಭ, ಅಪರಾಧ ಪ್ರಕರಣಗಳ ತನಿಖೆ ಹಾಗೂ ಸಂಚಾರ ವ್ಯವಸ್ಥೆ ನಿರ್ವಹಣೆ ವೇಳೆ ಕ್ಯಾಮರಾಗಳನ್ನು ಧರಿಸಲು ಡಿಜಿಪಿ ಸೂಚಿಸಿದ್ದು, ಅವುಗಳ ಬಳಕೆ ಹೇಗಿರಬೇಕು? ಜವಾಬ್ದಾರಿ ನಿರ್ವಹಣೆ ಹೇಗೆ? ಸೇರಿ ಇನ್ನಿತರ ಅಂಶಗಳನ್ನು ಒಳಗೊಂಡ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಇದನ್ನು ಪಾಲನೆ ಮಾಡುವಂತೆ ರಾಜ್ಯದ ಎಲ್ಲ ಕಮಿಷನರ್​ಗಳು, ಐಜಿಪಿ, ಡಿಸಿಪಿಗಳು ಸೇರಿ ಎಲ್ಲ ಘಟಕದ ಮುಖ್ಯಸ್ಥರಿಗೆ ನಿರ್ದೇಶನ ಕೊಟ್ಟಿದ್ದಾರೆ.
ಪೊಲೀಸರು ಅಪರಾಧ ಪ್ರಕರಣಗಳನ್ನು ಭೇದಿಸುವುದರ ಜತೆಗೆ ಬಂದೋಬಸ್ತ್, ಪ್ರತಿಭಟನೆ ಹಾಗೂ ಗಲಾಟೆ ನಡೆದಾಗ ಸ್ಥಳಕ್ಕೆ ಹೋಗಿ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ. ಪ್ರಕರಣ ದಾಖಲಿಸುವಲ್ಲಿ, ಆರೋಪಿಗಳನ್ನು ಹಿಡಿಯುವಲ್ಲಿ ವಿಳಂಬವಾದರೆ ಪೊಲೀಸರ ವಿರುದ್ಧ ಆರೋಪಗಳು ಕೇಳಿಬರುತ್ತವೆ.
ಅಲ್ಲದೆ ಪೊಲೀಸರೊಂದಿಗೆ ಕೆಲವರು ಅನುಚಿತ ವರ್ತನೆ, ಕಾನೂನುಬಾಹಿರವಾಗಿ ವರ್ತಿಸುತ್ತಾರೆ. ಅದೇ ರೀತಿ ಪೊಲೀಸರೂ ಸಾರ್ವಜನಿಕರ ಜತೆ ಅನುಚಿತವಾಗಿ ವರ್ತಿಸುವ, ಬೆದರಿಕೆ ಹಾಕುವ, ಹಣ ಕೇಳುವ ಆರೋಪಗಳು ಕೇಳಿಬರುತ್ತವೆ. ಕರ್ತವ್ಯದಲ್ಲಿ ಪಾರದರ್ಶಕತೆ ತರುವ ಜತೆಗೆ ಪೊಲೀಸರ ನಡವಳಿಕೆಯಲ್ಲಿ ದಕ್ಷತೆ ತರಲು ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ವಣಕ್ಕೆ ಬಾಡಿವೋರ್ನ್ ಕ್ಯಾಮರಾ ಸಹಕಾರಿಯಾಗಲಿದೆ.
ಮಾರ್ಗಸೂಚಿಗಳೇನು?
* ವ್ಯಕ್ತಿಗಳ ಮುಖಗಳು ಹಾಗೂ ಸ್ಥಳದ ಘಟನಾವಳಿಗಳು ಸರಿಯಾಗಿ ಚಿತ್ರೀಕರಣವಾಗುವಂತೆ ಎಡಭುಜಕ್ಕೆ ಬಾಡಿವೋರ್ನ್ ಕ್ಯಾಮರಾ ಧರಿಸಬೇಕು. ಯಾರ ಬಗ್ಗೆ ರೆಕಾರ್ಡ್ ಮಾಡಲಾಗುತ್ತಿದೆಯೋ ಅವರಿಗೆ ಚಿತ್ರೀಕರಣದ ಬಗ್ಗೆ ತಿಳಿಸಬೇಕು.
* ಆಯಾ ಘಟಕದ ಮುಖ್ಯಸ್ಥರು, ಕ್ಯಾಮರಾಗಳ ಸಂಪೂರ್ಣ ಸುರಕ್ಷತೆಗೆ ಬೇಕಾದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕ್ಯಾಮರಾ ಬಳಕೆಯ ತರಬೇತಿ ಪಡೆದ ಅಧಿಕಾರಿ ಮತ್ತು ಸಿಬ್ಬಂದಿಗಷ್ಟೇ ಕೊಡಬೇಕು.
