ಬೆಂಗಳೂರು:ಮಹಾನಗರದಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಶಂಕಿತ ಆರೋಪಿಯನ್ನು ಕೇರಳದಿಂದ ಬಂಧಿಸಿ ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ಕರೆತರಲಾಗಿದೆ ಎಂದು ಬೆಂಗಳೂರು ಸಿಟಿ ಆ್ಯಂಟಿ ಟೆರರ್ ಸೆಲ್ ಮೂಲಗಳು ತಿಳಿಸಿವೆ.
ಕೇರಳದ ಕೊಚ್ಚಿನ್​ನಿಂದ ಆರೋಪಿಯನ್ನು ಬೆಳಗ್ಗೆ 6.40ರ ಇಂಡಿಗೋ ವಿಮಾನದ ಮೂಲಕ ದೇವನಹಳ್ಳಿಗೆ ಕರೆತಂದಿರುವ ಪೊಲೀಸರು, ಬಳಿಕ ಎಫ್​ಎಸ್ಎಲ್​ಗೆ ಆತನನ್ನು ಕರೆದೊಯ್ದಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಗಳ ನೆರವಿನೊಂದಿಗೆ ಬೆಂಗಳೂರು ಆ್ಯಂಟಿ ಟೆರರ್ ಸೆಲ್​ ನಿರ್ದೇಶನದಂತೆ ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿತ್ತು. ಶೋಯಬ್ 12 ವರ್ಷ ಕಾಲ ತಲೆಮರೆಸಿಕೊಂಡಿದ್ದ. ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಾಗಿತ್ತು.
ಇದನ್ನೂ ಓದಿ:ಕೇರಳಕ್ಕೆ ತೆರಳಿದ ಶಂಕಿತ ಉಗ್ರ ಮದನಿ
ಬೆಂಗಳೂರಿನಲ್ಲಿ 2008ರ ಜುಲೈ 25ರಂದು ಒಂಭತ್ತು ಕಡೆ ಬಾಂಬ್ ಸ್ಫೋಟ ಸಂಭವಿಸಿತ್ತು. ದಾಳಿಯಲ್ಲಿ ಒಬ್ಬ ಮೃತಪಟ್ಟು, 20 ಜನ ಗಾಯಗೊಂಡಿದ್ದರು. ಕೇರಳದ ವಿವಾದಿತ ರಾಜಕೀಯ, ಧಾರ್ಮಿಕ ನಾಯಕ ಪಿಡಿಪಿಯ ಅಬ್ದುಲ್ ನಾಸಿರ್ ಮದನಿಯನ್ನೂ ಪೊಲೀಸರು ಬಂಧಿಸಿದ್ದರು. (ದಿಗ್ವಿಜಯ ನ್ಯೂಸ್)
ಬೆಂಗಳೂರು ಸರಣಿ ಸ್ಫೋಟ ಆರೋಪಿ 12 ವರ್ಷದ ಬಳಿಕ ಕೇರಳದಲ್ಲಿ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 19 =
Remember me
