ಬೆಂಗಳೂರು:ಶಂಕಿತ ಉಗ್ರ ಜುನೈದ್​ ಸಹಚರನನ್ನು ಆರ್​.ಟಿ. ನಗರದ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್​ ಅರ್ಷದ್​ ಖಾನ್​ ಎಂದು ಗುರುತಿಸಲಾಗಿದೆ.
ಈ ಅರ್ಷದ್​ ಖಾನ್, ಪೊಲೀಸರ​ ಕೈಗೆ ಸಿಗದೆ ನಾಲ್ಕು ವರ್ಷದಿಂದ ತಲೆಮರೆಸಿಕೊಂಡಿದ್ದ. ಇದೀಗ ಬಲೆಗೆ ಬಿದ್ದಿದ್ದಾನೆ. ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ನಗರದಲ್ಲಿ ಐವರು ಶಂಕಿತ ಉಗ್ರರನ್ನು ಬಂಧನ ಮಾಡಿದ್ದರು. ಐವರಿಗೆ ಗ್ರೆನೇಡ್ ತಂದು ಕೊಟ್ಟಿದ್ದ ಜುನೈದ್ ವಿದೇಶಕ್ಕೆ ಎಸ್ಕೇಪ್ ಆಗಿದ್ದ. 2017ರಲ್ಲಿ ನೂರ್ ಅಹಮ್ಮದ್ ಎಂಬಾತನನ್ನು ಕಿಡ್ನಾಪ್ ಮಾಡಿ ಜುನೈದ್​ ಕೊಲೆ ಮಾಡಿದ್ದ.
ಇದನ್ನೂ ಓದಿ:ಶೋರೂಮ್​ನಿಂದ KTM ಡ್ಯೂಕ್​ ಬೈಕ್​ ಕಳ್ಳತನ: ಪೆಟ್ರೋಲ್​ ಬಂಕ್​ನಲ್ಲಿ ಗೂಗಲ್​ ಪೇ ನಾಟಕವಾಡಿ ಸಿಕ್ಕಬಿದ್ದ ಯುವಕ!
ಈ ಕೊಲೆ ಪ್ರಕರಣದಲ್ಲಿ ಅರ್ಷದ್​ ಖಾನ್​ ಸಹ ಆರೋಪಿಯಾಗಿದ್ದ. ಆದರೆ, ಈ ಸಂದರ್ಭದಲ್ಲಿ ಅರ್ಷದ್ ಖಾನ್ ಅಪ್ರಾಪ್ತನಾಗಿದ್ದ. ಇದಾದ ಬಳಿಕ ಸಾಕಷ್ಟು ಅಕ್ರಮ ಚಟುವಟಿಕೆಯಲ್ಲಿ ಈತ ಭಾಗಿಯಾಗಿದ್ದ. ಈತನ ಮೇಲೆ ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ 17 ಕೇಸ್​ಗಳಿವೆ.
ಪೊಲೀಸರು ಬಂಧನಕ್ಕೆ ಬಂದರೆ ಈತ ಕತ್ತು ಕೊಯ್ದುಕೊಳ್ತಿದ್ದ. ಪೊಲೀಸರು ಹೆದರಿ ವಾಪಸ್ಸು ಹೋಗಲಿ ಎಂದು ಆತ್ಮಹತ್ಯೆ ಹೈಡ್ರಾಮಾ ಮಾಡ್ತಿದ್ದ. ಸದ್ಯ ಅರ್ಷದ್ ಖಾನ್​ನನ್ನು ವಶಕ್ಕೆ ಪಡೆದಿರುವ ಆರ್​ಟಿ ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶಂಕಿತ ಜುನೈದ್ ಸಂಪರ್ಕದಲ್ಲೇನಾದ್ರು ಇದ್ದಾನಾ? ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನಾ ಎಂದು ತನಿಖೆ ನಡೆಸಲಾಗುತ್ತಿದೆ.(ದಿಗ್ವಿಜಯ ನ್ಯೂಸ್​)
ಶೋರೂಮ್​ನಿಂದ KTM ಡ್ಯೂಕ್​ ಬೈಕ್​ ಕಳ್ಳತನ: ಪೆಟ್ರೋಲ್​ ಬಂಕ್​ನಲ್ಲಿ ಗೂಗಲ್​ ಪೇ ನಾಟಕವಾಡಿ ಸಿಕ್ಕಬಿದ್ದ ಯುವಕ!

ವೇಗದ ಬೌಲರ್​ ಆಗಬೇಕಾಗಿದ್ದ ಕನ್ನಡಿಗ ಮನು ಈಗ ಜಾವೆಲಿನ್​ ಥ್ರೋ ತಾರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 15 =
Remember me