* ಒಬ್ಬ ಅಧಿಕಾರಿ ಬಳಸಿದ ನಂತರ ಬಾಡಿವೋರ್ನ್ ಕ್ಯಾಮರಾದಲ್ಲಿರುವ ಡೇಟಾ ಸುರಕ್ಷಿತವಾಗಿರಿಸಿ ನಂತರ ಬೇರೊಬ್ಬ ಅಧಿಕಾರಿಗೆ ಕೊಡಬೇಕು. ಕ್ಯಾಮರಾ ಸದಾ ಬ್ಯಾಟರಿ ಚಾರ್ಜ್​ನಲ್ಲಿರುವಂತೆ ಘಟಕದ ಮುಖ್ಯಸ್ಥರೇ ಎಚ್ಚರಿಕೆ ವಹಿಸಬೇಕು.
* ಸಾಕ್ಷ್ಯ ಸಂಗ್ರಹ, ಕ್ಯಾಮರಾ ಕಾರ್ಯಾಚರಣೆ, ಸುರಕ್ಷತೆ ಬಗ್ಗೆ ಪೊಲೀಸರಿಗೆ ಸೂಕ್ತ ತರಬೇತಿ ಕೊಡಬೇಕು. ಪರಿಣಾಮಕಾರಿಯಾಗಿ ಬಳಸಲು ಆಗಾಗ ತರಬೇತಿ ಹಾಗೂ ಮೌಲ್ಯಮಾಪನ ಮಾಡುತ್ತಿರಬೇಕು.
* ಕ್ಯಾಮರಾದಲ್ಲಿ ದಾಖಲಾದ ಡೇಟಾವನ್ನು ಕನಿಷ್ಠ 30 ದಿನ ಅಥವಾ ಪ್ರಕರಣದ ತನಿಖೆಗೆ ಅಗತ್ಯವಿರುವವರೆಗೆ ಉಳಿಸಿಕೊಳ್ಳಬೇಕು. ಪ್ರತಿಯೊಂದು ಡೇಟಾವನ್ನು ಪೋರ್ಟಬಲ್ ಡಿವೈಸ್​ಗೆ ಕಾಪಿ ಮಾಡಬೇಕು.
1. ಅಪರಾಧ ಪ್ರಕರಣಗಳ ತನಿಖೆಗೆ ಹೋಗುವಾಗ ಧರಿಸಬೇಕು
2. ಕ್ಯಾಮರಾ ಚಿತ್ರೀಕರಣ ಬಗ್ಗೆ ಆರೋಪಿಗೂ ತಿಳಿಸಲು ಸೂಚನೆ
3. 2022ರಲ್ಲಿ ಹೈಕೋರ್ಟ್ ಹೊರಡಿಸಿದ್ದ ಆದೇಶ ಈಗ ಅನುಷ್ಠಾನ
ಏನೆಲ್ಲ ಅನುಕೂಲ?
* ಪೊಲೀಸರ ಕರ್ತವ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ತರಬಹುದು.
* ಪ್ರಕರಣಗಳ ತನಿಖೆ, ಕೋರ್ಟ್ ವಿಚಾರಣೆಗೆ ಸಾಕ್ಷ್ಯಾಧಾರ ಲಭ್ಯ.
* ಪೊಲೀಸರ ವಿರುದ್ಧ ಕೇಳಿಬರುವ ದೂರುಗಳ ಪರಿಶೀಲನೆಗೆ ಅವಕಾಶ.
* ಕ್ಯಾಮರಾ ಇದ್ದರೆ ಪೊಲೀಸರು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಾರೆ.
* ಜನರಿಂದ ಸುಲಿಗೆ, ಬ್ಲಾ್ಯಕ್​ವೆುೕಲ್, ಹಣ ಬೇಡಿಕೆ ಪ್ರಕರಣ ಇಳಿಯುತ್ತವೆ.
* ಪೊಲೀಸರ ವಿರುದ್ಧವೂ ಕೆಲವೊಮ್ಮೆ ಸುಳ್ಳು ಆರೋಪ ಬರುತ್ತವೆ. ಅದಕ್ಕೆ ಕಡಿವಾಣ.
ಮುಂಬರುವ IPL ಹರಾಜಿಗೆ 10 ತಂಡಗಳ ಖಾತೆಯಲ್ಲಿ ಬಾಕಿ ಉಳಿದಿರುವ ಮೊತ್ತ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 11 =
Remember me
