ಶೃಂಗೇರಿ:ಅಂದಾಜು 70 ವರ್ಷಗಳ ನಂತರ ಶೃಂಗೇರಿ ಶ್ರೀ ವಿದ್ಯಾಶಂಕರ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆ ಸೂರ್ಯಕಿರಣಗಳು ಲಿಂಗವನ್ನು ರ್ಸ³ಸಿವೆ. ಶುಕ್ರವಾರ ಬೆಳಗ್ಗೆ 6.45ರಿಂದ 8 ಗಂಟೆವರೆಗೆ ಶ್ರೀ ವಿದ್ಯಾಶಂಕರ ಲಿಂಗದ ಮೇಲೆ ಸೂರ್ಯನ ಕಿರಣಗಳು ರ್ಸ³ಸಿವೆ. ಈ ಸಂದರ್ಭದಲ್ಲಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಿದರು. ನಂತರ ಶ್ರೀ ಶಾರದಾ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ಗುರುನಿವಾಸಕ್ಕೆ ತೆರಳಿದರು.
ಶ್ರೀ ವಿದ್ಯಾಶಂಕರ ಲಿಂಗವನ್ನು ಸೂರ್ಯಕಿರಣಗಳು ರ್ಸ³ಸಿರುವ ಅಪರೂಪದ ದೃಶ್ಯವನ್ನು ಪುರಾತತ್ವ ಶಾಸ್ತ್ರಜ್ಞ ಇಲಾಖೆ ದೃಢಪಡಿಸಿದೆ. ಆದರೆ ಕರೊನಾ ವೈರಸ್ ಹರಡುವಿಕೆ ತಡೆಯುವ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಶ್ರೀ ವಿದ್ಯಾಶಂಕರ ದೇವಾಲಯ ಬಂದ್ ಆಗಿತ್ತು. ಈ ಅಪರೂಪದ ದೃಶ್ಯವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ.
ಶ್ರೀ ವಿದ್ಯಾಶಂಕರ ದೇವಾಲಯ ಶ್ರೀಚಕ್ರದ ಮೇರು ಪ್ರಸ್ತಾರದಂತಿದೆ. ಐತಿಹ್ಯದಂತೆ ಈ ದೇವಾಲಯ ಕ್ರಿ.ಶ. 1338ರಲ್ಲಿ ನಿರ್ವಿುಸಲ್ಟಟ್ಟಿತ್ತು. ಶಿಲ್ಪ ಸಾಮ್ರಾಟದ್ವಯರಾದ ಜಕಣಾಚಾರಿ ಮತ್ತು ಡಕಣಾಚಾರಿ ಅವರ ಕಲ್ಪನೆಯಂತೆ ಹರಿಹರರಾಯರಿಂದ ದೇಗುಲವನ್ನು ಕಟ್ಟಿಸಿದ ಎಂಬ ಪ್ರತೀತಿ ಇದೆ. ಈ ದೇವಾಲಯದ ಒಳಭಾಗದಲ್ಲಿ 0.46 ಮೀಟರ್ ಎತ್ತರದ ಸುಂದರವಾದ ಶ್ರೀ ವಿದ್ಯಾಶಂಕರ ಲಿಂಗವಿದೆ. ದೇಗುಲದ ಒಳಭಾಗದಲ್ಲಿ 12 ಕಲ್ಲಿನ ರಾಶಿ ಕಂಬಗಳ ಮಂಟಪವಿದೆ. ಒಂದೊಂದು ರಾಶಿ ಕಂಬಗಳಲ್ಲಿ ಸೌರ ಪಥವನ್ನು ಗುರುತಿಸಬಹುದಾಗಿದೆ. 12 ರಾಶಿಯಲ್ಲಿ ಚಲಿಸುವ ಸೂರ್ಯನ ಬೆಳಕು ಕರಾರುವಕ್ಕಾಗಿ ಈ 12 ರಾಶಿಗಳ ಕಂಬಗಳ ಮೇಲೆ ಬೀಳುತ್ತದೆ. ಖಚಿತವಾದ ಕಾಲದ ಚಲನೆ, ಋತುವನ್ನು ತಿಳಿಸುತ್ತದೆ.
ಪೂರ್ವ ಬಾಗಿಲಿನಿಂದ ಪ್ರವೇಶ
ಸೌರಮಾನ ಪ್ರಾರಂಭವಾದ ದಿನ, ಅಂದರೆ ಮಾ.22ರಂದು ದೇವಾಲಯದ ಪೂರ್ವ ಬಾಗಿಲಿನಿಂದ ಸೂರ್ಯನ ಕಿರಣಗಳು ಮೇಷ ರಾಶಿಯ ಚಿತ್ರವಿರುವ ಕಂಬದ ಮೇಲೆ ಬೀಳುತ್ತದೆ. ಪ್ರತಿ ತಿಂಗಳು ಆಯಾ ರಾಶಿಯ ಕಂಬದ ಮೇಲೆ ಬೆಳಕು ಬದಲಾಗುತ್ತ ಫೆ.20ರಂದು ಮೀನ ರಾಶಿ ಚಿತ್ರವಿರುವ ಕಂಬದ ಮೇಲೆ ಕಿರಣಗಳು ಹರಡಿ ತನ್ನ ಒಂದು ವರ್ಷದ ಚಲನೆಯನ್ನು ಪೂರೈಸುತ್ತದೆ. ಪ್ರತಿ ರಾಶಿಯ ಪ್ರತಿನಿಧಿ ದೇವತೆಯನ್ನು ಆಯಾ ಕಂಬದ ಮೇಲೆ ಕೆತ್ತಲಾಗಿದೆ. ಎರಡೂ ಕಾಲಿನ ಮೇಲೆ ನಿಂತ ಭಂಗಿಯಲ್ಲಿರುವ ಸಿಂಹದ ಮುಂಗಾಲಿನ ಸಂದಿಯಿಂದ ಹಾಯ್ದುಬರುವ ಸೂರ್ಯನ ಕಿರಣಗಳು ನಿಗದಿತ ರಾಶಿಯಲ್ಲಿ ಚುಂಬಿಸುತ್ತದೆ. ಆಲಯದ ಗುಂಡುಕಲ್ಲಿನ ಮೇಲೆ ಅಕ್ಷಾಂಶ- ರೇಖಾಂಶಗಳನ್ನು ಸಹ ಕೆತ್ತಲಾಗಿದೆ. ಖಗೋಳ ಶಾಸ್ತ್ರದಲ್ಲಿ ಅಪಾರ ಪರಿಣತಿ, ವೈಜ್ಞಾನಿಕ ಅರಿವು ಆ ಕಾಲದಲ್ಲೇ ಇತ್ತು ಎಂಬುದಕ್ಕೆ ವಿದ್ಯಾಶಂಕರ ದೇವಾಲಯ ಸಾಕ್ಷಿಯಾಗಿದೆ.
ಕರೊನಾ ಮಣಿಸೋಣ: ಜನತಾ ಕರ್ಫ್ಯೂ ಬೆಂಬಲಿಸಿ, ವೈರಸ್ ಬಡಿದೋಡಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + five =
Remember me
