ವಿಜಯಪುರ: ತಾತ್ಕಾಲಿಕವಾಗಿ ಪೋಡಿ ಮಾಡಿಸಲು ಬಂದ ರೈತನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಸರ್ವೇಯರ್, ಲೋಕಾಯುಕ್ತರ ಬಲೆಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ.
ಸಿಂದಗಿಯ ಸರ್ವೇಯರ್ ಸುರೇಶ ಮಾಳಿ ಬಳಿ ತನ್ನ ಜಮೀನಿಗೆ ತಾತ್ಕಾಲಿಕ ಪೋಡಿ ಮಾಡಿಸಿ ಕೊಡುವಂತೆ ಆಲಮೇಲ ಪಟ್ಟಣದ ರೈತರೊಬ್ಬರು ಬಂದಿದ್ದರು. ಈ ವೇಳೆ ಸರ್ವೇಯರ್ ರೈತನ ಬಳಿ ಸುಮಾರು 28 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈಗಾಗಲೇ ಮುಂಗಡವಾಗಿ 18 ಸಾವಿರ ರೂ.ಗಳನ್ನು ಪಡೆದಿಕೊಂಡಿದ್ದರು. ಮಂಗಳವಾರ (ನ.1) ರೈತನಿಂದ ಬಾಕಿ ಉಳಿದ 10 ಸಾವಿರ ರೂ.ಗಳನ್ನು ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಸರ್ವೇಯರ್​​ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಎಸ್​.ಪಿ. ಅನಿತಾ ಹದ್ದನ್ನವರ್​ ನೇತೃತ್ವದಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಈ ಕಾರ್ಯಾಚರಣೆಯಲ್ಲಿ ಡಿವೈಎಸ್​ಪಿ ಅರುಣ ನಾಯಕ, ಇನ್ಸ್​​ಪೆಕ್ಟರ್ ಆನಂದ ಠಕ್ಕಣ್ಣನವರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಸಾಕ್ಷಿ ಸಮೇತವಾಗಿ ಸಿಕ್ಕಿಬಿದ್ದ ಸರ್ವೇಯರ್​​ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
